Virat Kohli Fans: ಕೊಹ್ಲಿಯನ್ನು ಭೇಟಿಯಾಗಲು ಯತ್ನಿಸಿದ ಅಭಿಮಾನಿಗೆ ಪೊಲೀಸರು ಮಾಡಿದ್ದೇನು? ವಿಡಿಯೋ ನೋಡಿ

ಕೋಲ್ಕತ್ತಾದ ಪೊಲೀಸ್ ಅಧಿಕಾರಿಯೊಬ್ಬರು ಭದ್ರತಾ ಸಿಬ್ಬಂದಿಯನ್ನು ನಿರ್ಲಕ್ಷಿಸಿ ಆಟದ ಮೈದಾನವನ್ನು ಪ್ರವೇಶಿಸಲು ಪ್ರಯತ್ನಿಸಿದ ಅಭಿಮಾನಿಯನ್ನು ಹಿಡಿದು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು. ಇದನ್ನು ನೋಡಿದ ವಿರಾಟ್ ಕೊಹ್ಲಿ ಒಂದು ಕ್ಷಣ ಅವರ ಕಣ್ಣುಗಳನ್ನು ಅವರೇ ನಂಬಲಾಗದೇ ಅಲ್ಲಿಯೇ ಕುಳಿತು ಬಿಟ್ಟರು.

ಅಭಿಮಾನಿಯನ್ನೇ ಹೊತ್ತೊಯ್ದ ಪೊಲೀಸರು

ಅಭಿಮಾನಿಯನ್ನೇ ಹೊತ್ತೊಯ್ದ ಪೊಲೀಸರು

  • Share this:
ಕ್ರಿಕೆಟ್ ಪಂದ್ಯ (Cricket Match) ನಡೆಯುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ (Audience Gallery) ಕುಳಿತು ಪಂದ್ಯ ನೋಡುತ್ತಿದ್ದ ಅಭಿಮಾನಿಗಳು (Fans) ಕೆಲವೊಮ್ಮೆ ತಮ್ಮ ನೆಚ್ಚಿನ ಆಟಗಾರನನ್ನು (Players) ತುಂಬಾ ಹತ್ತಿರದಿಂದ ನೋಡಬೇಕು, ಅವರನ್ನು ಭೇಟಿ ಮಾಡಬೇಕೆಂದು ಎಷ್ಟೇ ಪೊಲೀಸ್ ಭದ್ರತೆ (Police security) ಇದ್ದರೂ ಸಹ ಆಟದ ಮೈದಾನಕ್ಕೆ (Play Ground) ನುಗ್ಗಿ ಬರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಈ ರೀತಿಯಾಗಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿ ಬರುವುದು ನಾವು ಕಪಿಲ್ ದೇವ್ (Kapil Dev) ಅವರ ಕಾಲದಿಂದಲೂ ನೋಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆಟದ ಮೈದಾನವನ್ನು ಪ್ರವೇಶಿಸಲು ಪ್ರಯತ್ನಿಸಿದ ಅಭಿಮಾನಿ
ಇಲ್ಲಿಯೂ ಸಹ ನಾವು ಹೇಳ ಹೊರಟಿರುವುದು ಇಂತಹದೇ ಒಂದು ಘಟನೆಯಾಗಿದ್ದು, ಇದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL)  ನಡೆದಿದೆ. ಆದರೆ ಈ ಘಟನೆಯಲ್ಲಿ ಸ್ವಲ್ಪ ಭಿನ್ನತೆ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಕೋಲ್ಕತ್ತಾದ ಪೊಲೀಸ್ ಅಧಿಕಾರಿಯೊಬ್ಬರು ಭದ್ರತಾ ಸಿಬ್ಬಂದಿಯನ್ನು ನಿರ್ಲಕ್ಷಿಸಿ ಆಟದ ಮೈದಾನವನ್ನು ಪ್ರವೇಶಿಸಲು ಪ್ರಯತ್ನಿಸಿದ ಅಭಿಮಾನಿಯನ್ನು ಹಿಡಿದು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು. ಇದನ್ನು ನೋಡಿದ ವಿರಾಟ್ ಕೊಹ್ಲಿ ಒಂದು ಕ್ಷಣ ಅವರ ಕಣ್ಣುಗಳನ್ನು ಅವರೇ ನಂಬಲಾಗದೇ ಅಲ್ಲಿಯೇ ಕುಳಿತು ಬಿಟ್ಟರು.

ಇದನ್ನೂ ಓದಿ:  Rohit Sharma: ರೋಹಿತ್ ಬಳಿ ಇರುವ ಕಾರುಗಳ ಕಲೆಕ್ಷನ್ ನೋಡಿದ್ರೆ ಶಾಕ್ ಆಗ್ತಿರಾ! ವಿಶ್ವದ ಅತ್ಯಂತ ವೇಗದ SUV ಒಡೆಯ ಹಿಟ್​ಮ್ಯಾನ್

ಈಡನ್ ಗಾರ್ಡನ್ ನಲ್ಲಿ ಇತ್ತೀಚೆಗೆ ನಡೆದ ಲಕ್ನೋ ಸೂಪರ್ ಜೈಂಟ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022 ಎಲಿಮಿನೇಟರ್ ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದ ಕೊನೆಯ ಓವರ್ ನಲ್ಲಿ ದುಷ್ಮಂತ ಚಮೀರಾ ಅವರು ಹರ್ಷಲ್ ಪಟೇಲ್ ಎಸೆತದಲ್ಲಿ ಸಿಕ್ಸರ್ ಬಾರಿಸಿ ಎಲ್‌ಎಸ್‌ಜಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದರು. ಅವರಿಗೆ 3 ಎಸೆತಗಳಲ್ಲಿ 16 ರನ್ ಗಳ ಅಗತ್ಯವಿತ್ತು ಮತ್ತು ಅಭಿಮಾನಿಯೊಬ್ಬರು ಆಟದ ಮೈದಾನವನ್ನು ಪ್ರವೇಶಿಸಿ ಕೊಹ್ಲಿಯನ್ನು ತಲುಪಲು ಪ್ರಯತ್ನಿಸಿದ್ದರಿಂದ ಸ್ವಲ್ಪ ವಿಳಂಬವಾಯಿತು. ಭಾರತ ಮತ್ತು ಆರ್‌ಸಿಬಿ ತಂಡದ ಮಾಜಿ ನಾಯಕ ಲಾಂಗ್ ಆನ್ ನಲ್ಲಿ ನಿಂತಿದ್ದರು.

ಡಬ್ಲ್ಯೂಡಬ್ಲ್ಯೂಇ ಕುಸ್ತಿಪಟುವಿನಂತೆ ಭುಜದ ಮೇಲೆ ಎತ್ತಿಕೊಂಡು ಹೋದ ಪೊಲೀಸ್
ಕ್ರೀಡಾಂಗಣದಲ್ಲಿ ಹಾಜರಿದ್ದ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ ವೀಡಿಯೋದಲ್ಲಿ, ಬಿಳಿ ಸಮವಸ್ತ್ರದಲ್ಲಿದ್ದ ಕೋಲ್ಕತ್ತಾದ ಪೊಲೀಸ್ ಬಂದು ಅಭಿಮಾನಿಯನ್ನು WWE ಕುಸ್ತಿಪಟುವಿನಂತೆ ಭುಜದ ಮೇಲೆ ಎತ್ತಿಕೊಂಡು ಆಟದ ಮೈದಾನದ ಹೊರಗೆ ಕರೆದೊಯ್ದಾಗ ಕೊಹ್ಲಿ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸುತ್ತಿರುವುದು ಕಂಡುಬಂದಿದೆ.

ಪೊಲೀಸ್ ತನ್ನ ಭುಜದ ಮೇಲೆ ಅಭಿಮಾನಿಯನ್ನು ಹೊತ್ತೊಯ್ಯುತ್ತಿರುವುದನ್ನು ನೋಡಿದಾಗ ಕೊಹ್ಲಿ ಒಂದು ಕ್ಷಣ ಶಾಕ್ ಆಗಿ ಅಲ್ಲಿಯೇ ಕುಳಿತರು. ಬಲಗೈ ಬ್ಯಾಟ್ಸ್‌ಮನ್ ನಗೆಗಡಲಲ್ಲಿ ತೇಲುತ್ತಿರುವುದು ಸಹ ಕಂಡುಬಂತು.

ಇದನ್ನೂ ಓದಿ:   Rohit Sharma: ಐಪಿಎಲ್ ನಂತರ ಮಾಲ್ಡೀವ್ಸ್‌ಗೆ ಹಾರಿದ ರೋಹಿತ್, ರಿತಿಕಾ ಜೊತೆಗಿನ ಕ್ಯೂಟ್ ಫೋಟೋ ಹಂಚಿಕೊಂಡ ಹಿಟ್​ಮ್ಯಾನ್

"ಈ ಅಭಿಮಾನಿಯ ಹುಚ್ಚುತನವನ್ನು ಕಣ್ಣಾರೆ ಕಂಡೆ. ಕೋಲ್ಕತ್ತಾ ಪೊಲೀಸರು ಜಾನ್ ಸೆನಾ ಆಗಿರುತ್ತಾರೆ" ಎಂದು ಅಭಿಮಾನಿಯೊಬ್ಬರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಆಟವು ಪುನರಾರಂಭಗೊಂಡಿತು. ಉಳಿದ ರನ್ ಗಳನ್ನು ಗಳಿಸಲು ಎಲ್ಎಸ್‌ಜಿ ತಂಡಕ್ಕೆ ಅವಕಾಶ ನೀಡಲಿಲ್ಲ, ಹೀಗಾಗಿ ಆರ್‌ಸಿಬಿ ಈ ಪಂದ್ಯವನ್ನು 14 ರನ್ ಗಳಿಂದ ಗೆದ್ದಿತು.

ರಾಜಸ್ಥಾನ್ ರಾಯಲ್ಸ್ ಹಾಗೂ ಆರ್‌ಸಿಬಿ ನಡುವೆ ಪಂದ್ಯ
ಆರ್‌ಸಿಬಿ ತಂಡವು ಇಂದು (ಶುಕ್ರವಾರ) ನಡೆಯಲಿರುವ ಎರಡನೇ ಕ್ವಾಲಿಫೈಯರ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಇದರಲ್ಲಿ ಜಯಿಸಿದವರು ಭಾನುವಾರ ನಡೆಯುವ ಅಂತಿಮ ಪಂದ್ಯದಲ್ಲಿ ಎಂದರೆ ಫೈನಲ್ ಪಂದ್ಯದಲ್ಲಿ ಗುಜುರಾತ್ ಟೈಟನ್ಸ್ ಜೊತೆ ಆಡಲಿದ್ದಾರೆ. ರಜತ್ ಪಾಟಿದಾರ್ ಅಜೇಯ 54 ಎಸೆತಗಳಲ್ಲಿ 112 ರನ್ ಗಳಿಸಿದ್ದು, ಆರ್‌ಸಿಬಿ ತಂಡವು ಎಲ್ಎಸ್‌ಜಿ ವಿರುದ್ಧ ಪಂದ್ಯದಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಎಲ್ಎಸ್‌ಜಿ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.
Published by:Ashwini Prabhu
First published: