'ಈ ಪಂದ್ಯದ​ ಗೆಲುವನ್ನ ಕೇರಳ ಜನತೆಗೆ ಅರ್ಪಿಸುತ್ತೇವೆ': ವಿರಾಟ್ ಕೊಹ್ಲಿ

news18
Updated:August 22, 2018, 7:01 PM IST
'ಈ ಪಂದ್ಯದ​ ಗೆಲುವನ್ನ ಕೇರಳ ಜನತೆಗೆ ಅರ್ಪಿಸುತ್ತೇವೆ': ವಿರಾಟ್ ಕೊಹ್ಲಿ
news18
Updated: August 22, 2018, 7:01 PM IST
ನ್ಯೂಸ್ 18 ಕನ್ನಡ

ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಈ ಪಂದ್ಯದ ಜಯವನ್ನು ಕೇರಳದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅರ್ಪಿಸುತ್ತೇವೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

'ನಮ್ಮ ತಂಡದ ಎಲ್ಲಾ ಆಟಗಾರರು ಮೂರನೇ ಟೆಸ್ಟ್​ ಪಂದ್ಯದ ಸಂಭಾವನೆಯನ್ನು ಕೇರಳ ಸರ್ಕಾರಕ್ಕೆ ನೀಡಲಿದ್ದೇವೆ, ನಮ್ಮಿಂದ ಇಷ್ಟು ಮಾತ್ರ ಮಾಡಲು ಸಾಧ್ಯ' ಎಂದು ಪಂದ್ಯ ಶ್ರೇಷ್ಠ ಸ್ವೀಕರಿಸಿದ ಬಳಿಕ ಕೊಹ್ಲಿ ತಿಳಿಸಿದ್ದಾರೆ. ಇನ್ನು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಕೊಹ್ಲಿ, ಈ ಪಂದ್ಯ ಗೆದ್ದು ಸರಣಿಯನ್ನು ಇನ್ನೂ ಜೀವಂತವಾಗಿರಿಸಿದ್ದೇವೆ. ಈ ಗೆಲುವು ತಂಡದ ಎಲ್ಲಾ ಸದಸ್ಯರಿಗೆ ಸಲ್ಲಬೇಕು. ಅದರಲ್ಲು ಬೌಲರ್​​ಗಳು ಉತ್ತಮ ಪ್ರದರ್ಶನ ತೋರಿದರು. ಅಶ್ವಿನ್ ಇಂಜುರಿಯಿಂದ ಬಳಲುತ್ತಿದ್ದರು ಅದ್ಭುತ ಬೌಲಿಂಗ್ ಮಾಡಿದರು ಎಂದಿದ್ದಾರೆ.

 


Loading...ಇನ್ನು ಅಜಿಂಕ್ಯ ರಹಾನೆ ಆಟದ ಬಗ್ಗೆ ಮಾತನಾಡಿದ ಕೊಹ್ಲಿ, ರಹಾನೆ ಅವರು ಸ್ಪಷ್ಟ ಮನಸ್ಥಿತಿಯಲ್ಲಿ ಈ ಬಾರಿ ಕಣಕ್ಕಿಳಿದಿದ್ದರು. ಅಂತೆಯೆ ತಮ್ಮ ನೈಜ್ಯ ಪ್ರದರ್ಶನ ತೋರಿ, ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದರು. ಜೊತೆಗೆ ಪೂಜಾರ ಕೂಡ ಎರಡನೇ ಇನ್ನಿಂಗ್ಸ್​​ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬಾರಿ ಪ್ರಮುಖ ಕ್ಯಾಚ್​ಗಳನ್ನು ನಾವು ಕೈ ಚೆಲ್ಲಲಿಲ್ಲ. ಇದೂ ಕೂಡ ನಮ್ಮ ಗೆಲುವಿಗೆ ಕಾರಣವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ