ಕೊನೆಯ 2 ಏಕದಿನ ಪಂದ್ಯ ಹಾಗೂ ಟಿ20 ಸರಣಿಗೆ ವಿರಾಟ್ ಕೊಹ್ಲಿ ಇಲ್ಲ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ 3 ಪಂದ್ಯಗಳಲ್ಲಿ ಕೊಹ್ಲಿ ಇರಲಿದ್ದು ಆನಂತರ ವಿಶ್ರಾಂತಿ ಪಡೆಯಲಿದ್ದಾರೆ.

Vijayasarthy SN | news18
Updated:January 23, 2019, 8:19 PM IST
ಕೊನೆಯ 2 ಏಕದಿನ ಪಂದ್ಯ ಹಾಗೂ ಟಿ20 ಸರಣಿಗೆ ವಿರಾಟ್ ಕೊಹ್ಲಿ ಇಲ್ಲ
ವಿರಾಟ್ ಕೊಹ್ಲಿ
  • News18
  • Last Updated: January 23, 2019, 8:19 PM IST
  • Share this:
ಮುಂಬೈ(ಜ. 23): ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ಕೆಲ ಪಂದ್ಯಗಳಿಗೆ ವಿಶ್ರಾಂತಿ ಕೊಡಲು ಬಿಸಿಸಿಐ ನಿರ್ಧರಿಸಿದೆ. ನ್ಯೂಜಿಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕೊಹ್ಲಿಯನ್ನು ಆಡಿಸದಿರಲು ನಿರ್ಧರಿಸಲಾಗಿದೆ. ಹಾಗೆಯೇ ಟಿ20 ಕ್ರಿಕೆಟ್ ಸರಣಿಗೂ ಕೊಹ್ಲಿಗೆ ರೆಸ್ಟ್ ಕೊಡಲಾಗಿದೆ. ವಿಶ್ವಕಪ್ ವೇಳೆಗೆ ವಿರಾಟ್ ಕೊಹ್ಲಿ ಅವರ ದೈಹಿಕ ಕ್ಷಮತೆಗೆ ಯಾವುದೇ ಹಾನಿಯಾಗದಂತೆ ಬಿಸಿಸಿಐ ಮುಂಜಾಗ್ರತೆ ವಹಿಸುತ್ತಿದೆ.

ವಿರಾಟ್ ಕೊಹ್ಲಿ ಕೆಲ ತಿಂಗಳುಗಳಿಂದ ನಿರಂತರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ಬಳಿಕ ಆಸ್ಟ್ರೇಲಿಯನ್ನರು ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದು ಕೊಹ್ಲಿ ಆ ಸರಣಿಯಲ್ಲಿ ಆಡಲಿದ್ದಾರೆ. ಅಲ್ಲಿಯವರೆಗೆ ಅವರಿಗೆ ವಿಶ್ರಾಂತಿ ನೀಡುವುದು ಕ್ರಿಕೆಟ್ ಮಂಡಳಿಯ ಉದ್ದೇಶವಾಗಿದೆ. ಆದರೆ, ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವವನ್ನು ಯಾರು ವಹಿಸಲಿದ್ದಾರೆಂಬುದು ಗೊತ್ತಾಗಿಲ್ಲ. ಆದರೆ, ರೋಹಿತ್ ಶರ್ಮಾ ಅವರು ತಂಡದ ಕ್ಯಾಪ್ಟನ್ ಆಗುವ ಸಾಧ್ಯತೆ ಇದೆ.

ನ್ಯೂಜಿಲೆಂಡ್ ಸರಣಿಗೂ ಮುನ್ನ ನಡೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಐತಿಹಾಸಿಕ ದಿಗ್ವಿಜಯ ಸಾಧಿಸಿದ್ದರು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಈ ಎರಡೂ ಸರಣಿಗಳನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯವನ್ನೂ ಭಾರತ ಗೆದ್ದು ಶುಭಾರಂಭ ಮಾಡಿದೆ. ಇನ್ನೆರಡು ಪಂದ್ಯಗಳಲ್ಲೂ ಕೊಹ್ಲಿಯೇ ತಂಡವನ್ನು ಮುನ್ನಡೆಸುತ್ತಾರೆ. ಆ ನಂತರ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಇದೇ ವರ್ಷ ಮೇ-ಜೂನ್ ತಿಂಗಳಲ್ಲಿ ವಿಶ್ವಕಪ್ ನಡೆಯಲಿದೆ.
First published:January 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading