ಭಾರೀ ಚರ್ಚೆ ಹುಟ್ಟುಹಾಕಿದೆ ಸೆಹ್ವಾಗ್ ಮಾಡಿರುವ ಆ ಒಂದೇ ಒಂದು ಟ್ವೀಟ್

news18
Updated:August 6, 2018, 7:16 PM IST
ಭಾರೀ ಚರ್ಚೆ ಹುಟ್ಟುಹಾಕಿದೆ ಸೆಹ್ವಾಗ್ ಮಾಡಿರುವ ಆ ಒಂದೇ ಒಂದು ಟ್ವೀಟ್
news18
Updated: August 6, 2018, 7:16 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಡಿರುವ ಒಂದೇ ಒಂದು ಟ್ವೀಟ್ ​​ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯನ್ನೇ ಹುಟ್ಟುಹಾಕಿದೆ. ಬರ್ಮಿಂಗ್​ಹ್ಯಾಮ್​​ನ ಎಡ್ಜ್​ಬಾಸ್ಟನ್​ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಜಿದ್ದಾಜಿದ್ದಿನ ಫೈಟ್​ಗೆ ಸಾಕ್ಷಿಯಾಗಿತ್ತು. ಗೆಲುವು ಹಲವು ಏರಿಳಿತಗಳನ್ನು ಕಂಡು ಕೊನೆಗೆ ಆಂಗ್ಲರ ಮಡಿಲು ಸೇರಿತು. ಟೀಂ ಇಂಡಿಯಾ 162 ರನ್​ಗೆ ಆಲೌಟ್​ ಆಗಿ 31 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಟೀಮ್ ಇಂಡಿಯಾ ಸೋಲಿಗೆ ಕಾರಣಗಳನ್ನು ಹುಡುಕಿ ಚರ್ಚೆ ಮಾಡುತ್ತಿದ್ದ ಅಭಿಮಾನಿಗಳಿಗೆ ಸೆಹ್ವಾಗ್ ಅವರು ವೇದಿಕೆ ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು ಟೆಸ್ಟ್​ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ಹೊರಗಿಟ್ಟಿದ್ದು ಎಂಬುದು ಬಹುತೇಕ ಅಭಿಮಾನಿಗಳ ವಾದವಾಗಿತ್ತು. ಇದಕ್ಕೆ ಪೂರಕವೆಂಬಂತೆ ಮುಂದಿನ ಟೆಸ್ಟ್ ಆರಂಭಕ್ಕೂ ಮೊದಲೇ ಟ್ವೀಟ್​ ಕಿಂಗ್ ವೀರೂ ಪಟಾಕಿ ಸಿಡಿಸಿದ್ದಾರೆ. ‘ಮೊದಲ ಟೆಸ್ಟ್​ನಲ್ಲಿ ಭಾರತ ತಂಡದಿಂದ ಹೊರಬಿದ್ದು ಬೆಂಚ್ ಕಾದಿದ್ದ ಚೇತೇಶ್ವರ ಪೂಜಾರ ಅವರನ್ನು ಮುಂಭರುವ ಲಾರ್ಡ್ಸ್​​ ಟೆಸ್ಟ್​ನಲ್ಲಿ ಚಾನ್ಸ್​ ನೀಡಬೇಕಾ’ ಎಂದು ಟ್ವಿಟರ್​​ನಲ್ಲಿ ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಆಯ್ಕೆ ಸಮಿತಿಗೆ ಪರೋಕ್ಷವಾಗಿ ಸೆಹ್ವಾಗ್ ಆವರು ಟಾಂಗ್ ನೀಡಿದ್ದಾರೆ.

 
ವಿರೇಂದ್ರ ಸೆಹ್ವಾಗ್​ರ ಈ ಟ್ವೀಟ್​​ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಮಂದಿ ಪೂಜಾರಗೆ ಮುಂದಿನ ಟೆಸ್ಟ್​ನಲ್ಲಿ ಆಡುವ 11ರಲ್ಲಿ ಅವಕಾಶ ಕೊಡಬೇಕು ಎಂದು ಟ್ವೀಟ್​ ಮಾಡಿದ್ದಾರೆ. ಇನ್ನೂ ಕೆಲವರು ಮೊದಲ ಟೆಸ್ಟ್​ ಪಂದ್ಯದ ತಂಡವನ್ನು ಮುಂದುವರಿಸಬೇಕೆಂದು ಕೊಹ್ಲಿ ಸೆಲೆಕ್ಷನ್​ಗೆ ಬೆಂಬಲ ಕೊಟ್ಟಿದ್ದಾರೆ. ಆದರೆ ತಂಡದ ಆಯ್ಕೆಯ ವಿಚಾರವಾಗಿ ವೀರೂ ಈ ಕಿಡಿ ಹಚ್ಚಿದ್ದು ಯಾಕೆ ಎಂಬುದು ಮಾತ್ರ ತಿಳಿದು ಬರುತ್ತಿಲ್ಲ. ಅಭಿಮಾನಿಗಳಿಂದ ಬರುವ ಉತ್ತರವನ್ನು ಟೀಮ್ ಇಂಡಿಯಾದ ಆಯ್ಕೆ ಸಮಿತಿಗೆ ತಿಳಿಸುವುದು ಸೆಹ್ವಾಗ್​ರ ಉದ್ದೇಶವಾಗಿದ್ಯಾ ಎನ್ನುವ ಅನುಮಾನವನ್ನು ಸೃಷ್ಟಿಸಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ