IND vs ZIM: ಜಿಂಬಾಬ್ವೆ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್, ತಂಡದಿಂದ ಪ್ರಮುಖ ಆಟಗಾರ ಔಟ್?

ಜಿಂಬಾಬ್ವೆ ಸರಣಿಗೂ ಮುನ್ನ ಭಾರತ ತಂಡಕ್ಕೆ ಬಿಗ್​ ಶಾಕ್ ಆಗಿದ್ದು, ಟೀಂ ಇಂಡಿಯಾದ ಪ್ರಮುಖ ಆಟಗಾರ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.

IND vs ZIM

IND vs ZIM

  • Share this:
ಭಾರತ ತಂಡ ಸದ್ಯ ಬಿಡುವಿಲ್ಲದೇ ಸರಣಿಗಳಲ್ಲಿ ಆಟವಾಡುತ್ತಿದೆ. ಒಂದರ ಹಿಂದೆ ಒಂದರಂತೆ ಸರಣಿಗಳಲ್ಲಿ ತೊಡಗಿಕೊಳ್ಳುತ್ತಿರುವ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನೂ ಮಾಡಲಿದೆ. ಈಗಾಗಲೇ ಬಿಸಿಸಿಐ (BCCI) ಟಿಂ ಇಂಡಿಯಾವನ್ನು (Team India) ಪ್ರಕಟಿಸಿದೆ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ್ದು, ಮತ್ತೆ ನಾಯಕನಾಗಿ ಶಿಖರ್ ಧವನ್ (Shikhara Dhawan) ಮುಂದುವರೆಯಲಿದ್ದಾರೆ. ಆದರೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಇದರ ನಡುವೆ ಇದೀಗ ಸರಣಿಗೂ ಮುನ್ನ ಭಾರತ ತಂಡಕ್ಕೆ ಬಿಗ್​ ಶಾಕ್ ಆಗಿದ್ದು, ಟೀಂ ಇಂಡಿಯಾದ ಪ್ರಮುಖ ಆಟಗಾರ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.

ವಾಷಿಂಗ್ಟನ್ ಸುಂದರ್​ಗೆ ಗಾಯದ ಸಮಸ್ಯೆ:

ಹೌದು, ಟೀಂ ಇಂಡಿಯಾದ ಯುವ ತಂಡ ಜಿಂಬಾಬ್ವೆ ಪ್ರವಾಸಕ್ಕೆ ಸಿದ್ಧವಾಗುತ್ತಿದ್ದರೆ, ಇತ್ತ ಭಾರತ ತಂಡಕ್ಕೆ ಬಿಗ್​ ಶಾಕ್ ಒಂದು ಉಂಟಾಗಿದೆ. ಏಕೆಂದರೆ ತಂಡದಲ್ಲಿ ಆಯ್ಕೆ ಆಗಿದ್ದ ಪ್ರಮುಖ ಆಟಗಾರ ವಾಷಿಂಗ್ಟನ್ ಸುಂದರ್​ ಇಂಜುರಿಗೆ ಒಳಗಾಗಿದ್ದು, ಜಿಂಬಾಬ್ವೆ ಪ್ರವಾಸದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಆದರೆ ಈ ಕುರಿತು ಈವರೆಗೂ ಬಿಸಿಸಿಐ ಅಥವಾ  ವಾಷಿಂಗ್ಟನ್ ಸುಂದರ್​ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.





ಆದರೆ ವಾಷಿಂಗ್ಟನ್ ಸುಂದರ್ ಸದ್ಯ ರಾಯಲ್ ಲಂಡನ್ ಚಾಂಪಿಯನ್​ಷಿಪ್ ನಲ್ಲಿ ಆಡುತ್ತಿದ್ದು, ಕಳದೆ ಪಂದ್ಯುದ ವೇಳೆ ಸುಂದರ್​ ಪಿಲ್ಡಿಂಗ್ ಮಾಡುವಾಗ ಹಾಯಕ್ಕೆ ತುತ್ತಾಗಿರುವುದಾಗಿ  ಲ್ಯಾಂಚೆಶೈರ್ ಕ್ರಿಕೆಟ್ ಟ್ವೀಟ್​ ಮೂಲಕ ತಿಳಿಸಿದೆ. ಹೀಗಾಗಿ ಅವರು ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಲಭ್ಯರಿರುತ್ತಾರೆಯೇ ಎಂಬ ಅನುಮಾನ ಆರಂಭವಾಗಿದೆ.

ಇದನ್ನೂ ಓದಿ: IND vs ZIM: ಭಾರತ-ಜಿಂಬಾಬ್ವೆ ಏಕದಿನ ಸರಣಿ; ವೇಳಾಪಟ್ಟಿ, ಸಂಪೂರ್ಣ ತಂಡದ ಕುರಿತು ಇಲ್ಲಿದೆ ಮಾಹಿತಿ

IND vs ZIM ಏಕದಿನ ಸರಣಿಯ ವೇಳಾಪಟ್ಟಿ:

ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ - 18 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ - 20 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ - 22 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್

ಭಾರತ ಮತ್ತು ಜಿಂಬಾಬ್ವೆ ತಂಡಗಳ ಬಲಾಬಲ:

ಭಾರತ ಮತ್ತು ಜಿಂಬಾಬ್ವೆ ತಂಡಗಳು ಒಟ್ಟು 63 ಏಕದಿನ ಪಂದ್ಯಗಳಲ್ಲಿ ಸೆಣಸಾಡಿವೆ. ಇದರಲ್ಲಿ ಭಾರತ 51 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 10 ಪಂದ್ಯಗಳನ್ನು ಗೆದ್ದಿದೆ. ಉಳಿದ 2 ಪಂದ್ಯಗಳು ಟೈ ನಲ್ಲಿ ಕೊನೆಗಂಡಿವೆ. 2016ರಲ್ಲಿ ಭಾರತ ಮತ್ತು ಜಿಂಬಾಬ್ವೆ  ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಈ ಸರಣಿಗೆ ವಿರಾಟ್ ಕೊಹ್ಲಿ ಹಾಗೂ  ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್​ಗಾಗಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ, ಟೀಂ ಇಂಡಿಯಾಗೆ ಎಂಟ್ರಿ ಕೊಟ್ರಾ ಸ್ಟಾರ್​ ಪ್ಲೇಯರ್​

ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ:

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.
Published by:shrikrishna bhat
First published: