ನಿನ್ನೆ ಭಾರತ ಕ್ರಿಕೆಟ್ (Team India) ತಂಡವು ಬಾಂಗ್ಲಾದೇಶ (Bangladesh) ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ (Test Series) ಯ ಎರಡನೇ ಪಂದ್ಯದಲ್ಲಿ ಮೂರು ವಿಕೆಟ್ ಗಳಿಂದ ಜಯ ಗಳಿಸಿ ಸರಣಿಯಲ್ಲಿ 2-0 ಇಂದ ಮುನ್ನಡೆ ಪಡೆದಿದ್ದು ನಮೆಗೆಲ್ಲಾ ಗೊತ್ತೇ ಇದೆ. ಬಾಂಗ್ಲಾದೇಶದ ಮೀರ್ಪುರ್ ನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್ ಆರ್ ಅಶ್ವಿನ್ (Spin Bowler R Ashwin) ಅವರು ಬ್ಯಾಟ್ ಮತ್ತು ಬೌಲ್ ಎರಡರಿಂದಲೂ ಭರ್ಜರಿ ಪದರ್ಶನವನ್ನು ನೀಡಿದರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಅಶ್ವಿನ್ ಅವರು ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ 62 ಎಸೆತಗಳನ್ನು ಎದುರಿಸಿ 42 ರನ್ ಗಳಿಸಿ ಅಜೇಯರಾಗಿ ಉಳಿದರು.
ಇಷ್ಟೇ ಅಲ್ಲದೆ ಅವರು ಎರಡನೇ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಒಟ್ಟು 6 ವಿಕೆಟ್ ಗಳನ್ನು ಸಹ ಪಡೆದು ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಗೆಲುವಿನ ನಂತರ, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಅಶ್ವಿನ್ ಅವರ ಈ ಅದ್ಭುತವಾದ ಪ್ರದರ್ಶನವನ್ನು ಒಂದೇ ಮಾತಿನಲ್ಲಿ ಹಾಡಿ ಹೊಗಳಿದ್ದಾರೆ ನೋಡಿ. ಅಶ್ವಿನ್ ಅವರ ಬಗ್ಗೆ ಸೆಹ್ವಾಗ್ ಅವರು ಮಾಡಿದ ಆ ಬೆರಗುಗೊಳಿಸುವ ಟ್ವೀಟ್ ಏನು ಅಂತ ನೀವು ನೋಡಿ.
ಟ್ವೀಟ್ ಅನ್ನು ಮತ್ತೊಮ್ಮೆ ನಿಜ ಮಾಡಿದ ಅಶ್ವಿನ್!
10 ದಿನಗಳ ಹಿಂದೆ ಅಶ್ವಿನ್ ಅವರನ್ನು ಟೆಸ್ಟ್ ಪಂದ್ಯಗಳಲ್ಲಿ ಪಡೆದ ವಿಕೆಟ್ ಮತ್ತು ರನ್ ಗಳ ಅಂಕೆ ಸಂಖ್ಯೆಗಳನ್ನು ಹೈಲೈಟ್ ಮಾಡಿ ಟ್ವೀಟ್ ಮಾಡಲಾಗಿತ್ತು. ಅದರಲ್ಲಿ ಶೇನ್ ವಾರ್ನರ್ ಮತ್ತು ರಿಚರ್ಡ್ ಹಾರ್ಡ್ಲಿ ಅವರಂತಹ ಮಹಾನ್ ಆಟಗಾರರೊಂದಿಗೆ ಇವರನ್ನು ಹೋಲಿಸಲಾಗಿತ್ತು. ಕೆಂಪು-ಬಾಲ್ ಕ್ರಿಕೆಟ್ ನಲ್ಲಿ ಅಶ್ವಿನ್ ಅವರ ಆಲ್ರೌಂಡ್ ಪಾತ್ರಕ್ಕಾಗಿ ಪರಿಗಣಿಸಲ್ಪಟ್ಟರೂ, ಪಟ್ಟಿಯನ್ನು ಮಾಡಿದಾಗಲೆಲ್ಲಾ ಅವರು ಸಾರ್ವಕಾಲಿಕ ಶ್ರೇಷ್ಠರಲ್ಲಿ ಸ್ಥಾನವನ್ನು ಪಡೆದಿರುವುದು ತುಂಬಾನೇ ವಿರಳ ಅಂತ ಹೇಳಬಹುದು.
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲು, 8 ಬ್ಯಾಟ್ಸ್ಮನ್ಗಳು 0ಕ್ಕೆ ಔಟ್; ಹಾಗಿದ್ರೆ ತಂಡದ ಸ್ಕೋರ್ ಎಷ್ಟು?
ಅಶ್ವಿನ್ ಆಟಕ್ಕೆ ಬಾಂಗ್ಲಾ ದಿಕ್ಕಾಪಾಲು!
ಭಾನುವಾರ, ಅಶ್ವಿನ್ ಅವರು ಬಾಂಗ್ಲಾದೇಶದ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದ್ದರಿಂದ ಕ್ರಿಕೆಟ್ ಕರಿಯರ್ ನಲ್ಲಿರುವ ಅಂಕಿ ಅಂಶಗಳನ್ನು ಎಂದಿಗೂ ಗಮನಿಸದೆ ಹೋಗಬಾರದು ಎಂಬುದನ್ನು ಮತ್ತೊಮ್ಮೆ ತೋರಿಸಿದರು. ಈ ಪಂದ್ಯದಲ್ಲಿ ಭಾರತವು ಮೂರು ವಿಕೆಟ್ ಗಳ ಜಯವನ್ನು ದಾಖಲಿಸುವುದರೊಂದಿಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಹ ಸಹಾಯ ಮಾಡಿತು.
ಕೊನೆಯ ಬ್ಯಾಟಿಂಗ್ ಭರವಸೆಯಾಗಿದ್ದರು ಅಶ್ವಿನ್
ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಟೇಲ್ ಅವರನ್ನು ಮೆಹಿದಿ ಹಸನ್ ಮಿರಾಜ್ ಬೌಲ್ಡ್ ಮಾಡಿದಾಗ ಶ್ರೇಯಸ್ ಅಯ್ಯರ್ ಭಾರತದ ಕೊನೆಯ ಬ್ಯಾಟಿಂಗ್ ಭರವಸೆಯಾಗಿದ್ದರು. ಭಾರತ 7 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದ್ದು, ತುಂಬಾನೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರು ಎಂದು ಹೇಳಬಹುದು. ಆದರೆ ಮೀರ್ಪುರ್ ದಲ್ಲಿ ಇನ್ನೂ ಅಶ್ವಿನ್ ಅವರ ಬ್ಯಾಟಿಂಗ್ ಪ್ರದರ್ಶನ ಇನ್ನೂ ಬಾಕಿ ಇತ್ತು.
The scientist did it. Somehow got this one. Brilliant innings from Ashwin and wonderful partnership with Shreyas Iyer. pic.twitter.com/TGBn29M7Cg
— Virender Sehwag (@virendersehwag) December 25, 2022
ಇದನ್ನೂ ಓದಿ: ಕೊಹ್ಲಿ-ಸಚಿನ್ ಮಾಡದ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್! ಈ ದಾಖಲೆ ಬರೆದ ಏಕೈಕ ಭಾರತೀಯ ಆಟಗಾರ
ಅಯ್ಯರ್ ಅವರಿಗೆ ಒಳ್ಳೆಯ ಒಂದು ಜೊತೆಯಾಟ ತುಂಬಾನೇ ಅಗತ್ಯವಿತ್ತು ಮತ್ತು ಭಾರತದ ಪರ ಕೊನೆಯ ಭರವಸೆ ಎಂಬಂತೆ ಆಡಲು ಮೈದಾನಕ್ಕೆ ಬಂದ ಅಶ್ವಿನ್ ಅಯ್ಯರ್ ಅವರೊಡನೆ ಸೇರಿಕೊಂಡು ಸಮಯೋಚಿತ ಆಟವಾಡಿ 4ನೇ ದಿನವೇ ಬಾಂಗ್ಲಾದೇಶದ ವಿರುದ್ದ ಪಂದ್ಯವನ್ನು ಗೆದ್ದುಕೊಂಡರು. ಈ ಜೋಡಿ ಮುರಿಯದ 71 ರನ್ ಗಳ ಜತೆಯಾಟವಾಡುವ ಮೂಲಕ ಭಾರತದ ಪರ ನಾಲ್ಕನೇ ಇನಿಂಗ್ಸ್ ನಲ್ಲಿ ಎಂಟನೇ ವಿಕೆಟ್ ಗೆ 2ನೇ ಅತ್ಯಧಿಕ ಮೊತ್ತ ಪೇರಿಸಿತ್ತು.
ಅಶ್ವಿನ್ ಆಟದ ಬಗ್ಗೆ ಸೆಹ್ವಾಗ್ ಹೇಳಿದ್ದೇನು?
"ಸೈಂಟಿಸ್ಟ್ ಅದನ್ನು ಮತ್ತೊಮ್ಮೆ ಮಾಡಿ ತೋರಿಸಿದ್ದಾರೆ.. ಅಶ್ವಿನ್ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ ಅದ್ಭುತ ಜೊತೆಯಾಟ ತುಂಬಾನೇ ಚೆನ್ನಾಗಿತ್ತು" ಎಂದು ಅವರು ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ