• Home
  • »
  • News
  • »
  • sports
  • »
  • T20 World Cup 2022: ಟಿ20 ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್​ ಔಟ್​, ಕೆರೀಬಿಯನ್ ತಂಡಕ್ಕೆ ಬಾರಿ ಮುಖಭಂಗ

T20 World Cup 2022: ಟಿ20 ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್​ ಔಟ್​, ಕೆರೀಬಿಯನ್ ತಂಡಕ್ಕೆ ಬಾರಿ ಮುಖಭಂಗ

ಐರ್ಲೆಂಡ್ ತಂಡಕ್ಕೆ ಜಯ

ಐರ್ಲೆಂಡ್ ತಂಡಕ್ಕೆ ಜಯ

T20 World Cup 2022: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಸೂಪರ್ 12 ತಲುಪದೆ ಟಿ20 ವಿಶ್ವಕಪ್​ 2022ರಿಂದ ಹೊರಬಿದಿದ್ದು, ಐರ್ಲೆಂಡ್​ ತಂಡ ಸೂಪರ್ 12 ಹಂತಕ್ಕೆ ತಲುಪಿದೆ.

  • Share this:

ಶುಕ್ರವಾರ ನಡೆದ ಐಸಿಸಿ ಟಿ20 ವಿಶ್ವಕಪ್‌ನ (T20 World Cup 2022) ಬಿ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಐರ್ಲೆಂಡ್ (Ireland ) ಅಬ್ಬರಿಸುವ ಮೂಲಕ ಸೂಪರ್ 12ಕ್ಕೆ ಪ್ರವೇಶಿಸಿದೆ. ವೆಸ್ಟ್ ಇಂಡೀಸ್ ನೀಡಿದ 147 ರನ್ ಗಳ ಗುರಿಯನ್ನು ಐರ್ಲೆಂಡ್ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ತಲುಪಿತು. ಐರ್ಲೆಂಡ್‌ನ ಗೆಲುವಿನಲ್ಲಿ ಪಾಲ್ ಸ್ಟಿರ್ಲಿಂಗ್ ಪ್ರಮುಖ ಪಾತ್ರ ವಹಿಸಿದರು. ಅವರು 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ಅಜೇಯರಾಗಿ ಮರಳಿದರು. ಅವರೊಂದಿಗೆ ಲೊರ್ಕನ್ ಟಕರ್ ಕೂಡ 35 ಎಸೆತಗಳಲ್ಲಿ 45 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಇಬ್ಬರು ಆಟಗಾರರ ನಡುವೆ ಎರಡನೇ ವಿಕೆಟ್‌ಗೆ 10 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ಆಡಿದರು.


ಸೂಪರ್ 12 ಹಂತಕ್ಕೆ ಐರ್ಲೆಂಡ್:


ನಾಯಕ ಆಂಡಿ ಬಲ್ಬಿರ್ನಿ ರೂಪದಲ್ಲಿ ಐರ್ಲೆಂಡ್‌ನ ಏಕೈಕ ವಿಕೆಟ್ ಪತನವಾಯಿತು. 23 ಎಸೆತಗಳಲ್ಲಿ 37 ರನ್‌ಗಳ ಮಹತ್ವದ ಇನ್ನಿಂಗ್ಸ್‌ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸಿಡಿದವು. ಔಟಾಗುವ ಮೊದಲು, ಆಂಡಿ ಮೊದಲ ವಿಕೆಟ್‌ಗೆ 45 ಎಸೆತಗಳಲ್ಲಿ 73 ರನ್‌ಗಳ ಜೊತೆಯಾಟವನ್ನು ಸ್ಟರ್ಲಿಂಗ್‌ನೊಂದಿಗೆ ಆಡುವ ಮೂಲಕ ಉತ್ತಮ ಜೊತೆಯಾಟವಾಡಿದರು. ವೆಸ್ಟ್ ಇಂಡೀಸ್‌ ಪರ ಅಕಿಲ್ ಹೊಸೈನ್‌ ಕೇವಲ 1 ವಿಕೆಟ್​ ಪಡೆದರು. ಅವರು ತಮ್ಮ 4 ಓವರ್‌ಗಳಲ್ಲಿ 38 ರನ್ ನೀಡಿ ಐರ್ಲೆಂಡ್ ನಾಯಕನ ವಿಕೆಟ್ ಪಡೆದರು. ಇದರ ಹೊರತಾಗಿ ಯಾವುದೇ ಬೌಲರ್‌ಗಳು ಎಫೆಕ್ಟ್ ತೋರಿಸಲು ವಿಫಲರಾದರು.



ಬ್ಯಾಟಿಂಗ್​ನಲ್ಲಿ ಎಡವಿದ ವೆಸ್ಟ್ ಇಂಡೀಸ್:


ಇದಕ್ಕೂ ಮೊದಲು, ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬ್ರೆಂಡನ್ ಕಿಂಗ್ 48 ಎಸೆತಗಳಲ್ಲಿ ಗರಿಷ್ಠ 62 ರನ್ ಗಳಿಸಿದರು. ಈ ಪಂದ್ಯಾವಳಿ ವೆಸ್ಟ್ ಇಂಡೀಸ್‌ಗೆ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನಿಂದ ಸೋತರು.


ಇದನ್ನೂ ಓದಿ: T20 WC IND vs PAK: ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನಕ್ಕೆ ಬಿಗ್ ಶಾಕ್, ಸ್ಟಾರ್ ಬ್ಯಾಟ್ಸ್ ಮನ್ ತಲೆಗೆ ಗಾಯ


ಸೂಪರ್ 12 ಹಂತಕ್ಕೆ ಇನ್ನೊಂದು ತಂಡ ಮಾತ್ರ ಬಾಕಿ:


ಐರ್ಲೆಂಡ್ ಪರ ಸ್ಪಿನ್ನರ್ ಜರೆತ್ ಡೆಲಾನಿ 16 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿ ವೃತ್ತಿಜೀವನದ ಅತ್ಯುತ್ತಮ T20 ಪ್ರದರ್ಶನ ನೀಡಿದರು. ಬಿ ಗುಂಪಿನ ಎಲ್ಲಾ ನಾಲ್ಕು ತಂಡಗಳು ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ರೇಸ್‌ನಲ್ಲಿವೆ. ಜಿಂಬಾಬ್ವೆ ಕೊನೆಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಡಬೇಕಿದ್ದು, ಗೆಲ್ಲುವ ತಂಡ ಸೂಪರ್ 12 ತಲುಪಲಿದೆ.



 ಮಾಜಿ ಚಾಂಪಿಯನ್ ಶ್ರೀಲಂಕಾ ಮತ್ತು ನೆದರ್ಲೆಂಡ್ ತಂಡಗಳು ಎ ಗುಂಪಿನಿಂದ ಸೂಪರ್ 12 ತಲುಪಿವೆ. ಅಕ್ಟೋಬರ್ 22 ರಿಂದ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಪಂದ್ಯಗಳು ನಡೆಯಲಿವೆ. ಒಂದನೇ ಸುತ್ತಿನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಈ ಪೈಕಿ ನಾಲ್ಕು ತಂಡಗಳು ಸೂಪರ್ 12 ತಲುಪಲಿವೆ.


ಇದನ್ನೂ ಓದಿ: IND vs PAK: ಟೀಂ ಇಂಡಿಯಾ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಭಾರತ-ಪಾಕ್​ ಪಂದ್ಯದ ಬಗ್ಗೆ ಸಿಕ್ತು ಬಿಗ್​ ಅಪ್​ಡೇಟ್​


ಭಾರತ-ಪಾಕ್​ ಸೆಣಸಾಟ:


ಅಕ್ಟೋಬರ್ 23ರ ಭಾರತ-ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುವುದರಿಂದ ಪಂದ್ಯದ ದಿನದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ಹೌಸ್‌ಫುಲ್ ಆಗಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈಗಾಗಲೇ ಘೋಷಿಸಿದೆ.  ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನದ ವಿರುದ್ಧ ಆಡುವ XI ಅನ್ನು ಆಯ್ಕೆ ಮಾಡಿರುವುದಾಗಿ ಈಗಾಗಲೇ ಹೇಳಿದ್ದಾರೆ.


Published by:shrikrishna bhat
First published: