• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Mirabai Chanu: ಬೆಳ್ಳಿ ಗೆದ್ದ ಚಾನುಗೆ 1 ಕೋಟಿ ರೂ ಪುರಸ್ಕಾರದ ಜೊತೆ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಬಡ್ತಿ

Mirabai Chanu: ಬೆಳ್ಳಿ ಗೆದ್ದ ಚಾನುಗೆ 1 ಕೋಟಿ ರೂ ಪುರಸ್ಕಾರದ ಜೊತೆ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಬಡ್ತಿ

ಮೀರಾ ಬಾಯಿ ಚಾನು

ಮೀರಾ ಬಾಯಿ ಚಾನು

ಮೀರಾಬಾಯಿ ಚಾನು ಅವರಿಗೆ ರಾಜ್ಯದಲ್ಲಿ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ (ಕ್ರೀಡೆ) ಆಗಿ ಬಡ್ತಿ ನೀಡಲಾಗಿದೆ. ಅಲ್ಲದೇ ಅವರಿಗೆ ಒಂದು ಕೋಟಿ ನಗದು ಪುರಸ್ಕಾರವನ್ನು ಕೂಡ ನೀಡಲಾಗುವುದು ಎಂದು ಘೋಷಿಸಿದ್ದಾರೆ.

  • Share this:

    ಟೋಕಿಯೋ ಒಲಂಪಿಕ್ಸ್​ನಲ್ಲಿ ಮಹಿಳೆಯರ ವೇಟ್​ ಲಿಫ್ಟಿಂಗ್​ ವಿಭಾಗದಲ್ಲಿ ಬೆಳ್ಳಿ ಗೆದ್ದಿರುವ ಮೀರಾ ಬಾಯಿ ಚಾನುಗೆ ಬಂಗಾರ ಪದಕ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಮೀರಾ ಎದುರು ಮೊದಲ ಸ್ಥಾನ ಗೆದ್ದಿದ್ದ ಚೀನಾದ ಹೋಹು ಜಿಝಿಹಿ ಡೋಪಿಂಗ್​ ಆರೋಪ ಎದುರಿಸುತ್ತಿರುವ ಹಿನ್ನಲೆ ಚಾನು ಚಿನ್ನ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಸಂಭ್ರದ ನಡುವೆಯೇ ಇಂದು ದೇಶಕ್ಕೆ ಮರಳಿದ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಈ ನಡುವೆ ಅವರನ್ನು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಮಣಿಪುರ ಮುಖ್ಯಮಂತ್ರಿ ಎನ್​ ಬಿರೆನ್​ ಸಿಂಘ್​ ಘೋಷಣೆ ಮಾಡಿದ್ದಾರೆ.


    ಮೀರಾಬಾಯಿ ಚಾನು ಅವರಿಗೆ ರಾಜ್ಯದಲ್ಲಿ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ (ಕ್ರೀಡೆ) ಆಗಿ ಬಡ್ತಿ ನೀಡಲಾಗಿದೆ. ಅಲ್ಲದೇ ಅವರಿಗೆ ಒಂದು ಕೋಟಿ ನಗದು ಪುರಸ್ಕಾರವನ್ನು ಕೂಡ ನೀಡಲಾಗುವುದು ಎಂದು ಘೋಷಿಸಿದ್ದಾರೆ.


    26 ವರ್ಷದ ಮೀರಾಬಾಯಿ ಚಾನು 2018ರಲ್ಲಿ ಕಾಮನ್​​ವೆಲ್ತ್​​​ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಚಾನು ಒಲಿಂಪಿಕ್ಸ್​​ ಇತಿಹಾಸದಲ್ಲಿ ವೈಯಕ್ತಿಕವಾಗಿ ಪದಕ ಪಡೆದ 5ನೇ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಅವರ ಈ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಈ ಹಿನ್ನಲೆ ರಾಜ್ಯದಲ್ಲಿ ಕೂಡ ವಿಶ್ವದರ್ಜೆಯ ವೇಟ್​ ಲಿಫ್ಟಿಂಗ್​ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ


    ಇದೇ ವೇಳೆ 2014ರಲ್ಲಿ ಕಾಮನ್​ ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಜುಡೋಕಾ ಲಿಕ್ಮಾಬಮ್​ ಸುಶೀಲಾ ದೇವಿ ಅವರಿಗೂ ಕೂಡ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ, ಕಾನ್ಸ್​ಟೇಬಲ್​ ಹುದ್ದೆಯಿಂದ ಅವರಿಗೆ ಸಬ್​ ಇನ್ಸ್​ಪೆಕ್ಟರ್​ ಆಗಿ ಬಡ್ತಿ ನೀಡಲಾಗಿದೆ.


    ಜೊತೆಗೆ ಟೋಕಿಯೋ ಒಲಂಪಿಕ್ಸ್​ನಲ್ಲಿ ಪ್ರದರ್ಶನ ತೋರುತ್ತಿರುವ ಎಲ್ಲಾ ರಾಜ್ಯದ ಸ್ಪರ್ಧಿಗಳಿಗೂ 25 ಲಕ್ಷ ರೂವನ್ನು ಬಹುಮಾನ ನೀಡಲಾಗುವುದು ಎಂದು ಮಣಿಪುರ ಸಿಎಂ ತಿಳಿಸಿದ್ದಾರೆ. ಚಾನು, ದೇವಿ ಮತ್ತು ಬಾಕ್ಸರ್​ ಮೇರಿ ಕೋಮ್​ ಸೇರಿದಂತೆ ಮಣಿಪುರದ ಐದು ಕ್ರೀಡಾಳುಗಳು ಟೋಕಿಯೋ ಒಲಂಪಿಕ್ಸ್​ನಲ್ಲಿ ಪ್ರದರ್ಶನ ತೋರುತ್ತಿದ್ದಾರೆ


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

    Published by:Seema R
    First published: