Virat Kohli: ಏಷ್ಯಾ ಕಪ್​ಗೂ ಮುನ್ನ ಧೋನಿ ನೆನೆದ ವಿರಾಟ್​! ಭಾವುಕ ಪೋಸ್ಟ್ ಕಂಡು ಕಣ್ಣೀರಿಟ್ಟ ಕ್ರಿಕೆಟ್ ಅಭಿಮಾನಿಗಳು

Virat Kohli: ನಾಳೆಯಿಂದ ಏಷ್ಯಾ ಕಪ್​ 2022 ಆರಂಭವಾಗಲಿದೆ. ಈಗಾಗಲೇ ಈ ಬಿಗ್​ ಟೂರ್ನಿಗೆ ಟೀಂ ಇಂಡಿಯಾ ಭರ್ಜರಿಯಾಗಿ ಸಿದ್ಧವಾಗಿದೆ. ಆದರೆ ಇದರ ನಡುವೆ ವಿರಾಟ್​ ಕೊಹ್ಲಿ ಮಾಡಿರುವ ಒಂದು ಟ್ವೀಟ್​ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

ಧೋನಿ-ವಿರಾಟ್​

ಧೋನಿ-ವಿರಾಟ್​

  • Share this:
ಟೀಂ ಇಂಡಿಯಾದ ಮಾಜಿ ನಾಯಕ, ವಿರಾಟ್ ಕೊಹ್ಲಿ (Virat Kohli) ಸದ್ಯ ಏಷ್ಯಾ ಕಪ್​ಗಾಗಿ ದುಬೈಗೆ ತೆರಳಿದ್ದಾರೆ. ನಾಳೆಯಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಏಷ್ಯಾ ಕಪ್​ಗೆ ಅದ್ಧೂರಿಯಾಗಿ ಚಾಲನೆ ದೊರಕಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (Sri Lanka vs Afghanistan) ತಂಡಗಳು ಸೆಣಸಾಡಲಿವೆ. ಆಗಸ್ಟ್ 28ರಂದು ರವಿವಾರ ಟೀಂ ಇಂಡಿಯಾ (Team India) ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ಎದುರು ಸೆಣಸಾಡಲಿದೆ. ಈ ಪಂದ್ಯಕ್ಕಾಗಿ 2 ದೇಶಗಳ ಕ್ರಿಕೆಟ್​ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ವಿರಾಟ್​ ಕೊಹ್ಲಿ (Virat Kohli) ತಮ್ಮ ಟ್ವಿಟರ್​ ನಲ್ಲಿ ವಿಶೇಷವಾದ ಫೋಟೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಧೋನಿ ಫೋಟೋ ಹಂಚಿಕೊಂಡ ವಿರಾಟ್​ ಕೊಹ್ಲಿ:

ಏಷ್ಯಾ ಕಪ್​ಗೆ ಸಿದ್ಧವಾಗುತ್ತಿರುವ ವಿರಾಟ್​ ಕೊಹ್ಲಿ ಟ್ವಿಟರ್​ ನಲ್ಲಿ ಧೋನಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತಮ್ಮ ವೃತ್ತಿ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬರೆದುಕೊಂಡಿದ್ದಾರೆ, ಮಹೇಂದ್ರ ಸಿಂಗ್​ ಧೋನಿ ಜೊತೆಗೆ ಆಡಿರುವ ಕ್ಷಣಗಳ ಬಗ್ಗೆ ಕೊಹ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಈ ವಿವರಣೆಗೆ ಅವರು ಒಂದು ಕಾರಣವನ್ನೂ ನೀಡಿದ್ದಾರೆ. ಧೋನಿ ನಾಯಕತ್ವದಲ್ಲಿ ಅನೇಕ ವರ್ಷಗಳ ಕಾಲ ಆಡಿರುವ ವಿರಾಟ್​ ಕೊಹ್ಲಿ, ವಿಶ್ವಕಪ್​​, ಏಷ್ಯಾ ಕಪ್​ ಸೇರಿಂದತೆ ಹಲವು ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, ‘ಧೋನಿ ನಾಯಕತ್ವದಲ್ಲಿ ವಿಶ್ವಾಸಾರ್ಹ ಉಪನಾಯಕನಾಗಿರುವುದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಆನಂದದಾಯಕ ಸಮಯವಾಗಿದೆ. ಅವರೊಂದಿಗಿನ ನಮ್ಮ ಪಾಲುದಾರಿಕೆಗಳು ಯಾವಾಗಲೂ ನನಗೆ ವಿಶೇಷವಾಗಿರುತ್ತವೆ. 7+18‘ ಎಂದು ಹೃದಯದ ಇಮೋಜಿ ಅನ್ನು ಹಾಕಿ ಬರೆದುಕೊಂಡಿದ್ದಾರೆ. ಇಲ್ಲಿ 7 ಎನ್ನುವುದು ಧೋನಿ ಅವರ ಜರ್ಸಿ ನಂಬರ್​ ಮತ್ತು 18 ಎನ್ನುವುದು ಕೊಹ್ಲಿ ಜರ್ಸಿ ನಂಬರ್​ ಆಗಿದೆ. ಈ ಫೋಟೋವು  2016 ಟಿ20 ವಿಶ್ವಕಪ್​ ಸಮಯದ್ದಾಗಿದ್ದು, ಈ ಪಂದ್ಯದಲ್ಲಿ ಕೊಹ್ಲಿ  51 ಎಸೆತಗಳಲ್ಲಿ 82 ರನ್ ಸಿಡಿಸಿದ್ದರು. ಅಲ್ಲದೇ ಈ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್​ ಗಳಿಂದ ಗೆದ್ದಿತ್ತು.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಭರ್ಜರಿ ತಯಾರಿ! ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಡೀಟೆಲ್ಸ್

ಭಾರತ-ಪಾಕ್​ ಪಂದ್ಯಕ್ಕೆ ದಿನಗಣನೆ:

ಏಷ್ಯಾ ಕಪ್ 2022 ನಾಳೆಯಿಂದ (ಆಗಸ್ಟ್ 27) ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಆಗಸ್ಟ್ 28ರಂದು ನಡೆಯಲಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಪಾಕ್​ ಕದನ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪ್ರಾರಂಭವಾಗಲಿದೆ. 7 ಗಂಟೆಗೆ ಟಾಸ್ ನಡೆಯಲಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney+Hotstar ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: IND vs PAK: ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ಕಾಯುತ್ತಿದ್ದೀರಾ? ಇಲ್ಲಿದೆ ಮ್ಯಾಚ್​ನ ಫುಲ್​ ಡೀಟೇಲ್ಸ್

ಏಷ್ಯಾ ಕಪ್​ 2022ಗೆ ಆಯ್ಕೆ ಆಗಿರುವ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: