Virat Kohli: ಏಷ್ಯಾಕಪ್​ಗೆ ವಿರಾಟ್ ಭರ್ಜರಿ ತಯಾರಿ, ವರ್ಕೌಟ್ ವಿಡಿಯೋ ಹಂಚಿಕೊಂಡ ಕೊಹ್ಲಿ

ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್​ 2022ಗೆ ಈಗಾಗಲೇ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಏಷ್ಯಾ ಕಪ್​ ಮೂಲಕ ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ ಶ್ರೀಲಂಕಾದಲ್ಲಿ ಆಯೋಜನೆ ಆಗಿದ್ದ ಟೂರ್ನಿಯು ಅನಿವಾರ್ಯ ಕಾರಣಗಳಿಂದ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಅಲ್ಲದೇ ಕಿಂಗ್​ ಕೊಹ್ಲಿ  (Virat Kohli)  ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಿದ್ದಾರೆ. ಅಲ್ಲದೇ ಆಗಸ್ಟ್ 28ರಂದು ನಡೆಯುವ ಭಾರತ ತಂಡದ ಮೊದಲ ಪಂದ್ಯದಲ್ಲಿಯೇ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಡಲಿದೆ. ಹೀಗಾಗಿ ಈ ಟೂರ್ನಿಗಾಗಿ ವಿರಾಟ್​ ಕೊಹ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದು, ವಿಡಿಯೋವನ್ನು ಸಹ ಕೊಹ್ಲಿ ಹಂಚಿಕೊಂಡಿದ್ದಾರೆ.

ಏಷ್ಯಾಕಪ್​ಗಾಗಿ ಕೊಹ್ಲಿ ಭರ್ಜರಿ ​ ತಯಾರಿ:

ಹೌದು, ಈಗಾಗಲೇ ಕಳಪೆ ಫಾರ್ಮ್​ನಿಂದಾಗಿ ಕೆಲ ಟೂರ್ನಿಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಏಷ್ಯಾ ಕಪ್​ 2022 ಮೂಲಕ ಭರ್ಜರಿ ಆಗಿ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಈಗಾಗಲೇ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಕೊಹ್ಲಿ ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದು, ಈ ಕುರಿತ ವಿಡಿಯೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದು, ವೇಟ್‌ಲಿಫ್ಟಿಂಗ್ ಮಾಡುವ ಮೂಲಕ ಮತ್ತೆ ಹಳೆಯ ಲಯಕ್ಕೆ ಮರಳಲು ಕಷ್ಟಪಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಏಷ್ಯಾ ಕಪ್​ನಲ್ಲಿ ಕೊಹ್ಲಿ ಅಂಕಿಅಂಶ:

ಇನ್ನು, ವಿರಾಟ್ ಕೊಹ್ಲಿ ಏಷ್ಯಾ ಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಏಷ್ಯಾ ಕಪ್​ನ ಅಂಕಿಅಂಶ ನೋಡುವುದಾದರೆ, ಈವರೆಗೆ 16 ಪಂದ್ಯಗಳನ್ನಾಡಿದ್ದು, 63.83ರ ಸರಾಸರಿಯಲ್ಲಿ 766 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ: IND vs ZIM: ಇಂದು ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?

ಪಾಕ್​ ವಿರುದ್ಧ ಶತಕ ಸಿಡಿಸಲಿರುವ ಕೊಹ್ಲಿ:

ಹೌದು, ಏಷ್ಯಾ ಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಕೊಹ್ಲಿ ಶತಕ ಸಿಡಿಸಲಿದ್ದಾರೆ. ಇದು ಹೇಗೆಂದು ಅಚ್ಚರಿಪಡಬೇಡಿ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಟೂರ್ನಿಯು ಆಗಸ್ಟ್ 27 ರಿಂದ ಪ್ರಾರಂಭವಾಗುತ್ತಿದೆ. ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಶತಕ ಸಿಡಿಸಲಿದ್ದಾರೆ. ಹೌದು, ಕೊಹ್ಲಿ ಪಾಕ್​ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಂತೆ ತಮ್ಮ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ.

ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಾಯಕ ರೋಹಿತ್ ಶರ್ಮಾ 132 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆ ಹೊಂದಿದ್ದಾರೆ. ಇನ್ನು, ಈವರೆಗೆ ಭಾರತ ಮತ್ತು ಪಾಕ್​ ಒಟ್ಟು 14 ಬಾರಿ ಏಷ್ಯಾ ಕಪ್​ನಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ ತಂಡ 8 ಬಾರಿ ಮತ್ತು ಪಾಕ್ 5 ಬಾರಿ ಗೆದ್ದಿದೆ. ಒಂದು ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ICC Cricket Schedule: 2027ರ ವರೆಗಿನ ಕ್ರಿಕೆಟ್ ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ಶೆಡ್ಯೂಲ್​? ಇಲ್ಲಿದೆ ಸಂಪೂರ್ಣ ವಿವರ

ಏಷ್ಯಾ ಕಪ್​ಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ),  ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: