Asia Cup 2022: ಏಷ್ಯಾ ಕಪ್​ಗೂ ಮುನ್ನ ಟೀಂ ಇಂಡಿಯಾಗೆ ಹೊಸ ಕೋಚ್​, ದ್ರಾವಿಡ್​ ಸ್ಥಾನ ತುಂಬಿದವರು ಯಾರು?

VVS Laxman: ರಾಹುಲ್​ ದ್ರಾವಿಡ್​ ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವ ಹಿನ್ನಲೆ ಅವರ ಬದಲಾಗಿ ಭಾರತ ತಂಡಕ್ಕೆ ಹೊಸ ಕೊಚ್​ ಆಗಿ ವಿವಿಎಸ್​ ಲಕ್ಷ್ಮಣ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.  

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಈಗಾಗಲೇ ಟೀಂ ಇಂಡಿಯಾ ದುಬೈಗೆ ತೆರಳಿದ್ದು, ಏಷ್ಯಾ ಕಪ್​ಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಜೊತೆಗೆ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಭಾರತ ತಂಡವನ್ನು ಪ್ರಕಟಿಸಿದ್ದು, ರೋಹಿತ್​ ಶರ್ಮಾ (Rohit Sharma) ಅವರನ್ನು ತಂಡದ ನಾಯಕರನ್ನಾಗಿ ಮತ್ತು ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಆದರೆ ಭಾರತ ತಂಡದ ಪ್ರಮುಖ ಕೋಚ್​ ಆಗಿ ಆಯ್ಕೆ ಆಗಿದ್ದ ರಾಹುಲ್ ದ್ರಾವಿಡ್​ (Rahul Dravid) ಅವರಿಗೆ ಕೋವಿಡ್-19 (Covid 19) ಪಾಸಿಟಿವ್ ದೃಢಪಟ್ಟ ಹಿನ್ನಲೆ ಅವರು ಏಷ್ಯಾ ಕಪ್ 2022ರಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದೀಗ ಅವರ ಸ್ಥಾನಕ್ಕೆ ಬೇರೊಬ್ಬ ಕೋಚ್​ ಅನ್ನು ಆಯ್ಕೆ ಮಾಡಿ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.

ಟೀಂ ಇಂಡಿಯಾಗೆ ನೂತನ ಕೋಚ್​:

ಹೌದು, ರಾಹುಲ್​ ದ್ರಾವಿಡ್​ ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವ ಹಿನ್ನಲೆ ಅವರ ಬದಲಾಗಿ ಭಾರತ ತಂಡಕ್ಕೆ ಹೊಸ ಕೊಚ್​ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.  ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾಕಪ್ 2022ಗೆ ಭಾರತ ತಂಡದ ಹಂಗಾಮಿ ಕೋಚ್​ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಕುರಿತು ಬಿಸಿಸಿಐ ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದೆ.

ಲಕ್ಷ್ಮಣ್ ಅವರ ಆಯ್ಕೆ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿದ್ದು, ‘ಜಿಂಬಾಬ್ವೆ ಮತ್ತು ಐರ್ಲೆಂಡ್​ ವಿರುದ್ಧ ನಡೆದ ಏಕದಿನ ಸರಣಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ರಾಹುಲ್​ ದ್ರಾವಿಡ್ ಅವರಿಗೆ ಕೊರೋನಾಗೆ ತುತ್ತಾಗಿರುವುದರಿಂದ ಏಷ್ಯಾಕಪ್​ಗೆ ತೆರಳುತ್ತಿಲ್ಲ. ಹೀಗಾಗಿ ಲಕ್ಷ್ಮಣ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಗಿದೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Riyan Parag: ಮಧ್ಯರಾತ್ರಿ ಆ ಮಾಡೆಲ್​ ಟ್ವೀಟ್​ಗೆ ಲೈಕ್​ ಒತ್ತಿದ ಖ್ಯಾತ ಕ್ರಿಕೆಟಿಗ! ನೈಟ್​ ಟೈಮ್​ ಅಲ್ಲಿ ಫುಲ್ ಆ್ಯಕ್ಟೀವ್​ ಈ ಆಟಗಾರ ಅಂತ ಟ್ರೋಲ್​

ಭರ್ಜರಿ ಅಭ್ಯಾಸದಲ್ಲಿ ಟೀಂ ಇಂಡಿಯಾ:

ಇನ್ನು, ಈಗಾಗಲೇ ದುಬೈಗೆ ತೆರಳಿರುವ ಭಾರತ ತಂಡ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್​ ಟಿ20 ಟೂರ್ನಿಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ಕುರಿತ ವಿಡಿಯೋ ತುಣುಕನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಟೀಂ ಇಂಡಿಯಾ ಆಟಗಾರರು ಉಳಿದ ದೇಶದ ಆಟಗಾರೊಂದಿಗೆ ಮಾತುಕತೆ ನಡೆಸುತ್ತಿದ್ದು, ವಿರಾಟ್​ ಕೊಹ್ಲಿ ಮತ್ತು ಪಾಕ್ ನಾಯಕ ಬಾಬರ್ ಅಜಂ ಇಬ್ಬರೂ ಮುಖಾಮುಖಿ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು

ಈಗಾಗಲೇ ಭಾರತ ತಂಡವನ್ನು ಏಷ್ಯಾ ಕಪ್​ಗಾಗಿ ಪ್ರಕಟಿಸಲಾಗಿದೆ. ಇದರ ನಡುವೆ ಇದೀಗ ಪಾಕ್ ತಂಡವನ್ನೂ ಪ್ರಕಟಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಣ ಬಿಗ್​ ಪೈಟ್​ ನಡೆಯಲಿದೆ. ಉಭಯ ತಂಡಗಳೆರಡೂ ಸಖತ್​ ಬಲಿಷ್ಠವಾಗಿದ್ದು, ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಮೊದಲ ಪಂದ್ಯವು ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಎಲ್ಲಡೆ ಏಷ್ಯಾ ಕಪ್​ 2022ರ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Yuzvendra Chahal: ಮನೆ ಬಿಟ್ಟು ತಾಯಿ ಮನೆಗೆ ಹೊರಟ ಧನಶ್ರೀ, ಕುಣಿದು ಕುಪ್ಪಳಿಸಿದ ಸ್ಪಿನ್​ ಮಾಂತ್ರಿಕ ಚಹಾಲ್​!

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: