2050ರ ಫಿಫಾ ವಿಶ್ಚಕಪ್​​​ನಲ್ಲಿ 'ನಾವೇ ಚಾಂಪಿಯನ್': ಚೀನಾ ದೇಶದ ಈ ಆತ್ಮವಿಶ್ವಾಸಕ್ಕೆ ಕಾರಣವೇನು ಗೊತ್ತಾ..?

news18
Updated:July 11, 2018, 9:46 PM IST
2050ರ ಫಿಫಾ ವಿಶ್ಚಕಪ್​​​ನಲ್ಲಿ 'ನಾವೇ ಚಾಂಪಿಯನ್': ಚೀನಾ ದೇಶದ ಈ ಆತ್ಮವಿಶ್ವಾಸಕ್ಕೆ ಕಾರಣವೇನು ಗೊತ್ತಾ..?
news18
Updated: July 11, 2018, 9:46 PM IST
ನ್ಯೂಸ್ 18 ಕನ್ನಡ

2050ರಲ್ಲಿ ನಡೆಯುವ  ಫಿಫಾ ವಿಶ್ವಕಪ್​​ನಲ್ಲಿ ​​ಚೀನಾ ತಂಡ ಚಾಂಪಿಯನ್ ಆಗಲಿದೆಯಂತೆ. ಹೀಗೆಂದು ಆತ್ಮವಿಶ್ವಾಸದಿಂದ ಹೇಳುತ್ತಿರುವುದು ಸ್ವತಃ ಚೀನಾ ರಾಷ್ಟ್ರ. ಫಿಫಾ ಲೋಕದಲ್ಲಿ ಇನ್ನು ಶಿಶುವಾಗಿರುವ ಚೀನಾ 2050ರ ಹೊತ್ತಿಗೆ ವಿಶ್ವಕಪ್​ ಗೆಲ್ಲಲು ಹೇಗೆ ಸಾಧ್ಯ..? ಚೀನಾದ ಈ ಆತ್ಮವಿಶ್ವಾಸಕ್ಕೆ ಕಾರಣವೇನು..? ಇಲ್ಲಿದೆ ನೋಡಿ ಇದಕ್ಕೆ ಉತ್ತರ...

ಸದ್ಯ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಸಾಕಷ್ಟು ರೋಚಕತೆಗೆ ಎಡೆಮಾಡಿಕೊಟ್ಟಿದೆ. ವಿಶ್ವಕಪ್​​ ಗೆಲ್ಲುವ ಫೇವರಿಟ್​ ತಂಡಗಳೇ ನಾಕೌಟ್​ ಹಂತದಲ್ಲಿ ಹೊರಬಿದ್ದಿವೆ. ಪೋರ್ಚುಗಲ್​, ಅರ್ಜೆಂಟೀನಾ, ಸ್ಪೇನ್​ ರಾಷ್ಟ್ರಗಳು ಕ್ವಾರ್ಟರ್​ಫೈನಲ್​​​​ಗೂ ಮುನ್ನವೇ ಮನೆ ಸೇರಿವೆ. ಹಾಲಿ ಚಾಂಪಿಯನ್ ಜರ್ಮನಿಯಂತೂ ಗ್ರೂಪ್​ ಹಂತದಲ್ಲೇ ಸೋತು ಭಾರೀ ಮುಖಭಂಗ ಅನುಭವಿಸಿತು. ಹೀಗೆ ಬಲಿಷ್ಠ ರಾಷ್ಟ್ರಗಳು ಮಂಕಾಗಿರುವಾಗ ವಿಶ್ವಕಪ್ ಮಹಾಸಮರದಲ್ಲಿ ಚೀನಾ ಏನೇನು ಅಲ್ಲ. ಸದ್ಯ 72ನೇ ರ್ಯಾಕಿಂಗ್​ನಲ್ಲಿರುವ ಚೀನಾ ತಂಡ ವಿಶ್ವಕಪ್​ ಇತಿಹಾಸದಲ್ಲಿ ಕೇವಲ ಒಂದು ಬಾರಿ ಮಾತ್ರ ಅರ್ಹತೆ ಪಡೆದಿರುವ ಉದಾಹರಣೆಯಿದೆ. ಇಷ್ಟಾದರೂ 2050ರ ಹೊತ್ತಿಗೆ ಫಿಫಾ ಲೋಕದಲ್ಲಿ ಚೀನಾ ಬಲಿಷ್ಠ ತಂಡವಾಗಿ ರೂಪುಗೊಳ್ಳಲಿದೆಯಂತೆ.

ಚೀನಾ ರಾಷ್ಟ್ರದ ಈ ಆತ್ಮವಿಶ್ವಾಸಕ್ಕೆ ಕಾರಣ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ರ ಭವಿಷ್ಯತ್ತಿನ ಯೋಜನೆಗಳು. ಸ್ವತಃ ಫುಟ್ಬಾಲ್ ಅಭಿಮಾನಿಯಾಗಿರುವ ಜಿನ್​​​ಪಿಂಗ್​​​ ಅವರು ಒಲಿಂಪಿಕ್ಸ್​​ನಲ್ಲಿ ಪದಕ ಬೇಟೆಯಾಡುವ ಚೀನಾವನ್ನು ಫುಟ್ಬಾಲ್​ ಕ್ರೀಡೆಯಲ್ಲೂ ಬಲಿಷ್ಠವಾಗಿಸುವ ತಯಾರಿಯಲ್ಲಿದ್ದಾರೆ. 2020 ರ ವೇಳೆಗೆ ಚೀನಾದಲ್ಲಿ 20 ಸಾವಿರ ಫುಟ್ಬಾಲ್​ ತರಭೇತಿ ಕೇಂದ್ರ ಸೇರಿದಂತೆ ಬರೋಬ್ಬರಿ 70 ಸಾವಿರ ಪಿಚ್​​ಗಳನ್ನು ನಿರ್ಮಿಸಲು ಯೋಜನೆ ಕೈಗೊಂಡಿದ್ದಾರಂತೆ.

ಇನ್ನು ಫುಟ್ಬಾಲ್​ ತಂಡವನ್ನು ರೂಪಿಸುವುದರ ಜೊತೆಗೆ 2030ರ ವೇಳೆಗೆ ಫಿಫಾ ವಿಶ್ವಕಪ್ ಆತಿಥ್ಯ ವಹಿಸಲು ಎಲ್ಲಾ ಪ್ರಯತ್ನ ನಡೆಸುತ್ತಿದೆಯಂತೆ. ಇದಕ್ಕೆ ಕಾರಣ ಜಾಗತಿಕ ಮಾರುಕಟ್ಟೆ. ಸದ್ಯ ಫಿಫಾದಲ್ಲಿ ಅತಿ ಹೆಚ್ಚು ಪ್ರಾಯೋಜಕತ್ವ ಪಡೆದಿರುವ ಕಂಪನಿಗಳೆಲ್ಲಾ ಬಹುತೇಕ ಚೀನಾದ ಕಂಪೆನಿಯೇ ಆಗಿದೆ. ಅದೂ ಕೂಡ ಚೀನಾ ತಂಡ ವಿಶ್ವಕಪ್​ನಲ್ಲಿ ಇಲ್ಲದೆಯೇ. ಹೀಗಾಗಿ ಭವಿಷ್ಯತ್ತಿನಲ್ಲಿ ಚೀನಾವನ್ನು ಬಲಿಷ್ಠ ಫುಟ್ಬಾಲ್ ರಾಷ್ಟ್ರವನ್ನಾಗಿ ರೂಪಿಸಿದರೆ, ಸಾಕಷ್ಟು ಪ್ರಮಾಣದಲ್ಲಿ ಹಣ ಹರಿದು ಬರಲಿದೆ ಎಂಬುದು ಇವರ ಲೆಕ್ಕಾಚಾರ. ಒಟ್ಟಿನಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಆಲೋಚನೆಯಲ್ಲಿ ಸದ್ಯ ಚೀನಾ ರಾಷ್ಟ್ರವಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...