ಏಕದಿನ ಕ್ರಿಕೆಟ್​​​ನಲ್ಲಿ ವಿಶ್ವದಾಖಲೆ ಬರೆದ ಸಿಕ್ಸರ್​ಗಳ ಸರದಾರ 'ಕ್ರಿಸ್ ಗೇಲ್'

news18
Updated:July 29, 2018, 6:01 PM IST
ಏಕದಿನ ಕ್ರಿಕೆಟ್​​​ನಲ್ಲಿ ವಿಶ್ವದಾಖಲೆ ಬರೆದ ಸಿಕ್ಸರ್​ಗಳ ಸರದಾರ 'ಕ್ರಿಸ್ ಗೇಲ್'
news18
Updated: July 29, 2018, 6:01 PM IST
ನ್ಯೂಸ್ 18 ಕನ್ನಡ

ವೆಸ್ಟ್​​ ಇಂಡೀಸ್​​​ ಕ್ರಿಕೆಟ್ ತಂಡದ ದೈತ್ಯ ಬ್ಯಾಟ್ಸ್​ಮನ್​​ ಕ್ರೀಸ್ ​ಗೇಲ್ ಏಕದಿನ ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈಗಾಗಲೇ ಐಪಿಎಲ್​ನಲ್ಲಿ ಬರೋಬ್ಬರಿ 292 ಸಿಕ್ಸ್​​​​ ಸಿಡಿಸಿ ಅತ್ಯಧಿಕ ಸಿಕ್ಸ್​ರ್​​ ಬಾರಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಏಕದಿನ ಕ್ರಿಕೆಟ್​​ನಲ್ಲೂ ಹೊಸ ದಾಖಲೆ ನಿರ್ಮಿಸಿದ್ದಾರೆ. ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಗೇಲ್ 5 ಸಿಕ್ಸರ್​​ ಸಿಡಿಸಿ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​​​ ಬಾರಿಸಿದ ವಿಶ್ವದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಗೇಲ್ 270 ಸಿಕ್ಸ್​​ ಸಿಡಿಸಿ ಗರಿಷ್ಠ ಸಿಕ್ಸರ್​​ ಸಿಡಿಸಿದ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದರು. ಇದೀಗ ಗೇಲ್ ಖಾತೆಗೆ 275 ಸಿಕ್ಸ್​ಗಳು ಸೇರಿದ್ದು, ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ(270 ಸಿಕ್ಸರ್) ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಹೆಚ್ಚು ಸಿಕ್ಸ್ ಬಾರಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ಶಾಹಿದ್ ಆಫ್ರಿದಿ 351 ಸಿಕ್ಸ್ ಸಿಡಿಸಿ ಮೊದಲನೇ ಸ್ಥಾನ ಅಲಂಕರಿಸಿದ್ದರೆ, ಭಾರತ ತಂಡದ ಮಾಜಿ ನಾಯಕ ಎಂ. ಎಸ್. ಧೋನಿ 217 ಸಿಕ್ಸ್​ ಸಿಡಿಸಿ ನಾಲ್ಕನೇ ಸ್ಥಾನ, ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ 204 ಸಿಕ್ಸ್ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...