ಸರಣಿ​ ಸೋತ ಬಳಿಕ ವಿಚಿತ್ರ ಹೇಳಿಕೆ ಕೊಟ್ಟ ಕ್ಯಾಪ್ಟನ್​ ಕೊಹ್ಲಿ: ಕೇಳಿದ್ರೆ ನಿಮಗೂ ಶಾಕ್​ ಆಗುತ್ತೆ!


Updated:September 3, 2018, 2:13 PM IST
ಸರಣಿ​ ಸೋತ ಬಳಿಕ ವಿಚಿತ್ರ ಹೇಳಿಕೆ ಕೊಟ್ಟ ಕ್ಯಾಪ್ಟನ್​ ಕೊಹ್ಲಿ: ಕೇಳಿದ್ರೆ ನಿಮಗೂ ಶಾಕ್​ ಆಗುತ್ತೆ!

Updated: September 3, 2018, 2:13 PM IST
ನ್ಯೂಸ್​ 18 ಕನ್ನಡ

ಇಂಗ್ಲೆಂಡ್​​ನ ಸೌತಾಂಪ್ಟನ್​ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಆಂಗ್ಲರು ನೀಡಿದ್ದ 245 ರನ್​​ ಗುರಿ ಬೆನ್ನಟ್ಟಿದ ಭಾರತ 184 ರನ್​ಗೆ ಆಲೌಟ್ ಆಗುವ ಮೂಲಕ, ಸರಣಿ ಸೋಲು ಅನುಭವಿಸಿದೆ. ಈ ಮೂಲಕ ಆಂಗ್ಲರ ನೆಲದಲ್ಲಿ ಟೆಸ್ಟ್​​ ಸರಣಿ ಗೆಲ್ಲುವ ಕೊಹ್ಲಿ ಕನಸು ಭಗ್ನವಾಗಿದೆ. ಆದರೆ ಈ ಟೆಸ್ಟ್​ ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್​ ಕೊಹ್ಲಿ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಇದನ್ನು ಕೇಳಿದ ಪ್ರೇಕ್ಷಕರೂ ಖುದ್ದು ದಂಗಾಗಿದ್ದಾರೆ.

ಟೆಸ್ಟ್​ ಪಂದ್ಯದಲ್ಲಿ ಸೋಲುಂಡ ಬಳಿಕ ತಮ್ಮ ತಂಡದ ಸೋಲಿಗೆ ಟಾಪ್​ ಆರ್ಡರ್ ವೈಫಲ್ಯವೇ ಪ್ರಮುಖ ಕಾರಣ ಎಂದು ವಿರಾಟ್​ ಕೊಹ್ಲಿ ತಿಳಿಸಿದ್ದಾರೆ. ಈ ಮೂಲಕ ತನ್ನ ತಂಡ ಸೌತಾಂಪ್ಟನ್​ನಲ್ಲಿ ಹೆಚ್ಚು ತಪ್ಪುಗಳನ್ನು ಮಾಡಿಲ್ಲ ಎಂದಿದ್ದಾರೆ. "ಈ ಕೊನೆಯ ಪಂದ್ಯಕ್ಕೂ ಮೊದಲು ನಾವು ಧನಾತ್ಮಕ ಭಾಗವನ್ನು ನೋಡಬೇಕಿದೆ. ನಾವು ಹೆಚ್ಚು ತಪ್ಪುಗಳನ್ನು ಆಡಿದ್ದೇವೆ ಎಂದು ನನಗನಿಸುತ್ತಿಲ್ಲ. ಗೆಲುವಿನ ಶ್ರೇಯಸ್ಸು ಇಂಗ್ಲೆಂಡ್​ ತಂಡಕ್ಕೆ ಸಲ್ಲುತ್ತದೆ, ಯಾಕೆಂದರೆ ಅವರು ನಮಗಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ.

ಇನ್ನು ಪಂದ್ಯ ಶ್ರೇಷ್ಠ ಮೋಯಿನ್​ ಅಲೀ (71/4), ಜೇಮ್ಸ್​ ಆ್ಯಂಡರ್​ಸನ್​ ಹಾಗೂ ಬೆನ್​ ಸ್ಟೋಕ್ಸ್​ರವರು ಎರಡೆರಡು ವಿಕೆಟ್​ ಪಡೆದಿದ್ದರು. ಇವರ ಈ ಅತ್ಯುತ್ತಮ ಪ್ರದರ್ಶನದಿಂದಾಗಿ ಇಂಗ್ಲೆಂಡ್​ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ನಾಲ್ಕನೇ ದಿನದಂದು ಟೀಂ ಇಂಡಿಯಾವನ್ನು 60 ರನ್​ಗಳಿಂದ ಸೋಲಿಸಿ ಐದು ಪಂದ್ಯಗಳ ಸಿರೀಸ್​ನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಪಂದ್ಯದ ಬಳಿಕ ಕ್ಯಾಪ್ಟನ್​ ಕೊಹ್ಲಿ "ಇಂಗ್ಲೆಂಡ್​ ನಮಗೆ ಈ ಗುರಿ ನೀಡಲು ಉತ್ತಮ ಆಟವಾಡಿದೆ. ಆದರೆ ಅಲ್ಲಿದ್ದ ಪಿಚ್​ ಹಾಗೂ ಚೆಂಡು ಸ್ಪಿನ್​ ಆಗುತ್ತಿದ್ದ ರೀತಿ ನಮಗೆ ಸವಾಲು ನೀಡಿದಂತಿತ್ತು. ನಮ್ಮ ಬಳಿ ಈ ಪಂದ್ಯ ಗೆಲ್ಲಲು ಒಂದು ಉತ್ತಮ ಅವಕಾಶವವಿದೆ ಎಂದು ನಾವಂದುಕೊಂಡಿದ್ದೆವು. ಆದರೆ ನಾವಂದುಕೊಂಡ ಆರಂಭ ನಮಗೆ ಸಿಗಲಿಲ್ಲ" ಎಂದಿದ್ದಾರೆ.

ಟೀಂ ಇಂಡಿಯಾ ಊಟಕ್ಕಿಂತಲೂ ಮೊದಲು 42 ರನ್​ ಗಳಿಸಿ, 3 ವಿಕೆಟ್​ ಕಳೆದುಕೊಂಡಿತ್ತು. ಆದರೆ ಊಟದ ಬಳಿಕ 123 ರನ್ ಗಳಿಸಿ ಉತ್ತಮ ಸ್ಥಿತಿ ಕಾಯ್ದುಕೊಂಡಿತ್ತು. ಆದರೆ ಇದಾದ ಬಳಿಕ ಏಳು ವಿಕೆಟ್​ ಕಳೆದುಕೊಂಡ ತಂಡ ಕೇವಲ 61 ರನ್​ ಮಾತ್ರ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಈ ವಿಚಾರವಾಗಿ ಮಾತನಾಡಿದ ವಿರಾಟ್​ ಕೊಹ್ಲಿ "ಅವರು ಉತ್ತಮ ಬೌಲಿಂಗ್​ ಮಾಡಿದರು, ಈ ಮೂಲಕ ನಮ್ಮ ಮೇಲೆ ಒತ್ತಡ ಹೇರಿದರು. ಇದರ ಯಶಸ್ಸು ಅವರ ಬೌಲಿಂಗ್​ಗೆ ಸಲ್ಲಬೇಕು ಹಾಗೂ ಗೆದ್ದ ಶ್ರೇಯಸ್ಸು ಇಂಗ್ಲೆಂಡ್​ ತಂಡಕ್ಕೆ ಸೇರುತ್ತದೆ. ಉತ್ತಮ ಜೊತೆಯಾಟದ ಮೂಲಕವೇ ಪಂದ್ಯ ಗೆಲ್ಲಲು ಸಾಧ್ಯ ಆದರೆ ನಾವು ಆರಂಭದಿಂದಲೂ ಒತ್ತಡದಲ್ಲೇ ಆಡಿದ್ದೆವು" ಎಂದಿದ್ದಾರೆ
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ