IPL Digital Rights: ಲೀಗ್ ಜೊತೆ ನಮ್ಮ ಸಂಬಂಧ ಇನ್ನಷ್ಟು ಗಾಢ, ಇದುವೇ ನಮಗೆ ಹೆಮ್ಮೆ ಎಂದ ನೀತಾ ಅಂಬಾನಿ

ಐಪಿಎಲ್ ಪಂದ್ಯಗಳ ಡಿಜಿಟಲ್ ಪ್ರಸರಣಾ ಹಕ್ಕನ್ನು ವಯಾಕಾಂ ಪಡೆದುಕೊಂಡಿದ್ದು ಅಂಬಾನಿ ಫ್ಯಾಮಿಲಿ ಸಂಭ್ರಮದಲ್ಲಿದೆ. Viacom18 ಮುಂದಿನ ಐದು ವರ್ಷಗಳ IPL ನ ಡಿಜಿಟಲ್ ಹಕ್ಕುಗಳನ್ನು ಪಡೆದ ನಂತರ, ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ನೀತಾ ಅಂಬಾನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನೀತಾ ಅಂಬಾನಿ

ನೀತಾ ಅಂಬಾನಿ

  • Share this:
IPL ವೀಕ್ಷಣೆ ಇನ್ನು ಸುಲಭ. ಐಪಿಎಲ್ ಪಂದ್ಯಗಳ (IPL) ಡಿಜಿಟಲ್ ಪ್ರಸರಣಾ ಹಕ್ಕನ್ನು (Digital Rights) ವಯಾಕಾಂ ಪಡೆದುಕೊಂಡಿದ್ದು ಅಂಬಾನಿ ಫ್ಯಾಮಿಲಿ ಸಂಭ್ರಮದಲ್ಲಿದೆ. Viacom18 ಮುಂದಿನ ಐದು ವರ್ಷಗಳ IPL ನ ಡಿಜಿಟಲ್ ಹಕ್ಕುಗಳನ್ನು ಪಡೆದ ನಂತರ, ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ನಿರ್ದೇಶಕಿ ನೀತಾ ಅಂಬಾನಿ (Nita Ambani) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಂಪನಿಯು ವಿಶ್ವ ದರ್ಜೆಯ IPL ವ್ಯಾಪ್ತಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಅದನ್ನು ಭಾರತದ ಪ್ರತಿಯೊಂದು ಮನೆಗೂ ಕೊಂಡೊಯ್ಯಲು ವಯಾಕಾಂ ಬಯಸುತ್ತದೆ ಎಂದು ಹೇಳಿದ್ದಾರೆ. ಇ-ಹರಾಜಿನ (E-Auction) ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನೀತಾ ಅಂಬಾನಿ ಅವರು, ಐಪಿಎಲ್ ಭಾರತದಲ್ಲಿ ಅತ್ಯುತ್ತಮವಾದುದನ್ನು ನಿರೂಪಿಸಲಿದೆ. ಪ್ರಸ್ತುತ ಡಿಜಿಟಲ್ ಕ್ರಾಂತಿಗೆ ಒಳಗಾಗುತ್ತಿರುವ ದೇಶದ ಪ್ರತಿಯೊಂದು ಮನೆಗೂ ಈ ಐಪಿಎಲ್ ಪಂದ್ಯಗಳು ತಲುಪುತ್ತದೆ ಎಂದು ಹೇಳಿದ್ದಾರೆ.

ಲೀಗ್​ನೊಂದಿಗೆ ನಮ್ಮ ಸಂಬಂಧ ಇನ್ನಷ್ಟು ಗಟ್ಟಿ

ಕ್ರೀಡೆಗಳು ನಮಗೆ ಮನರಂಜನೆಯನ್ನು ನೀಡುತ್ತವೆ. ನಮಗೆ ಸ್ಫೂರ್ತಿ ನೀಡುತ್ತವೆ.  ನಮ್ಮನ್ನು ಒಟ್ಟಿಗೆ ಸೇರಿಸುತ್ತವೆ. ಕ್ರಿಕೆಟ್ ಮತ್ತು ಐಪಿಎಲ್ ಅತ್ಯುತ್ತಮವಾದ ಕ್ರೀಡೆ ಮತ್ತು ಭಾರತದ ಅತ್ಯುತ್ತಮತೆಯನ್ನು ಈ ಕ್ರೀಡೆಗಳು ವ್ಯಾಪಕಾವಗಿ ನಿರೂಪಿಸುತ್ತವೆ. ಅದಕ್ಕಾಗಿಯೇ ಈ ಶ್ರೇಷ್ಠ ಆಟ ಮತ್ತು ಈ ಅದ್ಭುತ ಲೀಗ್‌ನೊಂದಿಗೆ ನಮ್ಮ ಸಂಬಂಧವನ್ನು ಗಾಢವಾಗಿಸಿಕೊಳ್ಳುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ.

ಐಪಿಎಲ್ ಆನಂದ ಇನ್ನು ಪ್ರತಿ ಮನೆಯಲ್ಲೂ

ನಾವು ಮಾಡುವ ಪ್ರತಿಯೊಂದರಂತೆಯೇ, ನಮ್ಮ ಧ್ಯೇಯವೆಂದರೆ ಐಪಿಎಲ್‌ನ ಆನಂದದಾಯಕ ಅನುಭವವನ್ನು ಜನರು ಎಲ್ಲೇ ಇದ್ದರೂ - ನಮ್ಮ ದೇಶದ ಪ್ರತಿಯೊಂದು ಭಾಗ ಮತ್ತು ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸುವುದಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕಿ ನೀತಾ ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: Viacom 18 ತೆಕ್ಕೆಗೆ IPL ಪಂದ್ಯಗಳ ಡಿಜಿಟಲ್ ಪ್ರಸರಣಾ ಹಕ್ಕು, ಇನ್ನು ಮನೆಮನೆಯಲ್ಲೂ ಕ್ರಿಕೆಟ್

Viacom18 ಭಾರತೀಯ ಉಪಖಂಡದಲ್ಲಿ 2023 ರಿಂದ 2027 ರವರೆಗಿನ ಸೀಸನ್‌ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಡಿಜಿಟಲ್ ಸ್ಟ್ರೀಮ್ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ. ಇದು ಪ್ರತಿ ಸೀಸನ್​​ಗೆ 18 ಆಟಗಳ ವಿಶೇಷ ಪ್ಯಾಕೇಜ್‌ಗಾಗಿ ಭಾರತದ ಡಿಜಿಟಲ್ ಹಕ್ಕುಗಳನ್ನು ಸಹ ಗೆದ್ದುಕೊಂಡಿದೆ.

5 ದೇಶಗಳಲ್ಲಿ ಮೂರರಲ್ಲಿಯೂ ವಯಾಕಾಂ ಹಕ್ಕು

ಜಾಗತಿಕವಾಗಿ ಪ್ರಮುಖ ಕ್ರಿಕೆಟ್ ರಾಷ್ಟ್ರಗಳನ್ನು ಒಳಗೊಂಡಂತೆ ಐದು ಅಂತರರಾಷ್ಟ್ರೀಯ ಪ್ರದೇಶಗಳಲ್ಲಿ ಮೂರರಲ್ಲಿ ದೂರದರ್ಶನ ಮತ್ತು ಡಿಜಿಟಲ್ ಹಕ್ಕುಗಳನ್ನು , Viacom18 ಗೆದ್ದಿದೆ ಎನ್ನುವುದು ಗಮನಾರ್ಹ.

ಇದನ್ನೂ ಓದಿ: Nita Ambani: ಒಲಿಂಪಿಸಂನ ಪ್ರಮುಖ ಮೌಲ್ಯಗಳನ್ನು ಹೆಚ್ಚಿಸಲು ಹೊಸ ಹೆಜ್ಜೆ - ನೀತಾ ಅಂಬಾನಿ

Viacom18 ಪ್ಯಾಕೇಜ್ B (ಡಿಜಿಟಲ್ ಹಕ್ಕುಗಳು) ಗಾಗಿ INR 20,500 ಕೋಟಿ (410 ಆಟಗಳಿಗೆ ಪ್ರತಿ ಪಂದ್ಯಕ್ಕೆ INR 50 ಕೋಟಿ) ಪಾವತಿಸಿದರೆ, ಪ್ಯಾಕೇಜ್ C ಅನ್ನು INR 3,273 ಕೋಟಿಗೆ ಖರೀದಿಸಲಾಗಿದೆ (98 ಆಟಗಳಿಗೆ ಪ್ರತಿ ಪಂದ್ಯಕ್ಕೆ INR 33.24).






































ಕ್ರಮ ಸಂಖ್ಯೆಹಕ್ಕುಗಳ ಪ್ಯಾಕೇಜ್ಪ್ರತಿ ಮ್ಯಾಚ್​​ಗೆ ಪಾವತಿ(ಕೋಟಿಗಳಲ್ಲಿ)
 1ಭಾರತೀಯ ಉಪಖಂಡ ಡಿಜಿಟಲ್ ಹಕ್ಕುಗಳ ಪ್ಯಾಕೇಜ್50.00
 2ಭಾರತೀಯ ಉಪಖಂಡದ ಡಿಜಿಟಲ್ ಹಕ್ಕುಗಳ ವಿಶೇಷ ಪ್ಯಾಕೇಜ್33.24
 ಅಂತಾರಾಷ್ಟ್ರೀಯ ವ್ಯಾಪ್ತಿ
 3A ಗ್ರೂಪ್ (ಆಸ್ಟ್ರೇಲಿಯಾ, NZ, ಸಿಂಗಾಪುರ್, ಕೆರಿಬಿಯನ್)0.30
 4ಗ್ರೂಪಿಂಗ್ ಸಿ (ದಕ್ಷಿಣ ಆಫ್ರಿಕಾ, ಉಪ ಸಹಾರನ್ ಆಫ್ರಿಕಾ)0.65
 5ಗ್ರೂಪಿಂಗ್ ಡಿ (ಯುಕೆ, ಐರ್ಲೆಂಡ್, ಕಾಂಟಿನೆಂಟಲ್ ಯುರೋಪ್)0.50

ಸಾಕರ್ (FIFA ವರ್ಲ್ಡ್ ಕಪ್, ಲಾ ಲಿಗಾ, ಸೀರಿ A ಮತ್ತು Ligue1), ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಬಾಸ್ಕೆಟ್‌ಬಾಲ್ (NBA) ನಲ್ಲಿ ಕ್ರೀಡಾ ಹಕ್ಕುಗಳನ್ನು ಪಡೆದ ನಂತರ, ಇದು Viacom18 ಕ್ರಿಕೆಟ್‌ಗೆ ಮೊದಲ ಪ್ರಮುಖ ಪ್ರವೇಶವಾಗಿದೆ. IPL ಹಕ್ಕುಗಳು Viacom18 ಮತ್ತು ಅದರ ಪ್ಲಾಟ್‌ಫಾರ್ಮ್‌ಗಳನ್ನು ದೇಶದ ಅತಿದೊಡ್ಡ ಕ್ರೀಡಾ ತಾಣಗಳಲ್ಲಿ ಒಂದನ್ನಾಗಿ ಮಾಡುತ್ತದೆ.
Published by:Divya D
First published: