ನಮ್ಮ ತಂಡ ಬಲಿಷ್ಠವಾಗಿದೆ, ವಿಶ್ವಕಪ್​​ನಲ್ಲಿ ಭಾರತವನ್ನು ಸೋಲಿಸುವುದೆ ಗುರಿ: ಪಾಕ್​​ ಮಾಜಿ ನಾಯಕ

ಮುಂಬರುವ ವಿಶ್ವಕಪ್​ನಲ್ಲಿ ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ವಿಶ್ವಕಪ್​​ನಲ್ಲಿ ಕಳೆದ ಆರು ಸೀಸನ್​ನಿಂದಲು ಪಾಕಿಸ್ತಾನ ತಂಡ ಟೀಂ ಇಂಡಿಯಾವನ್ನು ಈವರೆಗೆ ಸೋಲಿಸಿದ ಇತಿಹಾಸವಿಲ್ಲ.

Vinay Bhat | news18
Updated:February 13, 2019, 10:33 PM IST
ನಮ್ಮ ತಂಡ ಬಲಿಷ್ಠವಾಗಿದೆ, ವಿಶ್ವಕಪ್​​ನಲ್ಲಿ ಭಾರತವನ್ನು ಸೋಲಿಸುವುದೆ ಗುರಿ: ಪಾಕ್​​ ಮಾಜಿ ನಾಯಕ
ಮೊಯಿನ್ ಖಾನ್ (ಪಾಕಿಸ್ತಾನ ತಂಡದ ಮಾಜಿ ಆಟಗಾರ)
  • News18
  • Last Updated: February 13, 2019, 10:33 PM IST
  • Share this:
ಪಾಕಿಸ್ತಾನ ತಂಡ ಈಗ ಬಲಿಷ್ಠವಾಗಿದೆ. ಈಬಾರಿಯ ವಿಶ್ವಕಪ್​ನಲ್ಲಿ ಭಾರತವನ್ನು ಸೋಲಿಸುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಮೊಯಿನ್ ಖಾನ್ ಹೇಳಿದ್ದಾರೆ.

ನಮಗೆ ವಿಶ್ವಕಪ್​ನಲ್ಲಿ ಭಾರತವನ್ನು ಸೋಲಿಸಲು ಈವರೆಗೆ ಸಾಧ್ಯವಾಗಿಲ್ಲ. ಆದರೆ, ಈಬಾರಿ ಪಾಕಿಸ್ತಾನ ಭಾರತವನ್ನು ಸೋಲಿಸಿ ಇತಿಹಾಸ ಬರೆಯಲಿದೆ. ನಮ್ಮಲ್ಲಿ ಉತ್ತಮ ಪ್ರತಿಭೆಗಳಿದ್ದಾರೆ. ಅದರಲ್ಲು ನಾಯಕ ಸರ್ಫರಾಜ್ ಅಹಮ್ಮದ್​​​ರಂತಹ ಅನುಭವಿ ಆಟಗಾರರು ತಂಡದಲ್ಲಿದ್ದಾರೆ ಎಂದಿದ್ದಾರೆ.

ಇನ್ನು ಇಂಗ್ಲೆಂಡ್​​ನಲ್ಲಿನ ವಾತಾವರಣದ ಬಗ್ಗೆ ನಮ್ಮ ಆಟಗಾರರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಭರ್ಜರಿ ಪ್ರದರ್ಶನ ತೋರುತ್ತಿದೆ. ಹೀಗಾಗಿ ಭಾರತವನ್ನು ಸೋಲಿಸುವುದೆ ಮುಖ್ಯ ನಮ್ಮ ಗುರಿ. ಅದನ್ನು ಸಾಧಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಸೇರುವ ಮೊದಲೇ ಸಚಿನ್ ಪಾಕಿಸ್ತಾನ ತಂಡದಲ್ಲಿ ಆಡಿದ್ದರು!

ವಿಶ್ವಕಪ್​​ನಲ್ಲಿ ಕಳೆದ ಆರು ಸೀಸನ್​ನಿಂದಲು ಪಾಕಿಸ್ತಾನ ತಂಡ ಟೀಂ ಇಂಡಿಯಾವನ್ನು ಈವರೆಗೆ ಸೋಲಿಸಿದ ಇತಿಹಾಸವಿಲ್ಲ. ಈ ಉದ್ದೇಶದಿಂದ ಮೊಯಿನ್ ಖಾನ್ ಈ ಮಾತನ್ನು ಹೇಳಿದ್ದಾರೆ. ಅಂತೆಯೆ ಮುಂಬರುವ ವಿಶ್ವಕಪ್​ನಲ್ಲಿ ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.

First published:February 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading