ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ ಕೊಹ್ಲಿ ಪಡೆ: ಮೊದಲ ದಿನದಾಟದ ಅಂತ್ಯಕ್ಕೆ ಭಾರತ 322/6

news18
Updated:July 25, 2018, 10:58 PM IST
ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ ಕೊಹ್ಲಿ ಪಡೆ: ಮೊದಲ ದಿನದಾಟದ ಅಂತ್ಯಕ್ಕೆ ಭಾರತ 322/6
news18
Updated: July 25, 2018, 10:58 PM IST
ನ್ಯೂಸ್ 18 ಕನ್ನಡ

ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಮೊದಲ ದಿನವೇ ವೈಫಲ್ಯ ಕಂಡಿದೆ. ಆರಂಭದಿಂದಲೇ ವಿಕೆಟ್ ಕಳೆದುಕೊಂಡ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 322 ರನ್ ಕಲೆಹಾಕಿದೆ.

ಮ್ಯಾಟ್ ಕೊಲೆಸ್ ಎಸೆತದಲ್ಲಿ ಧವನ್(0) ಡಕೌಟ್ ಆದರೆ, ಟೀಂ ಇಂಡಿಯಾದ ಆಧಾರ ಸ್ಥಂಭ ಚೇತೇಶ್ವರ್ ಪೂಜರ ಕೇವಲ 1 ರನ್​ಗೆ ಔಟಾದರು. ರಹಾನೆ 17 ರನ್​​ಗೆ ಇನ್ನಿಂಗ್ಸ್​ ಮುಗಿಸಿದರು. ಆರಂಭಿಕ ಹಂತದಲ್ಲಿ  ಪ್ರಮುಖ 3 ವಿಕೆಟ್ ಕಳೆದುಕೊಂಡ ಭಾರತಕ್ಕೆ ಮುರಳಿ ವಿಜಯ್ ಹಾಗೂ  ನಾಯಕ ವಿರಾಟ್ ಕೊಹ್ಲಿ ಆಧಾರವಾಗಿ ಇಬ್ಬರು ಅರ್ಧಶತಕ ಗಳಿಸಿದರು. ಆದರೆ 53 ರನ್​ಗಳಿಸಿ ವಿಜಯ್ ಹಾಗೂ 68 ರನ್ ಬಾರಿಸಿ ಕೊಹ್ಲಿ ಪೆವಿಲಿಯನ್ ಕಡೆ ಮುಖಮಾಡಿದರು. ಬಳಿಕ ಒಂದಾದ ಕನ್ನಡಿಗ ಕೆ. ಎಲ್. ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಎಚ್ಚರಿಕೆಯ ಆಟಕ್ಕೆ ಮುಂದಾದರು. 6ನೇ ವಿಕೆಟ್​ಗೆ ಈ ಜೋಡಿ 114 ರನ್​ಗಳ ಕಾಣಿಕೆ ನೀಡಿ, ರಾಹುಲ್ 58 ರನ್​ಗೆ ನಿರ್ಗಮಿಸಿದರು. ಬಳಿಕ ಕಾರ್ತಿಕ್ ಜೊತೆ ಒಂದಾದ ಹಾರ್ದಿಕ್ ಪಾಂಡ್ಯ ಎಚ್ಚರಿಕೆಯಿಂದ ಇನ್ನಿಂಗ್ಸ್​ ಕಟ್ಟಲು ಮುಂದಾಗಿದ್ದಾರೆ. ಅಂತಿಮವಾಗಿ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿದೆ. ಕಾರ್ತಿಕ್ 82 ಹಾಗೂ ಹಾರ್ದಿಕ್ ಪಾಂಡ್ಯ 33 ರನ್​​ಗಳಿಸಿ ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಎಸೆಕ್ಸ್ ತಂಡದ ಪರ ಕೋಲ್ಸ್ ಹಾಗೂ ವಾಲ್ಟರ್ 2 ವಿಕೆಟ್ ಕಿತ್ತರೆ ಕ್ವಿನ್ ಹಾಗೂ ನಿಜ್ಜರ್ ತಲಾ 1 ವಿಕೆಟ್ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ News18 ಇಂಗ್ಲಿಷ್ LIVE BLOG ಭೇಟಿ ನೀಡಿ
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...