Kieron Pollard Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವೆಸ್ಟ್ ಇಂಡೀಸ್ ಆಟಗಾರ ಕೀರನ್ ಪೊಲಾರ್ಡ್

ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ (International Cricket) ನಿವೃತ್ತಿಯಾಗಲು ನಿರ್ಧರಿಸಿದ್ದಾರೆ.

ಕೀರಾನ್ ಪೋಲಾರ್ಡ್

ಕೀರಾನ್ ಪೋಲಾರ್ಡ್

  • Share this:
ಐಪಿಎಲ್‌ನಲ್ಲಿ (IPL) ಆಡಲು ಭಾರತಕ್ಕೆ ಆಗಮಿಸಿರುವ ವೆಸ್ಟ್ ಇಂಡೀಸ್ (West Indies) ಆಲ್‌ರೌಂಡರ್ ಕೀರಾನ್ ಪೊಲಾರ್ಡ್ (Kieron Pollard) ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ (International Cricket) ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ವಿಶ್ವದ ವಿವಿಧ ಟಿ20 ಲೀಗ್ ಗಳಲ್ಲಿ ದಾಖಲೆ ಬರೆದಿರುವ ಪೊಲಾರ್ಡ್ ಅವರ ದಿಢೀರ್ ನಿರ್ಧಾರ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಪೋಲಾರ್ಡ್​ ವೆಸ್ಟ್ ಇಂಡೀಸ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 15 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ತೆರೆ ಎಳೆದಿದ್ದಾರೆ. ಸದ್ಯ ಐಪಿಎಲ್​ 2022ರ 15ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಪೋಲಾರ್ಡ್, ಭಾರತದಿಂದಲೇ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಇನ್ನು, ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಭಾರತ ಪ್ರವಾಸದಲ್ಲಿ ಪೋಲಾರ್ಡ್ ನಾಯಕನಾಗಿ (Captain) ತಂಡವನ್ನು ಮುನ್ನಡೆಸಿದ್ದರು.

ಟ್ವಟರ್​ನಲ್ಲಿ ನಿವೃತ್ತಿ ಘೋಷಿಸಿದ ಪೋಲಾರ್ಡ್:

ಕೀರಾನ್ ಪೋಲಾರ್ಡ್ ಕಳೆದ ರಾತ್ರಿ ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ತಮ್ಮ ನಿವೃತ್ತಿಯನ್ನು ಅಧಿಕೃತಗೊಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪ್ರಮುಖವಾಗಿ ಟೀಮ್‌ ಮ್ಯಾನೇಜ್ಮೆಂಟ್‌ ಮತ್ತು ಕೋಚ್‌ ಫಿಲ್‌ ಸಿಮನ್ಸ್‌ ನನಗೆ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ.

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ನನ್ನ ಮೇಲೆ ಇಟ್ಟ ಭರವಸೆಯಿಂದಲೇ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದೆ. ವಿಂಡೀಸ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾದ ರಿಕಿ ಸ್ಕೆರಿಟ್‌ ಅವರಿಗೆ ಈ ಮೂಲಕ ಧನ್ಯವಾದ ತಿಳಿಸಲು ಬಯಸುತ್ತೇನೆ. ನನ್ನ ನಾಯಕತ್ವದ ದಿನಗಳಲ್ಲಿ ಅವರು ಉತ್ತಮ ಬೆಂಬಲ ನೀಡಿ, ಪ್ರೋತ್ಸಾಹಿಸಿದ್ದರು‘ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2022 Yuzvendra Chahal: ಯುಜ್ವೇಂದ್ರ ಚಹಾಲ್ ಮೊದಲ ಹ್ಯಾಟ್ರಿಕ್ ಐಪಿಎಲ್​ನ 21ನೇ ಹ್ಯಾಟ್ರಿಕ್ ಆಯ್ತು!

ಪೋಲಾರ್ಡ್ ಅಂತರಾಷ್ಟ್ರೀಯ ವೃತ್ತಿ ಜೀವನ:

2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇನ್ನು, 2022ರ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ವಿಂಡೀಸ್‌ ಪರ ತಮ್ಮ ಕೊನೆಯ ಪಂದ್ಯವನ್ನಾಡಿದ್ದಾರೆ.

ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೀರಾನ್ ಪೋಲಾರ್ಡ್ 123 ಏಕದಿನ ಪಂದ್ಯಗಳನ್ನು ಮತ್ತು 101 ಟಿ20 ಪಂದ್ಯಗಳನ್ನು ಹಾಗೂ ಐಪಿಎಲ್​ ನಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ 123 ಏಕದಿನ ಪಂದ್ಯಗಳಿಂದ 2706 ರನ್‌ ಮತ್ತು 55 ವಿಕೆಟ್ ಪಡೆದರೆ ಟಿ20 ಕ್ರಿಕೆಟ್‌ನಲ್ಲಿ 101 ಪಂದ್ಯಗಳಲ್ಲಿ 1569 ರನ್‌ ಹಾಗೂ 44 ವಿಕೆಟ್ ಸಂಪಾದಿಸಿದ್ದಾರೆ. ಇನ್ನು, ಐಪಿಎಲ್​ ನಲ್ಲಿ 184 ಪಂದ್ಯಗಳಿಂದ 3350 ರನ್ ಗಳಿಸಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಬೌಲರ್​ಗಳನ್ನು ದಂಡಿಸಿದ ದಾಂಡಿಗರಿವರು, ಒಂದೇ ಓವರ್​ನಲ್ಲಿ ಹೆಚ್ಚು ಬೌಂಡರಿ ಸಿಡಿಸಿದವರು ಯಾರು ಗೊತ್ತಾ?

ಪೋಲಾರ್ಡ್ ಸಾಧನೆ:

ವೃತ್ತಿ ಬದುಕಿನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಪೊಲಾರ್ಡ್‌, 2021ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಓವರ್‌ ಒಂದರಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ವಿಶೇಷ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದರು.

ಭಾರತದ ಎದುರು ಕೊನೆಯ ಅಂತರಾಷ್ಟ್ರೀಯ ಪಂದ್ಯ:

ಇನ್ನು, ಕೀರಾನ್ ಪೋಲಾರ್ಡ್ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಭಾರತದ ಎದುರು ಆಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಮತ್ತು ಟಿ20 ಕ್ರಿಕಟ್​ ನಲ್ಲಿ ಪೋಲಾರ್ಡ್ ನಾಯನಅಗಿ ಆಟವಾಡಿದ್ದರು. ಇದು ಅವರ ವೃತ್ತಿ ಜೀವನದ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಿದೆ ಹಾಗೂ ವೆಸ್ಟ್ ಇಂಡೀಸ್ ಪರ ಆಡಿದ ಕೊನೆಯ ಪಂದ್ಯವೂ ಇದೆ.
Published by:shrikrishna bhat
First published: