ಮಹೇಂದ್ರ ಸಿಂಗ್ ಧೋನಿ ಬಳಿಕ ಎಲ್ಲರ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಎಂಎಸ್ ಧೋನಿ (MS Dhoni) ಟೆಸ್ಟ್‌ನ ನಾಯಕತ್ವ ತೊರೆದ ನಂತರ ಅವರ ಜಾಗಕ್ಕೆ ಕೊಹ್ಲಿ ಆಯ್ಕೆ ಆದರು. ಬಳಿಕ ಕೊಹ್ಲಿ ಏಕದಿನ ಹಾಗೂ ಟಿ20 ತಂಡದ ನಾಯಕರೂ ಆದರು. ಆದರೆ ಕೊಹ್ಲಿಯನ್ನು ನಾಯಕತ್ವಕ್ಕೆ ಆಯ್ಕೆ ಮಾಡಿದವರು ಯಾರು ಎಂಬ ಪ್ರಶ್ನೆ ಅನೇಕರಲ್ಲಿ ಮನೆ ಮಾಡಿತ್ತು. ಈಗ ಅವರೇ ಈ ಗುಟ್ಟನ್ನು ಬಯಲು ಮಾಡಿದ್ದಾರೆ. ನನ್ನನ್ನು ನಾಯಕನನ್ನಾಗಿ ಮಾಡುವಂತೆ ಎಂಎಸ್ ಧೋನಿ ಹೇಳಿದ್ದರು ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹೇಳಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ವಿದೇಶಗಳಲ್ಲಿ ಅದರಲ್ಲೂ ಆಸ್ಟ್ರೇಲಿಯಾ (Australia) ಮತ್ತು ಇಂಗ್ಲೆಂಡ್‌ನಲ್ಲಿ ಯಶಸ್ಸು ಕಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ತಂಡ ಫೈನಲ್ ತಲುಪಿತ್ತು.
ಧೋನಿ ಕಾರಣ ನಾನು ನಾಯಕನಾದೆ:
ಆರ್‌ಸಿಬಿಯ ಪಾಡ್‌ಕಾಸ್ಟ್‌ನ ಸಂವಾದದ ವೇಳೆ ವಿರಾಟ್ ಕೊಹ್ಲಿ, ‘ಎಂಎಸ್ ಧೋನಿ ನನ್ನನ್ನು ನಾಯಕತ್ವಕ್ಕೆ ಆಯ್ಕೆ ಮಾಡಿದ್ದಾರೆ. ಅವರು ನನ್ನನ್ನು ಸರಿಯಾದ ವ್ಯಕ್ತಿ ಎಂದು ಹೇಳಿದ್ದರು. ಅವರಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಇದಕ್ಕೂ ಮೊದಲು ನಾನು ತಂಡಕ್ಕಾಗಿ ಹಲವು ಗೆಲುವಿನ ಇನ್ನಿಂಗ್ಸ್‌ಗಳನ್ನು ಆಡಿದ್ದೇನೆ. ಹಾಗಾಗಿ ನನಗೆ ಆಟದ ಬಗ್ಗೆ ಗೊತ್ತಿತ್ತು. ನಾನು ಪಿಚ್, ಬಾಲ್ ಮ,ತ್ತು ಬ್ಯಾಟರ್ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಇದು ನಾಯಕತ್ವದಲ್ಲಿ ನನಗೆ ತುಂಬಾ ನೆರವಾಯಿತು‘ ಎಂದು ಹೇಳಿದ್ದಾರೆ.
King Kohli talks about captaincy, 2014 and 2018 England tours, the bad form he went through last year, fun off field anecdotes and more, on @eatsurenow presents #RCBPodcast https://t.co/nvZIBuwNKP#PlayBold @imVkohli
— Royal Challengers Bangalore (@RCBTweets) February 25, 2023
ನಾನು ನಾಯಕನಾದಾಗ ಎಂಎಸ್ ಧೋನಿಯಿಂದ ಸಲಹೆ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ. ಅವರೂ ನನಗೆ ಸಹಾಯ ಮಾಡುತ್ತಿದ್ದರು. ಅವರಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ವಿರಾಟ್ ಕೊಹ್ಲಿ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ನಾಯಕನಾಗಿ ಅವರಿಗಿಂತ ಹೆಚ್ಚಿನ ಟೆಸ್ಟ್‌ಗಳನ್ನು ಯಾವ ಭಾರತೀಯನೂ ಗೆದ್ದಿಲ್ಲ. ನಾಯಕನಾಗಿ ಮೊದಲ ಟೆಸ್ಟ್‌ನಲ್ಲೇ ಕೊಹ್ಲಿ ಶತಕ ಸಿಡಿಸಿದ್ದರು.
ಇದನ್ನೂ ಓದಿ: Virat Kohli: ಕನಸಿನ ಮನೆ ಖರೀದಿಸಿದ ವಿರಾಟ್ ಕೊಹ್ಲಿ, ಬೆಲೆ ಎಷ್ಟು ಗೊತ್ತೇ? ಫೋಟೋಸ್ ನೋಡಿದ್ರೆ ಫಿದಾ ಆಗ್ತೀರಾ!
ತಂಡದಲ್ಲಿ ಆಯ್ಕೆಯಾಗುವ ಭರವಸೆ ಇರಲಿಲ್ಲ:
2011ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು. ಆ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರಿದ್ದರು. ಆ ತಂಡದಲ್ಲಿ ಸಚಿನ್ ಅವರಂತಹ ದಿಗ್ಗಜರ ಜೊತೆ ನನ್ನನ್ನು ಸೇರಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಾನು ತಂಡಕ್ಕೆ ಆಯ್ಕೆಯಾಗುವುದು ಖಚಿತವಾಗಿರಲಿಲ್ಲ, ಆದರೆ ನನಗೆ ಅವಕಾಶ ಸಿಕ್ಕಿತು. ಕೊನೆಗೆ ಟ್ರೋಫಿ ಗೆಲ್ಲುವಲ್ಲಿಯೂ ಯಶಸ್ವಿಯಾದೆವು ಎಂದು ಹೇಳಿಕೊಂಡಿದ್ದಾರೆ.
ಕೊಹ್ಲಿ ಹೊಸ ಮನೆ ಖರೀದಿ:
ಕೊಹ್ಲಿಯ ಅಲಿಬಾಗ್‌ನಲ್ಲಿ ಹೊಸ ಬಂಗಲೆ ಖರೀದಿಸಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅಲಿಬಾಗ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 19.24 ಕೋಟಿ ರೂಪಾಯಿಗೆ ಫಾರ್ಮ್‌ಹೌಸ್ ಅನ್ನು ಖರೀದಿಸಿದ್ದರು. ಇದೀಗ ಮತ್ತೊಂದು ಹೊಸ ಮನೆ ಖರೀದಿಸಿದ್ದಾರೆ. ವರದಿಯ ಪ್ರಕಾರ ವಿರಾಟ್ ಕೊಹ್ಲಿ ಆವಾಸ್ ವಿಲೇಜ್ ನಲ್ಲಿ 2,000 ಚದರ ಅಡಿ ವಿಲ್ಲಾಕ್ಕೆ 6 ಕೋಟಿ ರೂ. ನೀಡಿದ್ದಾರಂತೆ. ಈ ಆಸ್ತಿಗೆ ಮುದ್ರಾಂಕ ಶುಲ್ಕವಾಗಿ 36 ಲಕ್ಷ ರೂ. ಪಾವತಿಸಿದ್ದಾರೆ ಎನ್ನಲಾಗಿದೆ. ಈ ವಿಲ್ಲಾ 400 ಚದರ ಅಡಿಯ ಈಜುಕೊಳವನ್ನು ಸಹ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ