ಟಿ20 ವಿಶ್ವಕಪ್ 2022ರ (T20 World Cup) ಪಾಕಿಸ್ತಾನ ವಿರುದ್ಧ (IND vs PAK) ವಿರಾಟ್ ಕೊಹ್ಲಿ ಆಡಿದ ಇನ್ನಿಂಗ್ಸ್ ಅನ್ನು ಯಾರು ಮರೆಯಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಏಕಾಂಗಿಯಾಗಿ ಭಾರತ ತಂಡವನ್ನುಗೆಲುವಿನ ದಡ ಸೇರಿಸಿದರು. ಈ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯವನ್ನು ಕೊಹ್ಲಿ (Virat Kohli) ಮತ್ತೊಮ್ಮೆ ದೋಚಿದ್ದರು. ಆದರೆ ಈ ಇನ್ನಿಂಗ್ಸ್ ಸ್ವತಃ ಕಿಂಗ್ ಕೊಹ್ಲಿಯ ಹೃದಯಕ್ಕೂ ತುಂಬಾ ಹತ್ತಿರವಂತೆ. ಪ್ರತಿಷ್ಠಿತ ಟೂರ್ನಿ ಮುಗಿದು ಹಲವು ದಿನಗಳು ಕಳೆದಿವೆ. ಪಾಕಿಸ್ತಾನ ವಿರುದ್ಧ ಆಡಿದ ಈ ಶ್ರೇಷ್ಠ ಇನ್ನಿಂಗ್ಸ್ನ ಚಿತ್ರವನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಇನಿಂಗ್ಸ್ ನನಗೆ ಯಾವಾಗಲೂ ವಿಶೇಷ:
ಪಾಕಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಕೊಹ್ಲಿ ಅಕ್ಷರಶಃ ಪಾಕ್ ಬೌಲರ್ಗಳ ಬೆವರಿಳಿಸಿದ್ದರು. ಇದೇ ಇನ್ನಿಂಗ್ಸ್ ಕುರಿತು ಇದೀಗ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದು, '23 ಅಕ್ಟೋಬರ್ 2022 ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾಗಿರುತ್ತದೆ. ಈ ಹಿಂದೆ ಯಾವತ್ತೂ ಕ್ರಿಕೆಟ್ ಮ್ಯಾಚ್ನಲ್ಲಿ ಈ ರೀತಿಯ ಶಕ್ತಿಯನ್ನು ಅನುಭವಿಸಿರಲಿಲ್ಲ. ಅದು ಎಷ್ಟು ಸುಂದರ ಸಂಜೆ!' ಎಂದು ಬರೆದುಕೊಂಡಿದ್ದಾರೆ. ಇದೀಗ ಕೊಹ್ಲಿಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
October 23rd 2022 will always be special in my heart. Never felt energy like that in a cricket game before. What a blessed evening that was 💫🙏 pic.twitter.com/rsil91Af7a
— Virat Kohli (@imVkohli) November 26, 2022
ಹೌದು, ಇದೀಗ ಕೊಹ್ಲಿ ಪೋಸ್ಟ್ ನಂತರ ಅವರು ನಿವೃತ್ತಿ ನೀಡುತ್ತಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕೆಲ ಕಾರಣಗಳನ್ನೂ ನೀಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಇದೇ ರೀತಿಯ ಪೋಸ್ಟ್ ಮಾಡುವ ಮೂಲಕ ಏಕಾಏಕಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ಕೊಹ್ಲಿ ಸಹ ಧೋನಿ ರೀತಿಯಲ್ಲೇ ಮಾಡಬಹುದೇ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: Virat Kohli: ಕಿಂಗ್ ಇಸ್ ಆಲ್ವೇಸ್ ಕಿಂಗ್, ಮತ್ತೆ ನಂಬರ್ ಒನ್ ಆದ ಕೊಹ್ಲಿ
ಪಾಕ್ ವಿರುದ್ಧ ಅಬ್ಬರಿಸಿದ್ದ ಕೊಹ್ಲಿ:
ಪಾಕಿಸ್ತಾನ ನೀಡಿದ 160 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ 6.1 ಓವರ್ಗಳಲ್ಲಿ ಕೇವಲ 31 ರನ್ಗಳಿಗೆ ತನ್ನ ಮೊದಲ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಇಲ್ಲಿಂದ, ಪಾಂಡ್ಯ (40) ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿದ ಕೊಹ್ಲಿ, ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕಿಸ್ತಾನ ವಿರುದ್ಧದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಒಟ್ಟು 53 ಎಸೆತಗಳನ್ನು ಎದುರಿಸಿದ್ದರು. ಈ ಸಮಯದಲ್ಲಿ, ಅವರ ಬ್ಯಾಟ್ನಿಂದ 154.72 ಸ್ಟ್ರೈಕ್ ರೇಟ್ನಲ್ಲಿ 82 ರನ್ಗಳ ಅತ್ಯುತ್ತಮ ಇನ್ನಿಂಗ್ಸ್ ಹೊರಬಂದಿತು. ಈ ಪಂದ್ಯದಲ್ಲಿ ಕೊಹ್ಲಿ ಒಟ್ಟು 6 ಬೌಂಡರಿ ಹಾಗೂ 4 ಸಿಕ್ಸರ್ಗಳನ್ನು ಬಾರಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ತಂಡದ ಪರ ಶಾನ್ ಮಸೂದ್ 42 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು ಮತ್ತು ಇಫ್ತಿಕರ್ ಅಹ್ಮದ್ 34 ಎಸೆತಗಳಲ್ಲಿ 51 ರನ್ಗಳ ಹೋರಾಟದ ಅರ್ಧಶತಕದ ಇನಿಂಗ್ಸ್ ಆಡಿದರು. ಮತ್ತೊಂದೆಡೆ, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಕ್ರಮವಾಗಿ ಭಾರತ ತಂಡಕ್ಕೆ ಮೂರು ಯಶಸ್ಸನ್ನು ಸಾಧಿಸಿದರು.
ಇದೇ ವೇಳೆ ಗುರಿ ಬೆನ್ನತ್ತಲು ಮೈದಾನಕ್ಕಿಳಿದ ಭಾರತ ತಂಡದ ಆರಂಭವೇ ವಿಶೇಷವಾಗಿತ್ತು. ತಂಡ 6.1 ಓವರ್ಗಳಲ್ಲಿ ಕೇವಲ 31 ರನ್ಗಳಿಗೆ ತನ್ನ ನಾಲ್ಕು ದೊಡ್ಡ ವಿಕೆಟ್ಗಳನ್ನು ಕಳೆದುಕೊಂಡಿತು. ಇದಾದ ಬಳಿಕ ಕೊಹ್ಲಿ ಮತ್ತು ಪಾಂಡ್ಯ ನಡುವೆ 113 ರನ್ಗಳ ಅದ್ಭುತ ಶತಕದ ಜೊತೆಯಾಟವಿದ್ದು, ಭಾರತ ತಂಡ ನಾಲ್ಕು ವಿಕೆಟ್ಗಳಿಂದ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಲ್ಲಿ ಕೊಹ್ಲಿ ತಂಡಕ್ಕಾಗಿ 82 ರನ್ಗಳ ಅಜೇಯ ಹೋರಾಟದ ಅರ್ಧಶತಕವನ್ನು ಆಡಿದರು. ಜೊತೆಗೆ ಪಾಂಡ್ಯ 40 ರನ್ ಕೊಡುಗೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ