• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Virat Kohli: ಈ ಪ್ಲೇಯರ್​ಗೆ ಹುಡುಗಿಯರೆಂದ್ರೆ ಅಲರ್ಜಿ, ಟೀಂ ಇಂಡಿಯಾ ಆಟಗಾರರ ಸೀಕ್ರೆಟ್​ ಬಿಚ್ಚಿಟ್ಟ ಕೊಹ್ಲಿ

Virat Kohli: ಈ ಪ್ಲೇಯರ್​ಗೆ ಹುಡುಗಿಯರೆಂದ್ರೆ ಅಲರ್ಜಿ, ಟೀಂ ಇಂಡಿಯಾ ಆಟಗಾರರ ಸೀಕ್ರೆಟ್​ ಬಿಚ್ಚಿಟ್ಟ ಕೊಹ್ಲಿ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಟೀಂ ಇಂಡಿಯಾ ಆಟಗಅರರ ಕೆಲ ಸಿಕ್ರೆಟ್​ಗಳನ್ನು ರಿವೀಲ್​ ಮಾಡಿದ್ದಾರೆ.

  • Share this:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿ (Border–Gavaskar Trophy) ಅಡಿಯಲ್ಲಿ ನಡೆಯುತ್ತಿರುವ ಸರಣಿಯ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಬ್ಯಾಟಿಂಗ್​ನಲ್ಲಿ ಅಷ್ಟಾಗಿ ಮಿಂಚಲು ಸಾಧ್ಯವಾಗಲಿಲ್ಲ. ಅವರ ಕಣ್ಣು ಈಗ ಇಂದೋರ್‌ನಲ್ಲಿ (Indore) ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಮೇಲೆ ನೆಟ್ಟಿದೆ. ವಿರಾಟ್ ಕೊಹ್ಲಿ ಕೆಲ ವರ್ಷಗಳ ಹಿಂದೆ ಟಿವಿ ಶೋವೊಂದರಲ್ಲಿ ಟೀಂ ಇಂಡಿಯಾ ಆಟಗಾರರ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹೇಳಿದ್ದರು. ಇದೀಗ ಆ ವಿಚಾರಗಳು ಮತ್ತೊಮ್ಮೆ ಸಖತ್ ವೈರಲ್ ಆಗುತ್ತಿದೆ.


ಟೀಂ ಇಂಡಿಯಾ ಸೋಮಾರಿ ಆಟಗಾರ:


ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋನಲ್ಲಿ ವಿರಾಟ್ ಕೊಹ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಅವರ ಹಲವು ಪ್ರಶ್ನೆಗಳಿಗೆ ಅವರು ನಿರ್ಭಯದಿಂದ ಉತ್ತರಿಸಿದ್ದರು. ತಂಡದಲ್ಲಿ ಯಾರು ಹೆಚ್ಚು ಹಸಿದಿರುತ್ತಾರೆ ಎಂದು ಕಪಿಲ್ ಶರ್ಮಾ ವಿರಾಟ್‌ಗೆ ಕೇಳಿದರು. ಈ ವೇಳೆ ಕೊಹ್ಲಿ, ಇಶಾಂತ್ ಶರ್ಮಾ ಅವರ ಹೆಸರನ್ನು ಹೇಳಿದ್ದರು. ಬಳಿಕ ತಂಡದಲ್ಲಿ ಯಾರು ಹೆಚ್ಚು ನಿದ್ರೆ ಮಾಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ರೋಹಿತ್ ಶರ್ಮಾ ಹೆಸರನ್ನು ತೆಗೆದುಕೊಂಡರು ಮತ್ತು ಸೋಮಾರಿ ಎಂದು ಮೊಹಮ್ಮದ್ ಶಮಿ ಹೆಸರನ್ನು ತೆಗೆದುಕೊಂಡರು.


ಹುಡುಗಿಯರಿಂದ ಯಾರು ಹೆಚ್ಚು ದೂರವಿರುತ್ತಾರೆ ಎಂದು ಕೇಳಿದ್ದಕ್ಕೆ ವಿರಾಟ್, ಚೇತೇಶ್ವರ ಪೂಜಾರ ಹೆಸರನ್ನು ಹೇಲಿದರು. ಅವರು ತುಂಬಾ ಗಮನಹರಿಸುತ್ತಾರೆ ಮತ್ತು ತುಂಬಾ ಸಭ್ಯರು ಎಂದು ವಿರಾಟ್ ಹೇಳಿದರು. ಅವರಿಗಿಂತ ಹೆಚ್ಚು ಯೋಗ್ಯ ಹುಡುಗನನ್ನು ನನ್ನ ಜೀವನದಲ್ಲಿ ನೋಡಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.


ಇದನ್ನೂ ಓದಿ: KCC 2023: ಕೆಸಿಸಿ ಟೂರ್ನಿಯಲ್ಲಿ ಪುನೀತ್​ಗೆ ವಿಶೇಷ ಗೌರವ! ಅಪ್ಪು ಎಂದೆಂದಿಗೂ ಜೀವಂತ ಎಂದ ಫ್ಯಾನ್ಸ್


ಸಚಿನ್ ನನ್ನ ಆದರ್ಶ:


ಈ ಶೋನಲ್ಲಿ, ಕೊಹ್ಲಿ ಅವರು ಕ್ರಿಕೆಟ್‌ನಲ್ಲಿ ತಮ್ಮ ರೋಲ್ ಮಾಡೆಲ್ ಯಾರು ಮತ್ತು ಆರಂಭಿಕ ದಿನಗಳಲ್ಲಿ ಯಾರ ಬ್ಯಾಟಿಂಗ್ ಅನ್ನು ಹೆಚ್ಚು ಇಷ್ಟಪಟ್ಟರು ಎಂದು ಹೇಳಿದ್ದಾರೆ. ವಿರಾಟ್ ತಮ್ಮ ರೋಲ್ ಮಾಡೆಲ್ ಸಚಿನ್ ತೆಂಡೂಲ್ಕರ್ ಎಂದು ಹೇಳಿದರು. ಈ ಅನುಭವಿ ಆಟಗಾರನ ಜೊತೆ ಆಡುವ ಅವಕಾಶ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಸಿಕ್ಕಿರುವುದು ಅದು ನನ್ನ ಪುಣ್ಯ ಎಂದು ಹೇಳಿಕೊಂಡಿದ್ದರು.


ಧೋನಿ ನನ್ನ ಮೇಲೆ ನಂಬಿಕೆ ಇಟ್ಟಿದ್ದರು:


ಆರ್‌ಸಿಬಿಯ ಪಾಡ್‌ಕಾಸ್ಟ್‌ನ ಸಂವಾದದ ವೇಳೆ ವಿರಾಟ್ ಕೊಹ್ಲಿ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಅದರಲ್ಲಿಯೂ, ‘ಎಂಎಸ್ ಧೋನಿ ನನ್ನನ್ನು ನಾಯಕತ್ವಕ್ಕೆ ಆಯ್ಕೆ ಮಾಡಿದ್ದಾರೆ. ಅವರು ನನ್ನನ್ನು ಸರಿಯಾದ ವ್ಯಕ್ತಿ ಎಂದು ಹೇಳಿದ್ದರು. ಅವರಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಇದಕ್ಕೂ ಮೊದಲು ನಾನು ತಂಡಕ್ಕಾಗಿ ಹಲವು ಗೆಲುವಿನ ಇನ್ನಿಂಗ್ಸ್‌ಗಳನ್ನು ಆಡಿದ್ದೇನೆ. ಹಾಗಾಗಿ ನನಗೆ ಆಟದ ಬಗ್ಗೆ ಗೊತ್ತಿತ್ತು. ನಾನು ಪಿಚ್, ಬಾಲ್ ಮ,ತ್ತು ಬ್ಯಾಟರ್​ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಇದು ನಾಯಕತ್ವದಲ್ಲಿ ನನಗೆ ತುಂಬಾ ನೆರವಾಯಿತು‘ ಎಂದು ಹೇಳಿದ್ದಾರೆ.




ಮಹಿ ಫೋನ್​ ಕಾಲ್​ ಎತ್ತುವುದು ಕಡಿಮೆ:


ಧೋನಿ ಭಾಯ್ ಅವರನ್ನು ಸಂಪರ್ಕಿಸುವುದು ಕಷ್ಟ. ನೀವು ಸಾಮಾನ್ಯ ದಿನಗಳಲ್ಲಿ ಕರೆ ಮಾಡಿದರೆ, ಅವರು ನಿಮ್ಮ ಕರೆಯನ್ನು ಸ್ವೀಕರಿಸದಿರುವ ಸಾಧ್ಯತೆ 99% ಇರುತ್ತದೆ. ಏಕೆಂದರೆ ಅವರು ತನ್ನ ಫೋನ್ ಅನ್ನು ನೋಡುವುದಿಲ್ಲ. ಹಾಗಾಗಿ ಅವರು ನನ್ನನ್ನು ಸಂಪರ್ಕಿಸಿದ್ದು ಕೇವಲ ಎರಡು ಬಾರಿ. ಇದು ನನಗೆ ತುಂಬಾ ವಿಶೇಷವಾಗಿತ್ತು. ಆ ಸಮಯದಲ್ಲಿ ಧೋನಿ ನನಗೆ ದಾರಿ ತೋರಿಸುವ ವ್ಯಕ್ತಿಯಂತೆ ಕಂಡಿದ್ದರು ಎಂದು ಹೇಳಿದ್ದಾರೆ.

Published by:shrikrishna bhat
First published: