ನಮ್ಮೊಂದಿಗೆ ಕ್ರಿಕೆಟ್ ಆಡಿ ಎಂದು ಭಾರತವೇ ಅಂಗಲಾಚುವಂತೆ ಮಾಡುತ್ತೇವೆ; ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಬಿಸಿಸಿಐ ಬಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನೇಕ ಬಾರಿ ಕ್ರಿಕೆಟ್ ಸರಣಿ ಆಡಲು ಮನವಿ ಮಾಡಿತ್ತು. ಸದ್ಯ ಇದರಿಂದ ನಂಬಿಕೆ ಕಳೆದುಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ-ಪಾಕಿಸ್ತಾನ ಸರಣಿಗಾಗಿ ನಾವು ಇನ್ನು ಕಾಯುವುದಿಲ್ಲ ಎಂದು ಹೇಳಿದೆ.

Vinay Bhat | news18
Updated:February 12, 2019, 2:57 PM IST
ನಮ್ಮೊಂದಿಗೆ ಕ್ರಿಕೆಟ್ ಆಡಿ ಎಂದು ಭಾರತವೇ ಅಂಗಲಾಚುವಂತೆ ಮಾಡುತ್ತೇವೆ; ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಸಾಂದರ್ಭಿಕ ಚಿತ್ರ
Vinay Bhat | news18
Updated: February 12, 2019, 2:57 PM IST
ಇಸ್ಲಾಮಾಬಾದ್: ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದರೆ ಅದು ಎರಡು ದೇಶಗಳ ನಡುವಣ ಯುದ್ದ ಎಂದೆ ಹೇಳಲಾಗುತ್ತದೆ. ಆದರೆ, ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವ ತನಕ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಹೇಳಿತ್ತು.

ಈ ಮಧ್ಯೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನೇಕ ಬಾರಿ ಕ್ರಿಕೆಟ್ ಸರಣಿ ಆಡಲು ಮನವಿ ಮಾಡಿತ್ತು.

ಸದ್ಯ ಇದರಿಂದ ನಂಬಿಕೆ ಕಳೆದುಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಭಾರತ-ಪಾಕಿಸ್ತಾನ ಸರಣಿಗಾಗಿ ನಾವು ಇನ್ನು ಕಾಯುವುದಿಲ್ಲ. ಇನ್ನುಮುಂದೆ ನಾವಾಗಿಯೆ ಕ್ರಿಕೆಟ್ ಆಡೋಣ ಎಂದು ಎಂದಿಗೂ ಹೇಳುವುದಿಲ್ಲ ಎಂದು ಹೇಳಿದೆ ಹೇಳಿದೆ.

ಈ ಬಗ್ಗೆ ಮಾತನಾಡಿದ ಪಿಸಿಬಿ ಮ್ಯಾನೆಜಿಂಗ್ ಡೈರೆಕ್ಟರ್ ವಾಸೀಂ ಖಾನ್,  ನಮಗೂ ಒಂದು ತಾಳ್ಮೆಯಿದೆ. ಈ ಸರಣಿಗಾಗಿ ಸಾಯುವವರೆಗೆ ಕಾಯಲು ಸಾಧ್ಯವಿಲ್ಲ. ಮುಂದೊಂದು ದಿನ ಭಾರತವೇ ನಮ್ಮಲ್ಲಿ ಬಂದು ಕ್ರಿಕೆಟ್ ಆಡೋಣ ಎಂದು ಅಂಗಲಾಚುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2019 ವಿಶ್ವಕಪ್​​ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್-ರಿಷಭ್ ಪಂತ್​​ಗಿಲ್ಲವಂತೆ ಸ್ಥಾನ

ನಮ್ಮ ಜೀವನ ಭಾರತ ವಿರುದ್ಧ ಕ್ರಿಕೆಟ್ ಆಡಿದರೆ ಮಾತ್ರ ಸಾಗುವುದಲ್ಲ. ನಾವು ನಮ್ಮ ದೇಶದ ಕ್ರಿಕೆಟ್ ಅನ್ನು ಅಭಿವೃದ್ದಿ ಪಡಿಸುವತ್ತ ಗಮನ ಹರಿಸುತ್ತಿದ್ದೇವೆ. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ತಂಡ ಹಾಗೂ ಆಟಗಾರರು ಗುರುತಿಸುವಂತೆ ಮಾಡುವುದು ನಮ್ಮ ಉದ್ದೇಶ ಎಂದು ವಾಸೀಂ ಖಾನ್ ಹೇಳಿದ್ದಾರೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...