Virat Kohli: ರಾಷ್ಟ್ರಗೀತೆಗೆ ಅವಮಾನಿಸಿದ್ರಾ ವಿರಾಟ್ ಕೊಹ್ಲಿ? ಜಾಲತಾಣಗಳಲ್ಲಿ ಆಕ್ರೋಶದ ಅಲೆ

ರಾಷ್ಟ್ರಗೀತೆ ಆರಂಭವಾದ ಬಳಿಕ ಕ್ಯಾಮೆರಾದವರು ವಿರಾಟ್ ಕೊಹ್ಲಿ ಕಡೆಗೆ ಹೆಚ್ಚು ಪೋಕಸ್‌ ಮಾಡಿದ್ದರು. ಎಲ್ಲೋ ಕಳೆದು ಹೋಗಿರುವವರಂತೆ ಕಂಡ ಕೊಹ್ಲಿ, ಚ್ಯೂಯಿಂಗ್ ಗಮ್ ಜಗಿಯುತ್ತಾ ತಮ್ಮದೇ ಲೋಕದಲ್ಲಿ ಮುಳುಗಿದ್ದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ರಾಷ್ಟ್ರಕ್ಕೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ರಾಷ್ಟ್ರಧ್ವಜ (National Flag), ರಾಷ್ಟ್ರಗೀತೆಯನ್ನು (National Anthem) ಗೌರವಿಸುವುದೂ ಕೂಡ ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯ. ರಾಷ್ಟ್ರ, ರಾಷ್ಟ್ರದ ಗೌರವಕ್ಕಿಂತ ಯಾರೂ ದೊಡ್ಡವರಲ್ಲ. ಅವರು ಪ್ರಧಾನಿಯಾದರೂ ಸರಿ, ಟೀಂ ಇಂಡಿಯಾ (Team India) ನಾಯಕನಾದರೂ ಸರಿ. ಪ್ರತಿಯೊಬ್ಬರೂ ದೇಶಕ್ಕೆ ಗೌರವ ನೀಡಲೇ ಬೇಕು. ಇದೇ ವಿಚಾರದಲ್ಲಿ ಈಗ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿವಾದಕ್ಕೆ ಒಳಗಾಗಿದ್ದಾರೆ. ಕೇಪ್‌ ಟೌನ್‌ನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಹಣಾಹಣಿ ಆರಂಭಕ್ಕೂ ಮೊದಲೇ ಟ್ವಿಟರ್‌ನಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅನಗತ್ಯ ಕಾರಣವೊಂದಕ್ಕೆ ಭಾರಿ ಟ್ರೋಲ್‌ ಆಗುತ್ತಿದ್ದಾರೆ.

  ರಾಷ್ಟ್ರಗೀತೆಗೆ ಅವಮಾನಿಸಿದ ಕೊಹ್ಲಿ

  ಹೌದು ಈ ರೀತಿಯದ್ದೊಂದು ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಕೇಪ್‌ ಟೌನ್‌ನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ಕೊಹ್ಲಿ ರಾಷ್ಟ್ರಗೀತೆಗೆ ಅಮಾನಿಸಿದ್ದಾರೆ ಎನ್ನಲಾಗಿದೆ. ನಿನ್ನೆ ನಡೆದ 3ನೇ ಏಕದಿನ ಕ್ರಿಕೆಟ್‌ ಪಂದ್ಯದ ಆರಂಭಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆಯನ್ನು ಮೊಳಗಿಸಲಾಯ್ತು. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಬಳಗ ರಾಷ್ಟ್ರಗೀತೆ ಹಾಡುವ ಮೂಲಕ ತಾಯ್ನಾಡಿಗೆ ಗೌರವ ಸೂಚಿಸಿದರು. ಆದರೆ ಕೊಹ್ಲಿ ಮಾತ್ರ ಬೇರೆಯದ್ದೇ ಲೋಕದಲ್ಲಿದ್ದರು.

  ಇದನ್ನೂ ಓದಿ: Republic Day 2022: ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದೇಶ, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ-ಗಲ್ಲಿ ಗಲ್ಲಿಯಲ್ಲೂ ಖಾಕಿ ಹದ್ದಿನಕಣ್ಣು!

  ಚ್ಯೂಯಿಂಗ್ ಗಮ್ ಅಗೆಯುತ್ತಾ ನಿಂತಿದ್ದ ಕೊಹ್ಲಿ!

  ಟೀಂ ಇಂಡಿಯಾದ ಎಲ್ಲಾ ಆಟಗಾರರು ಎದ್ದು ನಿಂತು ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡಿಗೆ ಗೌರವ ಸೂಚಿಸುತ್ತಾ ಇದ್ದರು. ಆದರೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಚ್ಯೂಯಿಂಗ್ ಗಮ್‌ ಅಗೆಯುತ್ತಾ ನಿಂತ್ತಿದ್ದರು. ಇದು ಲೈವ್‌ ಟೆಲಿಕಾಸ್ಟ್‌ ಕೂಡ ಆಗಿದೆ.  ಏಕದಿನ ಸರಣಿ ತಂಡದ ನಾಯಕತ್ವ ಕಳೆದುಕೊಂಡ ಕಾರಣ ಟೀಂ ಇಂಡಿಯಾದ ಸಾಲಿನಲ್ಲಿ ಮೊದಲಿಗನಾಗಿ ವಿರಾಟ್‌ ಕೊಹ್ಲಿ ನಿಂತಿರಲಿಲ್ಲ. ಆದರೆ ರಾಷ್ಟ್ರಗೀತೆ ಆರಂಭವಾದ ಬಳಿಕ ಕ್ಯಾಮೆರಾದವರು ವಿರಾಟ್ ಕೊಹ್ಲಿ ಕಡೆಗೆ ಹೆಚ್ಚು ಪೋಕಸ್‌ ಮಾಡಿದ್ದರು. ಎಲ್ಲೋ ಕಳೆದು ಹೋಗಿರುವವರಂತೆ ಕಂಡ ಕೊಹ್ಲಿ, ಚ್ಯೂಯಿಂಗ್ ಗಮ್ ಜಗಿಯುತ್ತಾ ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಅತ್ತ ರಾಷ್ಟ್ರಗೀತೆ ಮೊಳಗುತ್ತಲೇ ಇದ್ದರೂ ಅಲರ್ಟ್ ಆಗದೇ, ಯಡವಟ್ಟು ಮಾಡಿಕೊಂಡರು.

  ನಾಯಕತ್ವ ಕಳೆದುಕೊಂಡ ಮೇಲೆ ವಿರಾಟ್ ಕೊಹ್ಲಿ ಡಲ್

  ಕ್ರೀಡಾಭಿಮಾನಿಗಳು ಹಾಗೂ ವಿರಾಟ್ ಕೊಹ್ಲಿ ಕಟ್ಟಾ ಅಭಿಮಾನಿಗಳು ಇಂಥದ್ದೊಂದು ಚರ್ಚೆ ಶುರು ಮಾಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ಸಿ ಕಳೆದುಕೊಂಡ ಬಳಿಕ ಕೊಹ್ಲಿ ತೀರಾ ಉದಾಸೀನ ಸ್ವಭಾವ ಪ್ರದರ್ಶಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಕೂಡ ನಾಯಕತ್ವ ಇಲ್ಲದ ಕೊಹ್ಲಿ ಅವರಲ್ಲಿ ಈ ಹಿಂದಿನ ಹುರುಪು ಕಾಣಲಿಲ್ಲ ಅಂತ ವಿಶ್ಲೇಷಿಸಿದ್ದಾರೆ.

  ಇದನ್ನೂ ಓದಿ:Vamika Kohli: ಕೊನೆಗೂ ಅಭಿಮಾನಿಗಳಿಗೆ ಸಿಕ್ತು ಕೊಹ್ಲಿ ಪುತ್ರಿ ದರ್ಶನ.. ಥೇಟ್​ ಅಪ್ಪನಂತೆ ಮುದ್ದಾಗಿದ್ದಾಳೆ ವಮಿಕಾ!

  ದೇಶಾದ್ಯಂತ ಕ್ರೀಡಾಭಿಮಾನಿಗಳ ಆಕ್ರೋಶ

  ವಿರಾಟ್ ಕೊಹ್ಲಿ ವರ್ತನೆಗೆ ಕ್ರೀಡಾಭಿಮಾನಿಗಳಷ್ಟೇ ಅಲ್ಲದೇ, ಜನಸಾಮಾನ್ಯರೂ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ರಾಷ್ಟ್ರಗೀತೆಗೆ ಗೌರವ ಸೂಚಿಸದೇ, ಚ್ಯೂಯಿಂಗ್ ಗಮ್ ಅಗೆಯುತ್ತಿರುವುದನ್ನು ಕಂಡು ಕಿಡಿಕಾರಿದ್ದಾರೆ. ಟ್ವಿಟ್ಟರ್ ಸೇರಿದಂತೆ ಅನೇಕ ಸೋಷಿಯಲ್‌ ಮೀಡಿಯಾಗಳಲ್ಲಿ ಕೊಹ್ಲಿಯನ್ನು ತರಾಟೆಗದೆ ತೆಗೆದುಕೊಂಡಿದ್ದಾರೆ. “ಕ್ರೀಡಾಂಗಣದಲ್ಲಿ ನಮ್ಮ ದೇಶದ ರಾಷ್ಟ್ರಗೀತೆ ಮೊಳಗುತ್ತಿರುವ ವೇಳೆ ಹೀಗೆ ಚ್ಯೂಯಿಂಗ್ ಗಮ್ ಅಗೆಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿಯಾ?” ಅಂತ ಟೀಕಿಸಿದ್ದಾರೆ.

  ವರದಿ: ಅಣ್ಣಪ್ಪ ಆಚಾರ್ಯ
  Published by:Latha CG
  First published: