Achinta Sheuli: ತಾಯಿಯ ಹರಿದ ಸೀರೆಯಲ್ಲಿ ಚಿನ್ನದ ಪದಕ ಇಟ್ಟಿದ್ದಾರಂತೆ ಈ ಕ್ರೀಡಾಪಟು, ಕಾರಣ ಏನು ಗೊತ್ತಾ?

ಭಾರತದ ವೈಟ್‌ಲಿಫ್ಟರ್ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. 143 ಕೆ.ಜಿ ಭಾರ ಎತ್ತುವ ಮೂಲಕ ಅತ್ಯಧಿಕ ವೈಟ್ ಲಿಫ್ಟ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಇಷ್ಟೇ ಅಲ್ಲ ಇದು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯಾಗಿದೆ. ಇನ್ನು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 170 ಕೆ.ಜಿ ಎತ್ತುವ ಮೂಲಕ ಒಟ್ಟು 313 ಕೆ.ಜಿ ವೈಟ್ ಲಿಫ್ಟ್ ಮಾಡುವ ಮೂಲಕ ಭಾರತಕ್ಕೆ ಚಿನ್ನದ ಕಿರೀಟ ತೊಡಿಸಿದರು. ಅವರ ಜೀವನ ಕಥೆ ಬಗ್ಗೆ ಈ ಲೇಖನದಲ್ಲಿ ಇಂದು ತಿಳಿಯೋಣ ಬನ್ನಿ.

ಅಚಿಂತಾ ಶೆಯುಲಿ

ಅಚಿಂತಾ ಶೆಯುಲಿ

  • Share this:
ಭಾರತದ ವೈಟ್‌ಲಿಫ್ಟರ್ ಅಚಿಂತಾ ಶೆಯುಲಿ (Achinta Sheuli) ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. 143 ಕೆ.ಜಿ ಭಾರ ಎತ್ತುವ ಮೂಲಕ ಅತ್ಯಧಿಕ ವೈಟ್ ಲಿಫ್ಟ್ (Weight Lift) ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಇಷ್ಟೇ ಅಲ್ಲ ಇದು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ (Commonwealth Games) ಹೊಸ ದಾಖಲೆಯಾಗಿದೆ. ಇನ್ನು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 170 ಕೆ.ಜಿ ಎತ್ತುವ ಮೂಲಕ ಒಟ್ಟು 313 ಕೆ.ಜಿ ವೈಟ್ ಲಿಫ್ಟ್ ಮಾಡುವ ಮೂಲಕ ಭಾರತಕ್ಕೆ (India) ಚಿನ್ನದ ಕಿರೀಟ ತೊಡಿಸಿದರು. ಭಾರತಾಂಬೆಗೆ ಚಿನ್ನದ ಕೀರಿಟ ತೊಡಿಸಿದ ಈ ಯುವಕನ ಜೀವನ ಕಥೆ ಕೇಳಿದರೆ ನಿಜಕ್ಕೂ ಪಾಪ ಎಂದು ಅನಿಸುತ್ತದೆ. ಅವರ ಜೀವನ ಕಥೆ ಬಗ್ಗೆ ಈ ಲೇಖನದಲ್ಲಿ ಇಂದು ತಿಳಿಯೋಣ ಬನ್ನಿ.

ಅಚಿಂತಾ ಅವರ ಜೀವನ?
20 ವರ್ಷದ ಅಚಿಂತಾ ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ಈ ಕಾರಣಕ್ಕಾಗಿ, ಅವರ ಆರಂಭಿಕ ಜೀವನವು ಹೋರಾಟದಿಂದ ತುಂಬಿತ್ತು. ಅವರ ತಂದೆ ಕೂಲಿ ಕಾರ್ಮಿಕರಾಗಿದ್ದರು. ವೇಟ್‌ಲಿಫ್ಟಿಂಗ್‌ನಲ್ಲಿ ವೃತ್ತಿಜೀವನವನ್ನು ಮಾಡಲು ಅವರು ತಮ್ಮ ಸಹೋದರನಿಂದ ಸ್ಫೂರ್ತಿ ಪಡೆದರು. ಅದರ ನಂತರ ಅವರು ಸ್ಥಳೀಯ ಜಿಮ್‌ಗೆ ಹೋಗುವ ಮೂಲಕ ತಮ್ಮ ತರಬೇತಿಯನ್ನು ಪ್ರಾರಂಭಿಸಿದರು. ತಂದೆಯ ಮರಣದ ನಂತರ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಹೊಲಿಗೆ ಮತ್ತು ಕಸೂತಿ ಕೆಲಸವನ್ನೂ ಮಾಡಿದ್ದಾರೆ ಅಚಿಂತಾ.

ಪದಕ ಗೆದ್ದ ನಂತರ ನನಗೆ ಅತೀವ ಸಂತಸವಾಗಿದೆ ಎಂದರು. ಹಲವು ಹೋರಾಟಗಳನ್ನು ಮೆಟ್ಟಿ ನಿಂತು ಈ ಪದಕ ಗೆದ್ದಿದ್ದೇನೆ. ಈ ಪದಕವನ್ನು ನನ್ನ ಸಹೋದರ ಮತ್ತು ಎಲ್ಲಾ ತರಬೇತುದಾರರಿಗೆ ಅರ್ಪಿಸುತ್ತೇನೆ. ಆ ಬಳಿಕ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತೇನೆ ಎಂದರು. ಇದೇ ವೇಳೆ ಅವರ ಈ ಸಾಧನೆಗೆ ಅವರ ತಾಯಿ ಪೂರ್ಣಿಮಾ ಶೆಯುಲಿ ತುಂಬಾ ಖುಷಿಯಾಗಿದ್ದು, ಅವರ ಪ್ರದರ್ಶನ ನೋಡಿ ಎಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದರು.

CWG 2022 ರ ಮೂರನೇ ಚಿನ್ನದ ಪದಕ ವಿಜೇತ
ಅವರು ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಭಾರತೀಯ ವೇಟ್‌ಲಿಫ್ಟಿಂಗ್ ತಂಡದ ಅಗ್ರ ಪದಕ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಚಿಂತಾ CWG 2022 ರಲ್ಲಿ ಮೂರನೇ ಚಿನ್ನದ ಪದಕ ವಿಜೇತರಾದರು. ಪುರುಷರ ವೇಟ್ ಲಿಫ್ಟಿಂಗ್ 73 ಕೆಜಿ ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದರು.

ಇದನ್ನೂ ಓದಿ: Pooja Gehlot: ಭಾರತದಲ್ಲಿ ಕ್ರೀಡಾಪಟುಗಳಿಗೆ ಭಾರೀ ಪ್ರೋತ್ಸಾಹ, ತನ್ನ ದೇಶದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಾಕ್ ಪತ್ರಕರ್ತ!

ಅಚಿಂತಾ ಶೆಯುಲಿ ಅವರ ಬಡತನ ಎಷ್ಟಿದೆ ಎಂದರೆ ಅವರ ತಾಯಿ ಅಂಚಿತಾ ಅವರ ಟ್ರೋಫಿಗಳು ಮತ್ತು ಪದಕಗಳನ್ನು ತಮ್ಮ ಹರಿದ ಸೀರೆಯಲ್ಲಿ ಜೋಪಾನವಾಗಿ ಇರಿಸಿದ್ದಾರೆ. ಏಕೆಂದರೆ ಕಿತ್ತು ತಿನ್ನುವ ಕಡುಬಡತನ ಈ ಚಿನ್ನದ ಯುವಕನ ಮನೆಯಲ್ಲಿ ತಾಂಡವಾಡುತ್ತಿದೆ. ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 73 ಕೆ. ಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತರ ಅಚಿಂತಾ ಶೆಯುಲಿ ಮನೆಗೆ ಹಿಂದಿರುಗಿದಾಗ ಸೋಮವಾರ ಬೆಳಿಗ್ಗೆ ತಮ್ಮ ಟ್ರೋಪಿಗಳನ್ನು ಎಲ್ಲ ಒಂದು ಸೆಲ್ಫ್‌ನಲ್ಲಿ ಜೋಡಿಸಿ ಇಡುತ್ತಿದ್ದರು. ಅವರ ಮನೆ ಚಿಕ್ಕ ಮನೆ ಮತ್ತು ಅದಕ್ಕೆ ಸರಿಯಾದ ಸೂರು ಕೂಡ ಇಲ್ಲದ ಮನೆಯಾಗಿದೆ. ಇದನ್ನು ಮಾಧ್ಯಮದವರು ಅವರ ಪೋಟೊ ಕ್ಲಿಕ್ಕಿಸಲು ಹೋದಾಗ ಈ ದೃಶ್ಯಗಳೆಲ್ಲ ಕಣ್ಣಿಗೆ ಬಿದ್ದಿವೆ.

ಅಚಿಂತಾ ಅವರ ತಾಯಿ ಹೇಳಿದ್ದೇನು?
“ಅಚಿಂತಾ ಹಿಂತಿರುಗಿ ಬರುವಾಗ ನಮ್ಮ ಮನೆಗೆ ವರದಿಗಾರರು ಮತ್ತು ಛಾಯಾಗ್ರಾಹಕರು ಬರುತ್ತಾರೆ ಎಂದು ನನಗೆ ತಿಳಿದಿತ್ತು, ಹಾಗಾಗಿ ಪದಕಗಳು ಮತ್ತು ಟ್ರೋಫಿಗಳನ್ನು ಸ್ಟೂಲ್‌ನಲ್ಲಿ ಇರಿಸಿದ್ದೇನೆ, ಇದರಿಂದ ಅಚಿಂತಾ ಎಷ್ಟು ಪ್ರತಿಭಾವಂತರೆಂದು ಅವರಿಗೆ ಅರ್ಥವಾಗುತ್ತದೆ. ಅವರು ದೇಶಕ್ಕಾಗಿ ಚಿನ್ನ ಗೆಲ್ಲುತ್ತಾರೆ ಎಂದು ನಾನು ಕನಸು ಕಂಡಿರಲಿಲ್ಲ. ಅಚಿಂತಾ ತಾಯಿ ತನ್ನ ಕಿರಿಯ ಮಗನಿಗೆ ಗೆದ್ದ ಪದಕಗಳು ಮತ್ತು ಟ್ರೋಫಿಗಳನ್ನು ಇರಿಸಲು ಒಂದು ಕಬೋರ್ಡ್ ಖರೀದಿಸಲು ವಿನಂತಿಸಿದ್ದಾರೆ ” ಎಂದು ಪೂರ್ಣಿಮಾ ಶೆಯುಲಿ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ:  FIFA suspends AIFF: ಭಾರತಕ್ಕೆ ಶಾಕ್ ಕೊಟ್ಟ ಫಿಫಾ, AIFF ಅಮಾನತು: ಮಹಿಳಾ ವಿಶ್ವಕಪ್‌ ಆತಿಥ್ಯಕ್ಕೂ ಕತ್ತರಿ!

"ಪ್ರತಿದಿನ ಅವರಿಗೆ ಊಟ ಹಾಕದೇ ಇರುವಷ್ಟು ಬಡತನ ನಮ್ಮನ್ನು ಆವರಿಸಿಕೊಂಡಿದ್ದೆ. ಊಟ ಮಾಡದೆ ನಿದ್ದೆಗೆ ಜಾರಿದ ದಿನಗಳೂ ಇವೆ. ಈ ವಿಷಯಗಳನ್ನೆಲ್ಲ ಹೇಗೆ ವ್ಯಕ್ತಪಡಿಸಬೇಕು ಎಂದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದರು.
Published by:Ashwini Prabhu
First published: