VVS Laxman: ದ್ರಾವಿಡ್ ಬದಲಿಗೆ ಲಕ್ಷ್ಮಣ್ ಟೀಂ ಇಂಡಿಯಾದ ಮುಖ್ಯ ಕೋಚ್, ಮಹತ್ವದ ಬದಲಾವಣೆ ಮಾಡಿದ BCCI

ಭಾರತ ಮತ್ತು ಐರ್ಲೆಂಡ್ (ndia vs Ireland) ಪ್ರವಾಸಕ್ಕೆ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ಬಿಸಿಸಿಐ (BCCI) ನೇಮಿಸಿದೆ.

ವಿವಿಎಸ್ ಲಕ್ಷ್ಮಣ್

ವಿವಿಎಸ್ ಲಕ್ಷ್ಮಣ್

  • Share this:
ಭಾರತ ಮತ್ತು ಐರ್ಲೆಂಡ್ (India vs Ireland) ಪ್ರವಾಸಕ್ಕೆ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ಬಿಸಿಸಿಐ (BCCI) ನೇಮಿಸಿದೆ. ಭಾರತ ಕ್ರಿಕೆಟ್ ತಂಡವು ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಜೂನ್ 26 ಮತ್ತು ಜೂನ್ 28 ರಂದು ಎರಡು ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ರಾಹುಲ್ ದ್ರಾವಿಡ್ (Rahul Dravid) ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಲಕ್ಷ್ಮಣ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.  ಈ ಕುರಿತು ಅಧಿಕೃತವಾಗಿ BCCI ತಿಳಿಸಿದ್ದು, ಹೀಗಾಗಿ ಐರ್ಲೆಂಡ್ ಪ್ರಸಾದ ವೇಳೆ ಟೀಂ ಇಂಡಿಯಾದಲ್ಲಿ ಕೋಚ್ ಆಗಿ ದ್ರಾವಿಡ್ ಇರುವುದಿಲ್ಲ.

ಟೀಂ ಇಂಡಿಯಾ ಕೋಚ್ ಆಗಿ ಲಕ್ಷ್ಮಣ್:

ಲಕ್ಷ್ಮಣ್ ಅವರು ಟೀಂ ಇಂಡಿಯಾ ಕೋಚ್ ಆಗಿ ಡಬ್ಲಿನ್‌ಗೆ ಹೋಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ರಾಹುಲ್ ದ್ರಾವಿಡ್ ಅವರನ್ನು ಆಕ್ಟಿಂಗ್ ಕೋಚ್ ಆಗಿ ನೇಮಿಸಿದಾಗ, ರವಿಶಾಸ್ತ್ರಿ ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಶ್ರೀಲಂಕಾ ಪ್ರವಾಸದ ವೇಳೆ ಶಿಖರ್ ಧವನ್ ಟೀಂ ಇಂಡಿಯಾ ನಾಯಕರಾಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ನಂತರ ಭಾರತ ತಂಡ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: IPL 2022 RCB vs LSG: ಆಕರ್ಷಕ ಶತಕ ಸಿಡಿಸಿದ ರಜತ್ ಪಾಟಿದಾರ್, ಲಕ್ನೋ ತಂಡಕ್ಕೆ 207 ರನ್​​ಗಳ ಟಾರ್ಗೆಟ್

ಐರ್ಲೆಂಡ್ ವಿರುದ್ಧ ಉತ್ತಮ ಸಾಧನೆ ಹೊಂದಿರುವ ಭಾರತಳ

ಭಾರತ ಇದುವರೆಗೆ ಐರ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳನ್ನು ಆಡಿದ್ದು, ಮೂರನ್ನೂ ಟೀಂ ಇಂಡಿಯಾ ಗೆದ್ದಿದೆ. 2009ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಎರಡು ತಂಡಗಳ ನಡುವೆ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಗೆದ್ದಿತ್ತು. ನಂತರ ಎರಡು ತಂಡಗಳು ಡಬ್ಲಿನ್‌ನಲ್ಲಿ ಎರಡು ಬಾರಿ ಮುಖಾಮುಖಿಯಾದವು, ಅದರಲ್ಲಿ ಭಾರತವು 76 ರನ್‌ಗಳಿಂದ ಮತ್ತು ಎರಡನೆಯದನ್ನು 143 ರನ್‌ಗಳಿಂದ ಗೆದ್ದಿತ್ತು.

ಇಂಗ್ಲೆಂಡ್‌ನಲ್ಲಿ ಅಭ್ಯಾಸ ಪಂದ್ಯ:

ಬರ್ಮಿಂಗ್ ಹ್ಯಾಮ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಜೂನ್ 24ರಿಂದ 27ರ ವರೆಗೆ ಲೀಸೆಸ್ಟರ್ ಶೈರ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ರಾಹುಲ್ ದ್ರಾವಿಡ್ ಜೂನ್ 15 ಅಥವಾ 16 ರಂದು ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಜುಲೈ 5 ರಂದು ಆರಂಭವಾಗಲಿದೆ. ಕಳೆದ ವರ್ಷ ಕೊರೋನಾ ಅವರ ಇಂಗ್ಲೆಂಡ್ ಪ್ರವಾಸದಿಂದಾಗಿ ಮುಂದೂಡಲ್ಪಟ್ಟ ಐದನೇ ಟೆಸ್ಟ್ ಈಗ ನಡೆಯಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: Sachin Tendulkar: ಅರ್ಜುನ್ ಆಯ್ಕೆ ಕುರಿತು ಕೊನೆಗೂ ಮೌನ ಮುರಿದ ಸಚಿನ್, ತಂಡದ ಆಯ್ಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ತೆಂಡೂಲ್ಕರ್

ಲಕ್ಷ್ಮಣ್ ಅವರಿಗೆ ತರಬೇತಿ ನೀಡಿದ ಅನುಭವ:

ವಿವಿಎಸ್ ಲಕ್ಷ್ಮಣ್ ಪ್ರಸ್ತುತ ಎನ್ ಸಿಎ ಮುಖ್ಯಸ್ಥರಾಗಿದ್ದಾರೆ. ಕಳೆದ ವರ್ಷ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆದ ನಂತರ ಲಕ್ಷ್ಮಣ್‌ಗೆ ಎನ್‌ಸಿಎ ಜವಾಬ್ದಾರಿ ನೀಡಲಾಗಿತ್ತು. ಲಕ್ಷ್ಮಣ್ ಅವರಿಗೂ ಕೋಚಿಂಗ್ ಅನುಭವವಿದೆ. ಅವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚಿಂಗ್ ಸ್ಟಾಫ್‌ನ ಭಾಗವಾಗಿದ್ದರು. ಅವರು ರಣಜಿ ಟ್ರೋಫಿಯಲ್ಲಿ ಬಂಗಾಳದ ಬ್ಯಾಟಿಂಗ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಲಕ್ಷ್ಮಣ್ ಈ ವರ್ಷದ ಆರಂಭದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಜೊತೆಗಿದ್ದರು.
Published by:shrikrishna bhat
First published: