Virat Kohli: ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ತಿರುಗೇಟು ನೀಡಿದ ನೆಟ್ಟಿಗರು!

ಕೊಹ್ಲಿ ಅವರು ಇಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಪೋಸ್ಟ್ ಸಹ ಜಾಹಿರಾತಿನಲ್ಲಿ ಪ್ರಚಾರ ಮಾಡಿದಂತೆ ಇದೆ ಎಂದು ನೆಟ್ಟಿಗರು ಅಂದುಕೊಂಡದ್ದು ಖಂಡಿತ

Virat kohli

Virat kohli

  • Share this:

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯು ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅವರು ಹಾಕಿದಂತಹ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಮತ್ತು ಭಾರತದ ಒಲಿಂಪಿಯನ್‌ಗಳನ್ನು ಒಂದೇ ವಾಕ್ಯದಲ್ಲಿ ಉಲ್ಲೇಖಿಸಲಾಗಿದ್ದು, ಅಭಿಮಾನಿಗಳು ಅದನ್ನು ಅರ್ಥ ಮಾಡಿಕೊಳ್ಳಲು ತುಂಬಾನೇ ಕಷ್ಟಪಡುತ್ತಿದ್ದಾರೆ. ಅವರು ಹಾಕಿದ ಆ ಪೋಸ್ಟ್ ಒಂದು ರೀತಿಯಲ್ಲಿ ಜಾಹಿರಾತಿನ ಪ್ರಚಾರದಂತೆ ಭಾಸವಾಗುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ನೀವು ಕ್ರಿಕೆಟ್ ಅನ್ನು ಫಾಲೋ ಮಾಡುತ್ತಿದ್ದರೆ ಕೊಹ್ಲಿ ಭಾರತದ ಉನ್ನತ ಶ್ರೇಣಿಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಇವರು ಇರುವುದಂತೂ ಗ್ಯಾರಂಟಿ. ಬ್ರ್ಯಾಂಡ್‌ಗಳನ್ನು ಮತ್ತು ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಯಶಸ್ವಿ ಕ್ರಿಕೆಟಿಗನನ್ನು ತಮ್ಮ ಜಾಹಿರಾತಿನಲ್ಲಿ ಹಾಕಿಕೊಳ್ಳುತ್ತಾರೆ.


ಆದರೆ ಕೊಹ್ಲಿ ಅವರು ಇಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಪೋಸ್ಟ್ ಸಹ ಜಾಹಿರಾತಿನಲ್ಲಿ ಪ್ರಚಾರ ಮಾಡಿದಂತೆ ಇದೆ ಎಂದು ನೆಟ್ಟಿಗರು ಅಂದುಕೊಂಡದ್ದು ಖಂಡಿತ. ಪೂಮಾ 2017 ರಲ್ಲಿ 110 ಕೋಟಿ ಮೊತ್ತದ ಒಪ್ಪಂದಕ್ಕೆ ಕೊಹ್ಲಿ ಅವರನ್ನು ನೇಮಕ ಮಾಡಿದ್ದು ನೆನಪಿದೆಯೇ? ಜಾಹೀರಾತುಗಳಲ್ಲಿ ಕೊಹ್ಲಿಯನ್ನು ನೋಡುವುದು ಅವರ ಅಭಿಮಾನಿಗಳಿಗೆ ಒಂದು ವಿಶೇಷವಾದ ಸಂಗತಿಯಾಗಿತ್ತು. ಆದರೆ ಇತ್ತೀಚೆಗೆ ಹಾಕಿದ ಪೋಸ್ಟ್ ನೆಟ್ಟಿಗರು ಅರ್ಥ ಮಾಡಿಕೊಳ್ಳಲು ತುಂಬಾ ಪರದಾಡಿದ್ದಾರೆ.


ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್ ನಲ್ಲಿ "ಭಾರತೀಯ ಒಲಿಂಪಿಯನ್ನರಲ್ಲಿ 10% ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಬಂದವರಾಗಿದ್ದು, ಎಲ್‌ಪಿಯು ವಿದ್ಯಾರ್ಥಿಗಳನ್ನು ಭಾರತೀಯ ಕ್ರಿಕೆಟ್ ತಂಡಕ್ಕೂ ಕಳುಹಿಸುತ್ತದೆ ಎಂದು ನಾನು ಭಾವಿಸುತ್ತೇನೆ!" ಎಂದು ಬರೆದಿದ್ದಾರೆ. ಮನಪ್ರೀತ್ ಸಿಂಗ್, ನೀರಜ್ ಚೋಪ್ರಾ, ನಿಷದ್ ಕುಮಾರ್, ಅಮೋಜ್ ಜಾಕೋಬ್, ಮನದೀಪ್ ಸಿಂಗ್, ಭಜರಂಗ್ ಪೂನಿಯಾ ಮತ್ತು ವರುಣ್ ಕುಮಾರ್ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ.


"ಇದನ್ನು ಒಂದು ಮೇಮ್ ಪುಟದಿಂದ ಪೋಸ್ಟ್ ಮಾಡಲಾಗಿದೆ ಎಂದು ನಾನು ಊಹಿಸಿದ್ದೇನೆ" ಎಂದು ಕೊಹ್ಲಿಯ ಪೋಸ್ಟ್‌ ಗೆ ಒಬ್ಬ ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿಯ ಪೋಸ್ಟ್ ಒಂದು ರೀತಿಯಲ್ಲಿ ಪ್ರಚಾರದ ಪೋಸ್ಟ್‌ ಆಗಿದೆ ಎಂದು ಕೆಲವರು ಬರೆದಿದ್ದಾರೆ. ಇನ್ನೂ ಕೆಲವೊಬ್ಬರು ವಿರಾಟ್ ಕೊಹ್ಲಿ ಅವರೇ ಇಲ್ಲಿಯೂ ಪ್ರಚಾರವೇ ಎಂದು ಕೇಳಿದ್ದಾರೆ.


ಇದರ ಮಧ್ಯೆ, ಶಿಖರ್ ಧವನ್ ಅವರ ನೇತೃತ್ವದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಯುವ ಇಶಾನ್ ಕಿಶನ್ ಅವರನ್ನು ನೋಡಿದಾಗ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಖುಷಿಯಾಗಿದ್ದು, ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಿಂದ ಕೊಹ್ಲಿ ಅವರು ದೂರ ಉಳಿದಿದ್ದಾರೆ.


ಶ್ರೀಲಂಕಾ ಮತ್ತು ಭಾರತ ನಡುವಣ ನಡೆಯಬೇಕಿದ್ದ ಎರಡನೆಯ ಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು ಭಾರತ ತಂಡದ ಆಲ್ರೌಂಡರ್ ಆದ ಕೃನಾಲ್ ಪಾಂಡೆಯವರಿಗೆ ಕೋವಿಡ್ ಪಾಸಿಟಿವ್ ಆದ್ದರಿಂದ ಮುಂದೂಡಲಾಯಿತು.ಕೃನಾಲ್ ಪಾಂಡೆಯವರನ್ನು ಏಳು ದಿವಸಗಳ ಕಾಲ ಐಸೋಲೇಷನ್ ನಲ್ಲಿ ಇಡಲಾಗುತ್ತಿದೆ ಎಂದು ತಂಡದವರು ಹೇಳಿದ್ದಾರೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


First published: