ಭಾರತ-ಎಸೆಕ್ಸ್ ಅಭ್ಯಾಸ ಪಂದ್ಯ: 2ನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲೌಟ್

news18
Updated:July 26, 2018, 4:56 PM IST
ಭಾರತ-ಎಸೆಕ್ಸ್ ಅಭ್ಯಾಸ ಪಂದ್ಯ: 2ನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲೌಟ್
news18
Updated: July 26, 2018, 4:56 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಎಸೆಕ್ಸ್ ಕೌಂಟಿ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ 395 ರನ್​ಗೆ ಆಲೌಟ್ ಆಗಿದೆ. ಮೊದಲ ದಿನದಾಟದ ಅಂತ್ಯಕ್ಕೆ 322 ರನ್​ಗೆ 6 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ಎರಡನೇ ದಿನದ ಆರಂಭದಲ್ಲೇ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​​ ಕಡೆ ಮುಖಮಾಡಿದರು.

ಮೊದಲ ದಿನದಾಟದ ಅಂತ್ಯಕ್ಕೆ ದಿನೇಶ್ ಕಾರ್ತಿಕ್ 82 ​ಹಾಗೂ ಹಾರ್ದಿಕ್ ಪಾಂಡ್ಯ 33 ರನ್ ಬಾರಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಆದರೆ ಪಂದ್ಯ ಆರಂಭವಾದ ಮೊದಲ ಎಸೆತದಲ್ಲೇ ಕಾರ್ತಿಕ್ ಅವರು ವಾಲ್ಟರ್ ಎಸೆತದಲ್ಲಿ ಔಟ್ ಆದರು. ಬಳಿಕ ಬಂದ ಕರುಣ್ ನಾಯರ್ ಕೂಡ ಕೇವಲ 4 ರನ್​ಗೆ ತನ್ನ ಇನ್ನಿಂಗ್ಸ್​ ಅನ್ನು ಮುಗಿಸಿದರು. ಇತ್ತ ಪಾಂಡ್ಯ ಕೂಡ ಅರ್ಧಶತಕ ಗಳಿಸಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಔಟ್ ಆದರು. ಕೊನೆಯಲ್ಲಿ ರವೀಂದ್ರ ಜಡೇಜಾ ಕೂಡ 15 ರನ್​ಗೆ ನಿರ್ಗಮಿಸಿ ಭಾರತ 395 ರನ್​ಗೆ ಸರ್ವಪತನ ಕಂಡಿದೆ. ರಿಷಬ್ ಪಂತ್ 34 ರನ್ ಬಾರಿಸಿ ಅಜೇಯರಾಗಿ ಉಳಿದರು.

ಎಸೆಕ್ಸ್ ತಂಡದ ಪರ ವಾಲ್ಟರ್ 4 ವಿಕೆಟ್ ಕಿತ್ತು ಮಿಂಚಿದರೆ, ಕೋಲ್ಸ್ 2, ಆರೋನ್ ಬಿಯರ್ಡ್​, ಕ್ವಿನ್, ಡಿಕ್ಸೋನ್ ಹಾಗೂ ನಿಜ್ಜರ್ ತಲಾ 1 ವಿಕೆಟ್ ಪಡೆದರು.

ಕ್ಷಣ ಕ್ಷಣದ ಮಾಹಿತಿಗಾಗಿ News18 ಇಂಗ್ಲಿಷ್ LIVE BLOG ಭೇಟಿ ನೀಡಿ
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ