ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳಬೇಡಿ: ಟೀಂ ಇಂಡಿಯಾಕ್ಕೆ ವಿರೇಂದ್ರ ಸೆಹ್ವಾಗ್ ಸಲಹೆ

news18
Updated:July 26, 2018, 5:42 PM IST
ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳಬೇಡಿ: ಟೀಂ ಇಂಡಿಯಾಕ್ಕೆ ವಿರೇಂದ್ರ ಸೆಹ್ವಾಗ್ ಸಲಹೆ
news18
Updated: July 26, 2018, 5:42 PM IST
ನ್ಯೂಸ್ 18 ಕನ್ನಡ

ನವ ದೆಹಲಿ (ಜುಲೈ. 26): ಮುಂಬರುವ ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳಬೇಡಿ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಟೀಮ್ ಇಂಡಿಯಾಗೆ​ ಕರೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆ ಆದ ವೇಳಾಪಟ್ಟಿ ಪ್ರಕಾರ ಏಷ್ಯಾಕಪ್​​​ನಲ್ಲಿ ಟೀಮ್ ಇಂಡಿಯಾ ಸತತ 2 ದಿನಗಳ ಕಾಲ ಪಂದ್ಯವನ್ನು ಆಡಬೇಕಿದೆ. ಸೆಪ್ಟೆಂಬರ್ 18 ರಂದು ಟೂರ್ನಿಗೆ ಕ್ವಾಲಿಫೈಡ್​ ಆದ ತಂಡದೊಂದಿಗೆ ಮೊದಲ ಪಂದ್ಯವನ್ನು ಆಡಿದರೆ, ಸೆಪ್ಟೆಂಬರ್ 19 ರಂದು ಪಾಕಿಸ್ತಾನ ವಿರುದ್ಧ ಆಡಬೇಕಿದೆ. ಹೀಗಾಗಿ ಪಂದ್ಯಗಳ ನಡುವೆ ಕನಿಷ್ಠ ವಿಶ್ರಾಂತಿ ಅವಧಿಯು ಇಲ್ಲದೆ ಇರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ಸೆಹ್ವಾಗ್ ಕೂಡ ಇದರ ವಿರುದ್ಧ ಧ್ವನಿಗೂಡಿಸಿದ್ದು ಏಷ್ಯಾಕಪ್​​​ನಲ್ಲಿ ಭಾಗವಹಿಸಬೇಡಿ ಎಂಬ ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮೊದಲು ಬಿಸಿಸಿಐನ ಹಿರಿಯ ಸದ್ಯಸ್ಯರೊಬ್ಬರು ಏಷ್ಯಾಕಪ್​​ ವೇಳಾಪಟ್ಟಿಯನ್ನು ಮೈಂಡ್​​ಲೆಸ್​​(ತಲೆ ಇಲ್ಲದ ನಿರ್ಧಾರ) ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ. ವೇಳಾಪಟ್ಟಿ ತಯಾರಿಸುವಾಗ ಒಂದೇ ರೀತಿಯಲ್ಲಿ ತಯಾರಿಸಬೇಕು, ಬಿಡುಗಡೆಯಾಗಿರುವ ವೇಳಾಪಟ್ಟಿಯನ್ನು ಬದಲಾಯಿಸಬೇಕೆಂದು ಹೇಳಿದ್ದರು.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ