• Home
  • »
  • News
  • »
  • sports
  • »
  • Womens World Cup 2022: ಒಂದು ನೋ-ಬಾಲ್​ನಿಂದ ವಿಶ್ವಕಪ್​ ಕನಸು ಭಗ್ನ! ಈ ಬಗ್ಗೆ ಸೆಹ್ವಾಗ್​ ಹೇಳಿದ್ದೇನು? ನೀವೇ ನೋಡಿ

Womens World Cup 2022: ಒಂದು ನೋ-ಬಾಲ್​ನಿಂದ ವಿಶ್ವಕಪ್​ ಕನಸು ಭಗ್ನ! ಈ ಬಗ್ಗೆ ಸೆಹ್ವಾಗ್​ ಹೇಳಿದ್ದೇನು? ನೀವೇ ನೋಡಿ

ಸೆಹ್ವಾಗ್​

ಸೆಹ್ವಾಗ್​

ಭಾರತ ತಂಡಕ್ಕೆ ಜಯ ಸಿಗಬಹುದು ಎನ್ನುವಾಗ ಒಂದು ನೋ-ಬಾಲ್(No Ball) ಚೆಂಡು ಇಡೀ ಭಾರತ ಮಹಿಳಾ ಕ್ರಿಕೆಟ್ ತಂಡದ 2022 ರ ಮಹಿಳಾ ವಿಶ್ವಕಪ್ ಸರಣಿಯಿಂದ ಹೊರ ಬೀಳುವಂತೆ ಮಾಡಿತು ನೋಡಿ. ಈ ಒಂದು ನೋ-ಬಾಲ್ ಭಾರತೀಯ ಮಹಿಳಾ ತಂಡದ ವಿಶ್ವಕಪ್‌ನಲ್ಲಿ ಮುಂದಿನ ಹಾದಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ ಎಂದು ಹೇಳಬಹುದು.

ಮುಂದೆ ಓದಿ ...
  • Share this:

ಭಾನುವಾರದಂದು (ಮಾರ್ಚ್ 27) ಕ್ರೈಸ್ಟ್‌ ಚರ್ಚ್‌ನ ಹ್ಯಾಗ್ಲಿ ಓವಲ್‌(Oval)ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್(ICC Woman's World cup) 2022 ರ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa) ಮಹಿಳಾ ತಂಡವು ಭಾರತ(India) ಮಹಿಳಾ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಮಹಿಳಾ ವಿಶ್ವಕಪ್ 2022 ನ ಸೆಮಿ ಫೈನಲ್(Final) ಹಂತಕ್ಕೆ ಕಾಲಿಟ್ಟರು . ನಿನ್ನೆ ನಡೆದ ಈ ಪಂದ್ಯವನ್ನು ಹಲವರು ಮನೆಯಲ್ಲಿ ಕೂತು ನೋಡಿರುತ್ತಾರೆ. ಕೊನೆಯ ಓವರ್(Last Over) ವರೆಗೆ ಪಂದ್ಯವನ್ನು ತೆಗೆದುಕೊಂಡು ಹೋಗಿ, ಇನ್ನೇನು ಭಾರತ ತಂಡಕ್ಕೆ ಜಯ ಸಿಗಬಹುದು ಎನ್ನುವಾಗ ಒಂದು ನೋ-ಬಾಲ್(No Ball) ಚೆಂಡು ಇಡೀ ಭಾರತ ಮಹಿಳಾ ಕ್ರಿಕೆಟ್ ತಂಡದ 2022 ರ ಮಹಿಳಾ ವಿಶ್ವಕಪ್ ಸರಣಿಯಿಂದ ಹೊರ ಬೀಳುವಂತೆ ಮಾಡಿತು ನೋಡಿ. ಈ ಒಂದು ನೋ-ಬಾಲ್ ಭಾರತೀಯ ಮಹಿಳಾ ತಂಡದ ವಿಶ್ವಕಪ್‌ನಲ್ಲಿ ಮುಂದಿನ ಹಾದಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ ಎಂದು ಹೇಳಬಹುದು.


ಒಂದು ನೋ ಬಾಲ್​ನಿಂದ ವಿಶ್ಚಕಪ್​ ಕನಸು ಭಗ್ನ!


ಮಿಥಾಲಿ ರಾಜ್ ಅವರ ನಾಯಕತ್ವದ ಭಾರತ ಮಹಿಳಾ ತಂಡಕ್ಕೆ ಇದೊಂದು ಮರೆಯಲು ತುಂಬಾನೇ ಕಷ್ಟವಾಗುವ ಪಂದ್ಯವೆಂದು ಹೇಳಿದರೆ ತಪ್ಪಾಗುವುದಿಲ್ಲ. ಅಂತಿಮ ಓವರ್ ಅನ್ನು ಮಾಡಲು ದೀಪ್ತಿ ಶರ್ಮಾ ಅವರ ಕೈಗೆ ಚೆಂಡನ್ನು ನೀಡಲಾಗಿತ್ತು. ಆಗ ದಕ್ಷಿಣ ಆಫ್ರಿಕಾ ತಂಡಕ್ಕೆ ಬೇಕಾದ ರನ್‌ಗಳು ನೋ-ಬಾಲ್ ರೂಪದಲ್ಲಿ ಬಂದವು. ಅದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು. ಈ ರೋಚಕ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ವಿಶ್ವಕಪ್‌ನಿಂದ ಹೊರ ಬಿದ್ದ ನಂತರ ಭಾರತ ಕ್ರಿಕೆಟ್‌ನ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಏನು ಹೇಳಿದ್ದಾರೆ ನೋಡಿ.


ಇದನ್ನೂ ಓದಿ: KL ರಾಹುಲ್ ಈ ಅಫ್ಘಾನ್ ಬೌಲರ್ ಹೆಸರು ಕೇಳಿದ್ರೆ ನಡುಗುತ್ತಾರಂತೆ, ಇಂದಿನ ಪಂದ್ಯದ ಮೇನ್ ಆಟ್ರಾಕ್ಷನ್ ಇವರೇ!


ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಈ ನೋ-ಬಾಲ್‌ಗಳು ಭಾರತ ಕ್ರಿಕೆಟ್‌ಗೆ ಹೇಗೆ ದುಬಾರಿಯಾಗಿವೆ ಎಂಬುದನ್ನು ವಿವರಿಸಿದ್ದಾರೆ ನೋಡಿ. ಐಸಿಸಿ ಪಂದ್ಯಾವಳಿಗಳ ನಾಕೌಟ್ ಪಂದ್ಯಗಳಲ್ಲಿ ಭಾರತೀಯ ಪುರುಷರ ತಂಡದ ಹಿಂದಿನ ಫ್ರಂಟ್ ಫೂಟ್ ನೋ-ಬಾಲ್ ಪ್ರಮಾದಗಳ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಅವರು ಹಂಚಿ ಕೊಂಡಿದ್ದಾರೆ.


ನಿರಾಶಾದಾಯಕ ಅಂತ್ಯ ಎಂದ ಸೆಹ್ವಾಗ್


ದೀಪ್ತಿ ಶರ್ಮಾ ಅವರ ಇತ್ತೀಚಿನ ಘಟನೆಯ ಹೊರತಾಗಿ, ಸ್ಕ್ರೀನ್‌ಶಾಟ್‌ಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್ 2016 ಸೆಮಿಫೈನಲ್‌ನಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮಾಡಿದ ನೋ-ಬಾಲ್ ಫೋಟೋಗಳನ್ನು ಸಹ ಒಳಗೊಂಡಿದೆ.


ಇದನ್ನೂ ಓದಿ: ಮೊದಲ ಪಂದ್ಯದಲ್ಲೇ RCB ಖಾತೆಯಲ್ಲಿ ಕೆಟ್ಟ ದಾಖಲೆ, ಇದು ಬೇಡವಾಗಿತ್ತು ಅಂತಿದ್ದಾರೆ ಅಭಿಮಾನಿಗಳು


ಭಾರತೀಯ ಆಟಗಾರರಿಗೆ ಸೆಹ್ವಾಗ್​ ಕಿವಿಮಾತು!


"ಇದು ಬರೀ ನೋ-ಬಾಲ್‌ನಿಂದಾಗಿ ಭಾರತ ಕ್ರಿಕೆಟ್ ತಂಡವು ಇಂದು ಪಂದ್ಯ ಸೋತಿಲ್ಲ. ಆದರೆ ಕೆಲವೊಮ್ಮೆ ಒಂದು ಇಂಚು ಜಾಸ್ತಿ ಕಾಲು ಮುಂದೆ ಇಟ್ಟರೂ ಸಹ ಭಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಮತ್ತು ಆ ಮೈಲಿಗಲ್ಲನ್ನು ನಾವು ಸಾಧಿಸಲು ದಶಕಗಳೇ ತೆಗೆದುಕೊಳ್ಳುತ್ತವೆ ಮತ್ತು ಬಹುಶಃ ಅನೇಕ ಆಟಗಾರರಿಗೆ ಜೀವಮಾನದಲ್ಲಿ ಒಮ್ಮೆ ಸಾಧನೆಯಾಗಬಹುದು. ಭಾರತದ ಅಭಿಯಾನಕ್ಕೆ ನಿರಾಶಾದಾಯಕ ಅಂತ್ಯ" ಎಂದು ಸೆಹ್ವಾಗ್ ಬರೆದಿದ್ದಾರೆ.

Published by:ವಾಸುದೇವ್ ಎಂ
First published: