ಪುಲ್ವಾಮ ದಾಳಿಗೆ ದೇಶವೇ ಕಂಬನಿ; ಇತ್ತ ಕೊಹ್ಲಿ ಮಾತ್ರ ಜಾಹೀರಾತುವಿನಲ್ಲಿ ಬ್ಯುಸಿ

ಪುಲ್ವಾಮ ದಾಳಿಗೆ ಕ್ರಿಕೆಟಿಗರ ಪೈಕಿ ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಪ್ರಮುಖರು ಟ್ವೀಟ್ ಮಾಡಿ ಉಗ್ರರ ಈ ಹೀನ ಕೃತ್ಯವನ್ನು ಖಂಡಿಸಿದ್ದರು. ಆದರೆ, ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಜಾಹೀರಾತೊಂದರ ಟ್ವೀಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು.

Vinay Bhat | news18
Updated:February 15, 2019, 3:49 PM IST
ಪುಲ್ವಾಮ ದಾಳಿಗೆ ದೇಶವೇ ಕಂಬನಿ; ಇತ್ತ ಕೊಹ್ಲಿ ಮಾತ್ರ ಜಾಹೀರಾತುವಿನಲ್ಲಿ ಬ್ಯುಸಿ
ವಿರಾಟ್ ಕೊಹ್ಲಿ
Vinay Bhat | news18
Updated: February 15, 2019, 3:49 PM IST
ಹೊಸದಿಲ್ಲಿ (ಫೆ. 15): ಗುರುವಾರ ಪುಲ್ವಾಮದಲ್ಲಿ ನಡೆದ ಭಯೋತ್ಪಾದನೆ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಜಮ್ಮು-ಕಾಸ್ಮೀರದಲ್ಲಿ ನಡೆದ ಉಗ್ರರ ದಾಳಿಗೆ 44 ಯೋಧರು ಹುತಾತ್ಮಗೊಂಡಿದ್ದರು. ಕ್ರಿಕೆಟಿಗರ ಪೈಕಿ ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಪ್ರಮುಖರು ಟ್ವೀಟ್ ಮಾಡಿ ಉಗ್ರರ ಈ ಹೀನ ಕೃತ್ಯವನ್ನು ಖಂಡಿಸಿದ್ದರು.

ಆದರೆ, ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಜಾಹೀರಾತೊಂದರ ಟ್ವೀಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ. ಇಡೀ ದೇಶವೇ ಪುಲ್ವಾಮ ದಾಳಿಯಿಂದ ನೋವಿನಲ್ಲಿ ಮುಳುಗಿದೆ. ಹಣವೊಂದೇ ಅಲ್ಲ. ಯೋಧರು ಹುತಾತ್ಮರಾಗಿದ್ದಾರೆ. ಹೀಗಿರುವಾಗ ಈರೀತಿಯ ಟ್ವೀಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜಾಂಟಿ ರೋಡ್ಸ್- ಟಾಪ್ 5 ಫೀಲ್ಡರ್ಸ್​: ಟೀಂ ಇಂಡಿಯಾ ಆಟಗಾರ ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಕ್ಷೇತ್ರರಕ್ಷಕ! ಆ ಬಳಿಕ ತಕ್ಷಣವೇ ಎಚ್ಚೆತ್ತುಕೊಂಡ ಕೊಹ್ಲಿ, ತಮ್ಮ ಟ್ವೀಟ್ ಡಿಲಿಟ್ ಮಾಡಿದ್ದಾರೆ. ಬಳಿಕ ಹುತಾತ್ಮ ಯೊಧರಿಗಾಗಿ ಕಂಬನಿ ಮಿಡಿದ್ದಾರೆ. ಆದರೆ, ಆ ವೇಳೆಗೆ ಕೊಹ್ಲಿಯ ಟ್ವೀಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗತೊಡಗಿತ್ತು.

 First published:February 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...