• Home
  • »
  • News
  • »
  • sports
  • »
  • Virat Kohli: ಪಾಕಿಸ್ತಾನದಲ್ಲಿ ಶಾಪಿಂಗ್​ ಮಾಡಿದ ಕಿಂಗ್ ಕೊಹ್ಲಿ, ವಿಡಿಯೋ ವೈರಲ್

Virat Kohli: ಪಾಕಿಸ್ತಾನದಲ್ಲಿ ಶಾಪಿಂಗ್​ ಮಾಡಿದ ಕಿಂಗ್ ಕೊಹ್ಲಿ, ವಿಡಿಯೋ ವೈರಲ್

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿರಾಟ್ ಕೊಹ್ಲಿಯ ವಿಡಿಯೋ ನಿಜವಾದದ್ದು. ಕೊಹ್ಲಿ ಪಾಕಿಸ್ತಾನದಲ್ಲಿ ಸ್ನೇಹಿತರೊಂದಿಗೆ ಶಾಪಿಂಗ್ ಮಾಡುತ್ತಿದ್ದಾರೆ. ಆದರೆ ಇದು ಇಂದಿನ ವಿಡಿಯೋ ಅಲ್ಲ.

  • Share this:

ಸದ್ಯ ಭಾರತ ತಂಡದ ಹಿರಿಯ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ (IND vs NZ) ಪ್ರವಾಸದಲ್ಲಿದೆ.  ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ (Virat Kohli) ಹಿರಿಯ ಆಟಗಾರರು ಟಿ20 ವಿಶ್ವಕಪ್ (T20 World Cup) ಬಳಿಕ ವಿಶ್ರಾಂತಿ ಪಡೆದಿದ್ದಾರೆ. ಈ ನಡುವೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ತನ್ನ ಸಹೋದ್ಯೋಗಿಗಳೊಂದಿಗೆ ಪಾಕಿಸ್ತಾನಕ್ಕೆ ತಲುಪಿದ್ದು, ಅಲ್ಲಿ ಶಾಪಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ನಿಖರವಾಗಿ ಯಾವಾಗ? ವಿರಾಟ್ ಜೊತೆ ಬೇರೆ ಯಾರು ಇದ್ದಾರೆ? ಇದರ ಬಗ್ಗೆ ನಾವು ನಿಮಗೆ ಹೇಳುತ್ತೇವೆ ನೋಡಿ


U-19 ತಂಡ ಪಾಕಿಸ್ತಾನ ಪ್ರವಾಸ:


ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿರಾಟ್ ವಿಡಿಯೋ ನಿಜವಾಗಿದೆ. ಕೊಹ್ಲಿ ಪಾಕಿಸ್ತಾನದಲ್ಲಿ ಸ್ನೇಹಿತರೊಂದಿಗೆ ಶಾಪಿಂಗ್ ಮಾಡುತ್ತಿದ್ದರು. ಆದರೆ ಇದು ಇಂದಿನ ವಿಡಿಯೋ ಅಲ್ಲ. ಈ ವಿಡಿಯೋ 16 ವರ್ಷಗಳ ಹಿಂದಿನದು. 2006ರಲ್ಲಿ ಭಾರತದ U-19 ತಂಡ ಪಾಕಿಸ್ತಾನಕ್ಕೆ ಪ್ರವಾಸಕ್ಕೆ ತೆರಳಿತ್ತು. ಆಗ ಆ ತಂಡದಲ್ಲಿ ವಿರಾಟ್ ಸೇರಿದಂತೆ ಹಲವು ಯುವ ಆಟಗಾರರಿದ್ದರು. ಆಗ ಪಿಯೂಷ್ ಚಾವ್ಲಾ ಭಾರತ ತಂಡದ ನಾಯಕರಾಗಿದ್ದರು. ವಿರಾಟ್, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ ಕೂಡ ಆ ತಂಡದಲ್ಲಿದ್ದ ದಿಗ್ಗಜ ಆಟಗಾರರಾಗಿದ್ದರು.


ಉತ್ತರಖಂಡ್ ಪ್ರವಾಸದಲ್ಲಿ ಕೊಹ್ಲಿ


ಪಾಕಿಸ್ತಾನದಲ್ಲಿ ಶಾಪಿಂಗ್:


ಏತನ್ಮಧ್ಯೆ, ಈ ಪ್ರವಾಸದ ಸಮಯದಲ್ಲಿ ವಿರಾಟ್ ಮತ್ತು ಕಂಪನಿಯು ತಮ್ಮ ಬಿಡುವಿನ ಸಮಯದಲ್ಲಿ ಪಾಕಿಸ್ತಾನದ ಮಾರುಕಟ್ಟೆಗೆ ಹೋಗಿದ್ದರು. ಇದು ಅಂದಿನ ವಿಡಿಯೋ. ಈ ವಿಡಿಯೋದಲ್ಲಿ 17 ವರ್ಷದ ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಕಾಣುತ್ತಿದ್ದಾರೆ. ಅವರ ಜೊತೆಗೆ ಇತರ ಆಟಗಾರರು ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.ಆ ಪ್ರವಾಸದಲ್ಲಿ ವಿರಾಟ್ ಎರಡು ಟೆಸ್ಟ್‌ಗಳಲ್ಲಿ 172 ರನ್ ಗಳಿಸಿದ್ದರು. ಅವರು ಮೂರು ODIಗಳಲ್ಲಿ 125 ರನ್‌ಗಳ ಕೊಡುಗೆ ನೀಡಿದರು. ಆದರ ನಂತರ ಹಿರಿಯರ ತಂಡ 2008ರಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ತೆರಳಿತ್ತು. ಆದರೆ ವಿರಾಟ್‌ಗೆ ಅವಕಾಶ ಸಿಗಲಿಲ್ಲ. ಆಗ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರಲಿಲ್ಲ.


ಇದನ್ನೂ ಓದಿ: ICC World Cup 2023: ಭಾರತದಲ್ಲೇ ಒನ್​ ಡೇ ವರ್ಲ್ಡ್ ಕಪ್ ಪಂದ್ಯಗಳು, ರಣರಂಗಕ್ಕೆ ಸಜ್ಜಾಗ್ತಿದೆ ಪಿಚ್​ಗಳು


ಉತ್ತರಾಖಂಡ್ ಪ್ರವಾಸದಲ್ಲಿ ಕಿಂಗ್​:


ಇನ್ನು, ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಇಬ್ಬರು ಉತ್ತರಖಂಡ್​ ಪ್ರವಾಸದಲ್ಲಿ ಇದ್ದಾರೆ. ಜೊತೆಗೆ ಮಗಳು ವಮಿಕಾ ಅವರೊಂದಿಗೆ ಉತ್ತರಾಖಂಡ್‌ನ ನೈನಿತಾಲ್‌ಗೆ ಭೇಟಿ ನೀಡಿದ್ದಾರೆ. ನೈನಿತಾಲ್‌ನ ಕೈಂಚಿ ಧಾಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ, ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಈ ವೇಳೆ ಅಭಿಮಾನಿಗಳ ಜೊತೆ ತೆಗದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Published by:shrikrishna bhat
First published: