ನಾನೊಬ್ಬ ಆಲ್ರೌಂಡರ್, ಬೌಲಿಂಗ್ ಜೊತೆ ಬ್ಯಾಟ್ ಬೀಸಲು ಸಿದ್ಧ: ಚಾಹರ್

Vinay Bhat | news18
Updated:October 10, 2018, 6:19 PM IST
ನಾನೊಬ್ಬ ಆಲ್ರೌಂಡರ್, ಬೌಲಿಂಗ್ ಜೊತೆ ಬ್ಯಾಟ್ ಬೀಸಲು ಸಿದ್ಧ: ಚಾಹರ್
  • Advertorial
  • Last Updated: October 10, 2018, 6:19 PM IST
  • Share this:
ನ್ಯೂಸ್ 18 ಕನ್ನಡ

ಏಷ್ಯಾ ಕಪ್​​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ಟೀಂ ಇಂಡಿಯಾದ ದೀಪಕ್ ಚಾಹರ್ ಅವರು ಮೊದಲ ಪಂದ್ಯದಲ್ಲಿ ಅಷ್ಟೇನು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ಇದನ್ನು ಹಗುರವಾಗಿ ಪರಿಗಣಿಸದ ಚಾಹರ್, ಟೀಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಬೇಕೆಂದು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಈ ಮಧ್ಯೆ ನಾನು ಬೌಲಿಂಗ್ ಜೊತೆ ಬ್ಯಾಟಿಂಗ್ ಕೂಡ ಮಾಡಬಲ್ಲೆ ಎಂದು ಹೇಳಿದ್ದಾರೆ.

ನಾನು ಆಲ್ರೌಂಡರ್ ಆಟಗಾರ. ಬೌಲಿಂಗ್ ಜೊತೆ ಬ್ಯಾಟಿಂಗ್ ಕೂಡ ಮಾಡುತ್ತೇನೆ. ಹೀಗಾಗಿ ಏಷ್ಯಾ ಕಪ್​​ನಲ್ಲಿ ಹಾರ್ದಿಕ್ ಪಾಂಡ್ಯ ಬದಲು ಆಲ್ರೌಂಡರ್ ಆಗಿ ನನ್ನನ್ನು ಆಯ್ಕೆ ಮಾಡಲಾಯಿತು ಎಂದಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಖಾಯಂ ಸದಸ್ಯನಾಗಿ ಇರಲು ಬಯಸಿದ್ದೇನೆ. ಆದರೆ ಅದು ಸುಲಭದ ವಿಚಾರವಲ್ಲ ಎಂಬುದು ಗೊತ್ತು. ಹೊಸ ಚೆಂಡಿನಲ್ಲಿ ಆಡುವ ಹೊಸ ಬ್ಯಾಟ್ಸ್​ಮನ್​​​​ ಹಾಗೂ ಹೊಸ ಬೌಲರ್​​​ ನಾನಗಬೇಕು ಎಂದು ಚಾಹರ್ ಹೇಳಿದ್ದಾರೆ. ಇದಕ್ಕಾಗಿ ನಾನು ಕಠಿಣ ಅಭ್ಯಾಸದಲ್ಲಿ ತೋಡಗಿದ್ದೇನೆ. ಆಯ್ಕೆದಾರ ಸಮಿತಿಯವರು ನನ್ನ ಹೆಸರನ್ನು ಸೆಲೆಕ್ಟ್ ಮಾಡುವಂತಾಗಬೇಕು ಎಂದು ತಮ್ಮ ಆಸೆಯನ್ನು ಚಾಹರ್ ವ್ಯಕ್ತಪಡಿಸಿದ್ದಾರೆ.
First published:October 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ