Virat Kohli: ಸಿಕ್ಸರ್​ಗಳ ಸುರಿಮಳೆಗೈದ ಕಿಂಗ್ ಕೊಹ್ಲಿ, ಪಾಕ್​ ಎದುರು ವಿರಾಟ್​ ಸೆಂಚುರಿ ಫಿಕ್ಸ್ ಎಂದ ಫ್ಯಾನ್ಸ್

Virat Kohli: ವಿರಾಟ್ ಕೊಹ್ಲಿ ಏಷ್ಯಾ ಕಪ್​ 2022ರಲ್ಲಿ ಕಂಬ್ಯಾಕ್​ ಮಾಡಲೇ ಬೇಕಾಗಿರುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಈಗಾಗಲೇ ದುಬೈಗೆ ತೆರಳಿರುವ ಅವರು,  ಟ್ರೈನಿಂಗ್ ಸೆಷನ್ ನಲ್ಲಿ ಭಾಗವಹಿಸಿದ್ದಾರೆ. 

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಟೀಂ ಇಂಡಿಯಾದ ಮಾಜಿ ನಾಯಕ, ವಿರಾಟ್ ಕೊಹ್ಲಿ (Virat Kohli) ಭಾರತೀಯ ಕ್ರಿಕೆಟ್‌ ಓರ್ವ ಅದ್ಭುತ ಆಟಗಾರ ಎಂದರೂ ತಪ್ಪಾಗಲಾರದು. ಏಕಾಂಗಿಯಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಆದರೆ ಕೊಹ್ಲಿ ಕಳಪೆ ಫಾರ್ಮ್​ನಿಂದಾಗಿ ಕ್ರಿಕೆಟ್​ನಿಂದ (Cricket) ಕೆಲ ಕಾಲದಿಂದ ದೂರ ಉಳಿದಿದ್ದರು. ಹೀಗಾಗಿ ಬಿಸಿಸಿಐ (BCCI) ಸಹ ಅವರಿಗೆ ಇಂಗ್ಲೆಂಡ್​ ಸರಣಿಯ ನಂತರ ವೆಸ್ಟ್ ಇಂಡೀಸ್​, ಜಿಂಬಾಬ್ವೆ ಸರಣಿಗಳಿಗೆ ಆಯ್ಕೆ ಮಾಡದೆ ವಿಶ್ರಾಂತಿ ನೀಡಿತ್ತು. ಆದರೆ ಇದೀಗ ಅವರು ಏಷ್ಯಾ ಕಪ್​ 2022ಗಾಗಿ (Asia Cup 2022) ದುಬೈಗೆ ತೆರಳಿದ್ದು,  ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ನೆಟ್​ ಪ್ರ್ಯಾಕ್ಟೀಸ್​ನಲ್ಲಿ ನಿರತರಾಗಿರುವ ಅವರು ಮತ್ತೆ ಫಾರ್ಮ್​ಗೆ ಮರಳಿರುವಂತೆ ಕಾಣುತ್ತಿದೆ.

ಸಿಕ್ಸರ್​ಗಳ ಸುರಿಮಳೆಗೈದ ಕಿಂಗ್ ಕೊಹ್ಲಿ:

ವಿರಾಟ್ ಕೊಹ್ಲಿ ಏಷ್ಯಾ ಕಪ್​ 2022ರಲ್ಲಿ ಕಂಬ್ಯಾಕ್​ ಮಾಡಲೇ ಬೇಕಾಗಿರುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಈಗಾಗಲೇ ದುಬೈಗೆ ತೆರಳಿರುವ ಅವರು,  ಟ್ರೈನಿಂಗ್ ಸೆಷನ್ ನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಕೊಹ್ಲಿಯ ಭರ್ಜರಿಯಾಗಿ ಬ್ಯಾಟಿಂಗ್​ ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್​ ಗಳಿಗೆ ಕೊಹ್ಲಿ ಸೂಪರ್ ಸಿಕ್ಸ್  ಸಿಡಿಸಿದ್ದಾರೆ.  ಕೊಹ್ಲಿಯ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಕಿಂಗ್​ ಈಸ್​ ಬ್ಯಾಕ್​ ಎನ್ನುತ್ತಿದ್ದು, ಆಗಸ್ಟ್ 28ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಫಿಕ್ಸ್ ಎಂದು ಹೇಳುತ್ತಿದ್ದಾರೆ.

ಗೋಲ್ಡ್ ಬ್ಯಾಟ್​ ಬಳಸಲಲಿರುವ​ ಕೊಹ್ಲಿ:

ಹೌದು, ಈ ಏಷ್ಯಾ ಕಪ್​ನಲ್ಲಿ ಪಾಕಿಸ್ತಾನದ ಎದುರು ಪಂದ್ಯ ಆಡುವ ಮೂಲಕ ತಮ್ಮ ಟಿ20 ಅಲ್ಲಿ 100ನೇ ಪಂದ್ಯವನ್ನಾಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.  ಹೀಗಾಗಿ ಈ ಪಂದ್ಯ ಅವರಿಗೆ ಬಹಳ ಮಹತ್ವದ್ದಾಗಿದೆ. ಈ ವಿಶೇಷ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ತಮ್ಮ 100ನೇ ಪಂದ್ಯ ಮತ್ತು ಪಾಕ್​ ಎದುರು ಕಣಕ್ಕಿಳಿಯುವಾಗ ಖಾಯಂ ಬಳಸುತ್ತಿದ್ದ ಬ್ಯಾಟ್​ ಬದಲಿಗೆ ಗೋಲ್ಡ್‌ ಎಡಿಷನ್‌ ಬ್ಯಾಟ್‌ ಬಳಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್ ಟೂರ್ನಿಯನ್ನು​ ಬಹಿಷ್ಕರಿಸಿತ್ತು ಭಾರತ-ಪಾಕ್, ಏನಿದು ರೌಂಡ್ ರಾಬಿನ್ ಸ್ವರೂಪ?

ಟೀಂ ಇಂಡಿಯಾಗೆ ನೂತನ ಕೋಚ್​:

ಹೌದು, ರಾಹುಲ್​ ದ್ರಾವಿಡ್​ ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವ ಹಿನ್ನಲೆ ಅವರ ಬದಲಾಗಿ ಭಾರತ ತಂಡಕ್ಕೆ ಹೊಸ ಕೊಚ್​ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾಕಪ್ 2022ಗೆ ಭಾರತ ತಂಡದ ಹಂಗಾಮಿ ಕೋಚ್​ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಕುರಿತು ಬಿಸಿಸಿಐ ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ: Riyan Parag: ಮಧ್ಯರಾತ್ರಿ ಆ ಮಾಡೆಲ್​ ಟ್ವೀಟ್​ಗೆ ಲೈಕ್​ ಒತ್ತಿದ ಖ್ಯಾತ ಕ್ರಿಕೆಟಿಗ! ನೈಟ್​ ಟೈಮ್​ ಅಲ್ಲಿ ಫುಲ್ ಆ್ಯಕ್ಟೀವ್​ ಈ ಆಟಗಾರ ಅಂತ ಟ್ರೋಲ್​

ಏಷ್ಯಾ ಕಪ್​ಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ),  ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: