ಅಂಡರ್-16 ಫುಟ್ಬಾಲ್: ವಿಕ್ರಮ್ ಹ್ಯಾಟ್ರಿಕ್; ಜೋರ್ಡನ್ ವಿರುದ್ಧ ಭಾರತಕ್ಕೆ 4-0 ಗೆಲುವು


Updated:August 2, 2018, 8:00 PM IST
ಅಂಡರ್-16 ಫುಟ್ಬಾಲ್: ವಿಕ್ರಮ್ ಹ್ಯಾಟ್ರಿಕ್; ಜೋರ್ಡನ್ ವಿರುದ್ಧ ಭಾರತಕ್ಕೆ 4-0 ಗೆಲುವು

Updated: August 2, 2018, 8:00 PM IST
- ನ್ಯೂಸ್18 ಕನ್ನಡ

ಬೆಂಗಳೂರು: ಪಶ್ಚಿಮ ಏಷ್ಯಾ ಫುಟ್ಬಾಲ್ ಒಕ್ಕೂಟದ(ಡಬ್ಲ್ಯೂಎಎಫ್​ಎಫ್) ಅಂಡರ್-16 ಚಾಂಪಿಯನ್​ಶಿಪ್​ನಲ್ಲಿ ಭಾರತದ ಹುಡುಗರು ಶುಭಾರಂಭ ಮಾಡಿದ್ದಾರೆ. ತವರಿನಲ್ಲಿ ಮಲೇಷ್ಯನ್ ತಂಡವನ್ನು ಸೋಲಿಸಿದ್ದ ಭಾರತೀಯರು ಜೋರ್ಡಾನ್​ನಲ್ಲಿ ಆತಿಥೇಯರನ್ನು 4-0 ಗೋಲುಗಳಿಂದ ಮಣಿಸಿದ್ದಾರೆ. ವಿಕ್ರಮ್ ಸಿಂಗ್ ಹ್ಯಾಟ್ರಿಕ್ ಗೋಲು ಗಳಿಸಿದರು. ವಿಕ್ರಮ್ 43, 61 ಮತ್ತು 73ನೇ ನಿಮಿಷದಲ್ಲಿ ತಂಡಕ್ಕೆ ಗೋಲು ತಂದುಕೊಟ್ಟರು. ಬೇಕೇ ಓರಂ 84ನೇ  ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 4-0 ಮುನ್ನಡೆ ಒದಗಿಸಿದರು.

ಸೆಪ್ಟೆಂಬರ್​ನಲ್ಲಿ ನಡೆಲಿರುವ ಎಎಫ್​ಸಿ ಅಂಡರ್-16 ಚಾಂಪಿಯನ್​ಶಿಪ್​ಗೆ ಅಂತಿಮ ತಯಾರಿಯಾಗಿ ಭಾರತವು ಡಬ್ಲ್ಯೂಎಎಫ್​ಎಫ್ ಅಂಡರ್-16 ಟೂರ್ನಿಯಲ್ಲಿ ಪಾಲ್ಗೊಂಡಿದೆ. ಎಎಫ್​ಸಿ ಅಂಡರ್-16 ಟೂರ್ನಿಯ ಹಾಲಿ ಚಾಂಪಿಯನ್ಸ್ ಇರಾಕ್ ಮತ್ತು ಪ್ರಬಲ ಜಪಾನ್ ತಂಡಗಳನ್ನ ಭಾರತೀಯರು ಎದುರಿಸಲಿದ್ದಾರೆ. ಡಬ್ಲ್ಯೂಎಎಫ್​ಎಫ್ ಅಂಡರ್-16 ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಂಡಿರುವ ಎಲ್ಲಾ ತಂಡಗಳೂ ಎಎಫ್​ಸಿ ಟೂರ್ನಿಗೆ ಅರ್ಹತೆ ಪಡೆದಿರುವುದು ವಿಶೇಷ. ಚೀನಾ, ಥಾಯ್ಲೆಂಡ್, ಮಲೇಷ್ಯಾದ ಜೂನಿಯರ್ ರಾಷ್ಟ್ರೀಯ ತಂಡಗಳನ್ನ ಹಾಗೂ ಅನೇಕ ಕ್ಲಬ್ ತಂಡಗಳನ್ನ ಎದುರಿಸಿ ಅನುಭವ ಹೊಂದಿರುವ ಭಾರತದ ಹುಡುಗರಿಗೆ ಈಗ ಜೋರ್ಡಾನ್​ನಲ್ಲಿ ನಡೆಯುತ್ತಿರುವ ಟೂರ್ನಿಯು ಅಂತಿಮ ತಯಾರಿಯಂತಿದೆ.

ಡಬ್ಲ್ಯೂಎಎಫ್​ಎಫ್ ಅಂಡರ್-16 ಟೂರ್ನಿಯಲ್ಲಿ ಭಾರತದ ಪಂದ್ಯಗಳು:

ಆ. 1: ಜೋರ್ಡಾನ್ ವಿರುದ್ಧ (ಇದರಲ್ಲಿ ಭಾರತ ಗೆದ್ದಾಗಿದೆ)
ಆ. 3: ಜಪಾನ್ ವಿರುದ್ಧ
ಆ. 5: ಇರಾನ್ ವಿರುದ್ಧ
Loading...

ಆ. 7: ಯೆಮೆನ್ ವಿರುದ್ಧ

ಇನ್ನು, ಎಎಫ್​ಸಿ ಅಂಡರ್-16 ಚಾಂಪಿಯನ್​ಶಿಪ್ ಸೆಪ್ಟೆಂಬರ್​ನಲ್ಲಿ ನಡೆಯಲಿದೆ. ಸೆ. 21ರಂದು ವಿಯೆಟ್ನಾಮ್ ವಿರುದ್ಧ ಭಾರತ ಮೊದಲ ಪಂದ್ಯವಾಡಲಿದೆ. ಇರಾನ್ ಮತ್ತು ಇಂಡೋನೇಷ್ಯಾ ತಂಡಗಳ ವಿರುದ್ಧವೂ ಭಾರತದ ಪಂದ್ಯಗಳಿವೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ