ಆಂಗ್ಲರ ನೆಲದಲ್ಲಿ ಚೊಚ್ಚಲ ಶತಕಕ್ಕೆ ಕೊಹ್ಲಿ ತವಕ

news18
Updated:July 31, 2018, 4:02 PM IST
ಆಂಗ್ಲರ ನೆಲದಲ್ಲಿ ಚೊಚ್ಚಲ ಶತಕಕ್ಕೆ ಕೊಹ್ಲಿ ತವಕ
news18
Updated: July 31, 2018, 4:02 PM IST
ನ್ಯೂಸ್ 18 ಕನ್ನಡ

ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ನಾಳೆಯಿಂದ ಆರಂಭವಾಗುವ ಭಾರತ-ಇಂಗ್ಲೆಂಡ್​ ಟೆಸ್ಟ್ ಸರಣಿಯಲ್ಲಿ ಕೇಂದ್ರ ಬಿಂದು. ಇದಕ್ಕೆ ಪ್ರಮುಖ ಕಾರಣವೂ ಇದೆ. ಇಂಗ್ಲೆಂಡ್​​ಗೂ ಕೊಹ್ಲಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಕಾರಣ ವಿಶ್ವದೆಲ್ಲೆಡೆ ಅಬ್ಬರಿಸುವ ರನ್ ಮೆಷಿನ್​ ಸೂರ್ಯ ಮುಳುಗದ ನಾಡಲ್ಲಿ ಮಾತ್ರ ಕೊಂಚ ಮಂಕಾಗಿರುವುದು. ಹೀಗಾಗೆ ಕೊಹ್ಲಿ ಮೇಲೆ ಈ ಬಾರಿ ಕ್ರಿಕೆಟ್ ಲೋಕದ ಕಣ್ಣಿದೆ.

ಈಗಾಗಲೇ ಮುಗಿದಿರುವ ಟಿ-20 ಹಾಗೂ ಏಕದಿನ ಸರಣಿಯಲ್ಲಿ ಕೊಹ್ಲಿ ಅನಾಯಾಸವಾಗಿ ರನ್​ ಕಲೆಹಾಕಿದ್ದಾರೆ. ಜೊತೆಗೆ ವೈಟ್​ ಜೆರ್ಸಿಯಲ್ಲೂ ಮೋಡಿ ಮಾಡುವ ಇರಾದೆ ಹೊಂದಿದ್ದಾರೆ. ವಿರಾಟ್ ಬ್ಯಾಟಿಂಗ್ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದ್ದು ಇಂಗ್ಲೆಂಡ್​​ನಲ್ಲಿ ಮೊದಲ ಬಾರಿಗೆ ಶತಕದ ನಗೆ ಬೀರುತ್ತಾರ ಎಂಬ ಲೆಕ್ಕಾಚಾರ ಆರಂಭವಾಗಿದೆ. ಅಂಕಿ ಅಂಶಗಳು ಸಹ ವಿರಾಟ್ ಶತಕ ಬಾರಿಸಬಲ್ಲರು ಎಂಬುದನ್ನು ಸಾಬಿತು ಪಡೆಸುತ್ತವೆ. ಬೌನ್ಸಿ ಟ್ರ್ಯಾಕ್​​ನಲ್ಲಿ ಟೀಮ್ ಇಂಡಿಯಾ ನಾಯಕನ ಆಟ ಕ್ಲಾಸ್ ಆಗಿದೆ. ಇಂಗ್ಲೆಂಡ್ ಹೊರತು ಪಡಿಸಿದರೆ ಉಳಿದೆಲ್ಲಾ ದೇಶಗಳಲ್ಲಿ ವಿರಾಟ್ ಬ್ಯಾಟ್ ಅಬ್ಬರಿಸಿದೆ. ಈಗ ಆಂಗ್ಲರ ಕಿವಿ ಹಿಂಡಲು ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.

ವಿದೇಶದಲ್ಲಿ ವಿರಾಟ್ ಕೊಹ್ಲಿ ಸಾಧನೆ:
Loading...ವಿರುದ್ಧ ಪಂದ್ಯ ಶತಕ
ಆಸ್ಟ್ರೇಲಿಯಾ 08 05
ದಕ್ಷಿಣ ಆಫ್ರಿಕಾ 05 02
ವೆಸ್ಟ್ ಇಂಡಿಸ್ 07 01
ಶ್ರೀಲಂಕಾ 06 02
ನ್ಯೂಜಿಲೆಂಡ್ 02 01

ಈ ಅಂಕಿ ಅಂಶಗಳನ್ನು ನೋಡಿದರೆ ವಿರಾಟ್ ಅವರು ಹೇಗೆ ವಿದೇಶಗಳಲ್ಲಿ ಬ್ಯಾಟ್ ಬೀಸಿದ್ದಾರೆ ಎಂಬುದು ಸಾಬೀತಾಗುತ್ತದೆ. ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 8 ಪಂದ್ಯಗಳಲ್ಲಿ 5 ಶತಕ ಬಾರಿಸಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 5 ಟೆಸ್ಟ್​ಗಳಲ್ಲಿ  2 ಶತಕ, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್​​ನಲ್ಲಿ ತಲಾ ಒಂದು ಶತಕ ಬಾರಿಸಿದ್ದಾರೆ. ಇನ್ನು ನೆರೆಯ ರಾಷ್ಟ್ರ ಶ್ರೀಲಂಕಾದಲ್ಲೂ ವಿರಾಟ್ ಎರಡು ಬಾರಿ ಮೂರಂಕಿ ಗಡಿದಾಡಿದ ಸಾಧನೆ ಮಾಡಿದ್ದಾರೆ.

ಇಷ್ಟೆಲ್ಲಾ ಶತಕ ದಾಖಲಿಸಿರುವ ಕೊಹ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ನೆಲದಲ್ಲಿ ಮಾತ್ರ ಶತಕ ಈ ವರೆಗೆ ಬಾರಿಸಿಲ್ಲ. ಈ ಕನಸು ಈ ಬಾರಿ ಕೈಗೂಡವ ಎಲ್ಲಾ ಸಾಧ್ಯತೆಗಳು ಇದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...