IPL 2023: ಗಾಯದ ಸಮಸ್ಯೆಯಿಂದ ಮತ್ತೊಬ್ಬ ಟೀಂ ಇಂಡಿಯಾ ಆಟಗಾರ ಐಪಿಎಲ್​ನಿಂದ ಔಟ್​!

ವಾಷಿಂಗ್ಟನ್ ಸುಂದರ್

ವಾಷಿಂಗ್ಟನ್ ಸುಂದರ್

IPL 2023: ವಾಷಿಂಗ್ಟನ್ ಸುಂದರ್ ಈ ಐಪಿಎಲ್ ಸೀಸನ್‌ನಲ್ಲಿ ಏಳು ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಈ ವೇಳೆ ಅವರು 57 ರನ್ ಕೊಡುಗೆ ನೀಡಿದ್ದಾರೆ. ಈ ಅವಧಿಯಲ್ಲಿ ಮೂರು ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

  • Share this:

ಐಪಿಎಲ್ 2023ರಲ್ಲಿ (IPL 2023) ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಗಾಯದ ಸಮಸ್ಯೆಯಿಂದಾಗಿ ಇಡೀ ಐಪಿಎಲ್ ಸೀಸನ್‌ನಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆ ನಂತರ, ಹೈದರಾಬಾದ್ ತಂಡವು ಅವರನ್ನು ತಂಡದಿಂದ ಕೈಬಿಟ್ಟುದೆ. ಈ ಋತುವಿನ ಟೂರ್ನಿಯಲ್ಲಿ ಹೈದರಾಬಾದ್‌ನ ಸ್ಥಿತಿ ಈಗಾಗಲೇ ತುಂಬಾ ಕೆಟ್ಟದಾಗಿದೆ. ಏಳು ಪಂದ್ಯಗಳನ್ನು ಆಡಿದ ಅವರು ಕೇವಲ ಎರಡು ಗೆಲುವು ದಾಖಲಿಸಲು ಸಾಧ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸುಂದರ್ ಗಾಯಗೊಂಡಿದ್ದರಿಂದ ತಂಡಕ್ಕೆ ದೊಡ್ಡ ಹಿನ್ನಡೆ ಆಗಿದೆ. ಈ ವಿಚಾರವನ್ನು ಸ್ವತಃ ಸನ್​ರೈಸರ್ಸ್​ ಹೈದರಾಬಾದ್​ ಪ್ರಾಂಚೈಸಿ ಟ್ವಿಟರ್​ ಮೂಲಕ ತಿಳಿಸಿದೆ. ಈಗಾಗಲೇ ಸತತ ಸೋಲಿನಿಂದ ತೀವ್ರ ನಿರಾಸೆಯಲ್ಲಿರುವ ಸನ್‌ರೈಸರ್ಸ್ ಅಭಿಮಾನಿಗಳಿಗೆ ಇದೊಂದು ಬೇಸರದ ಸಂಗತಿಯಾಗಿದೆ.


ಟೂರ್ನಿಯಿಂದ ಮತ್ತೊಬ್ಬ ಭಾರತೀಯ ಆಟಗಾರ ಔಟ್​:


ವಾಷಿಂಗ್ಟನ್ ಸುಂದರ್ ಈ ಐಪಿಎಲ್ ಸೀಸನ್‌ನಲ್ಲಿ ಏಳು ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಈ ವೇಳೆ ಅವರು 57 ರನ್ ಕೊಡುಗೆ ನೀಡಿದ್ದಾರೆ. ಈ ಅವಧಿಯಲ್ಲಿ ಮೂರು ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸುಂದರ್ ಬೌಲಿಂಗ್ ಆಲ್ ರೌಂಡರ್ ಆಗಿದ್ದು, ಅವರು ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಸುಂದರ್ ಬ್ಯಾಟಿಂಗ್ ಸಮಯದಲ್ಲಿ 7ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಾರೆ. ಐಪಿಎಲ್ ಹರಾಜಿನ ವೇಳೆ ವಾಷಿಂಗ್ಟನ್ ಸುಂದರ್ ಗೆ ಸಾಕಷ್ಟು ಬೇಡಿಕೆ ಇತ್ತು. ಇದೇ ಕಾರಣಕ್ಕೆ ಅವರು 8.75 ಕೋಟಿಗೆ ಮಾರಾಟವಾಗಿದ್ದರು. ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ ಅವರನ್ನು ಖರೀದಿಸಲು ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಹೈದರಾಬಾದ್ ತಂಡ ಕೋಟಿ ಕೋಟಿ ನೀಡಿ ಅವರನ್ನು ಖರೀದಿಸಿತು.ಐಪಿಎಲ್ 2023 ಅಂಕಪಟ್ಟಿ:


ಪಾಯಿಂಟ್ಸ್ ಪಟ್ಟಿ ನೋಡಿದರೆ ಹೈದರಾಬಾದ್ ತಂಡ ಡೆಲ್ಲಿಗಿಂತ ಮೇಲಿದೆ. ಅಂದರೆ ಎಸ್​ಆರ್​ಎಚ್​ 9ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಪ್ರವೇಶಿಸಲು, ಹೈದರಾಬಾದ್‌ಗೆ ಉಳಿದ ಏಳು ಪಂದ್ಯಗಳಲ್ಲಿ ಕನಿಷ್ಠ ಐದನ್ನಾದರೂ ಗೆಲ್ಲುವ ಅಗತ್ಯವಿದೆ. ಈ ತಂಡವು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 29 ರಂದು ಆಡಬೇಕಾಗಿದೆ.


ಇದನ್ನೂ ಓದಿ: Virat Kohli: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ, ಈ ರೆಕಾರ್ಡ್​ ಬ್ರೇಕ್​ ಮಾಡೋದು ಅಷ್ಟು ಈಸಿ ಅಲ್ವಂತೆ!


ಉಳಿದ ತಂಡಗಳ ಸ್ಥಾನ ನೋಡುವುದಾದರೆ, ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಇದೆ. ಉಳಿದಂತೆ ಕ್ರಮವಾಗಿ ಗುಜರಾತ್ ಟೈಟನ್ಸ್, ರಾಜಸ್ಥಾನ್​ ರಾಯಲ್ಸ್, ಲಕ್ನೋ ಸೂಪರ್​ ಜೈಂಟ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು 9ನೇ ಸ್ಥಾನದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಕೊನೆಯಲ್ಲಿ ಡೆಲ್ಲಿ ಕ್ಯಾಪಟಿಲ್ಸ್ ತಂಡವಿದೆ.
ಸುಂದರ್​ ಬದಲು ಯಾರಿಗೆ ಸಿಗಲಿದೆ ಚಾನ್ಸ್?

top videos


    ವಾಷಿಂಗ್ಟನ್ ಸುಂದರ್ ಬದಲಿ ಸ್ಥಾನದ ಬಗ್ಗೆ ಹೈದರಾಬಾದ್ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಂಚ್ ಸ್ಕ್ವಾಡ್ ನಲ್ಲಿ ಸುಂದರ್​ ಬದಲಿಗೆ ಯಾವೊಬ್ಬ ಆಲ್ ರೌಂಡರ್ ಇಲ್ಲದಂತಾಗಿದೆ. ವಾಷಿಂಗ್ಟನ್ ಸುಂದರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 8.75 ಕೋಟಿ ರೂ.ಗೆ ಭಾರೀ ಬೆಲೆಗೆ ಖರೀದಿಸಿತ್ತು. ಈಗ ಅವರು ಹೊರನಡೆದಿರುವುದು ತಂಡದ ಸಂಯೋಜನೆಯಲ್ಲಿ ದೊಡ್ಡ ಸಮಸ್ಯೆಯಾಗಲಿದೆ. ಅಂತಿಮ ತಂಡದಲ್ಲಿರುವ ಆಟಗಾರರು ಫಾರ್ಮ್ ಇಲ್ಲದೇ ಪರದಾಡುತ್ತಿರುವಾಗ ಹೈದರಾಬಾದ್ ಉಳಿದ ಪಂದ್ಯಗಳನ್ನು ಸುಂದರ್​ ಇಲ್ಲದೆ ಆಡಬೇಕಿದೆ.

    First published: