ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ


Updated:February 20, 2018, 3:55 PM IST
ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಮತ್ತು ವಿವಿಯನ್ ರಿಚರ್ಡ್ಸ್
  • Share this:
ಜೋಹಾನ್ಸ್ ಬರ್ಗ್(ಫೆ.20): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಅದ್ಬುತ ಆಟದ ಮೂಲಕ ಇಡೀ ವಿಶ್ವದ ಗಮನೆ ಸೆಳೆದಿದ್ದಾರೆ. 3 ಟೆಸ್ಟ್, 6 ಏಕದಿನ ಪಂದ್ಯ ಮತ್ತು 1 ಟಿ-20 ಪಂದ್ಯದಿಂದ 4 ಶತಕ ಮತ್ತು 2 ಅರ್ಧಶತಕ ಸೇರಿ 870 ರನ್ ದಾಖಲಿಸಿದ್ಧಾರೆ. ಇನ್ನೂ 130 ರನ್ ಸಿಡಿಸಿದರೆ ವಿರಾಟ್ ಕೊಹ್ಲಿ ಏಕೈಕ ವಿದೇಶ ಸರಣಿಯಲ್ಲಿ 1000 ರನ್ ದಾಖಲೆ ಬರೆಯಲಿದ್ದಾರೆ.

ಅಂತಾರಾಷ್ಟ್ರೀಯ ಸರಣಿಯಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ಜೀವಂತ ದಂತಕಥೆ ವಿವಿಯನ್ ರಿಚರ್ಡ್ಸ್​ ಹೆಸರಿನಲ್ಲಿದೆ. 1976ರಲ್ಲಿ ಇಂಗ್ಲೆಂಡ್ ಸರಣಿಯಲ್ಲಿ ವಿವಿಯನ್ ರಿಚರ್ಡ್ಸ್ ಈ ದಾಖಲೆ ಬರೆದಿದ್ದರು. ಆ ಸರಣಿಯಲ್ಲಿ ವಿವಿಯನ್ ರಿಚರ್ಡ್ಸ್ ದಾಖಲೆಯ 1045 ರನ್ ದಾಖಲಿಸಿದ್ದರು. ಏಕದಿನ ಸರಣಿಯಲ್ಲಿ 216 ರನ್ ಗಳಿಸಿದ್ದ ರಿಚರ್ಡ್ಸ್, 4 ಟೆಸ್ಟ್ ಪಂದ್ಯಗಳಲ್ಲಿ 829 ರನ್ ಕಲೆ ಹಾಕಿದ್ದರು.

ವಿರಾಟ್ ಕೊಹ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1 ಶತಕ, 1 ಅರ್ಧಶತಕದ ಸೇರಿ 286 ರನ್ ಮತ್ತು 6 ಏಕದಿನ ಪಂದ್ಯಗಳಲ್ಲಿ 558 ರನ್ ಮತ್ತು 1 ಟಿ-20 ಪಂದ್ಯದಲ್ಲಿ 26 ರನ್ ಗಳಿಸಿದ್ಧಾರೆ. ಸದ್ಯ, ವಿರಾಟ್ ಕೊಹ್ಲಿ ಮುಂದೆ ಮತ್ತೊಂದು ಮೈಲಿಗಲ್ಲು ನಿರ್ಮಿಸುವ ಅವಕಾಶವಿದೆ.

ವಿವಿಯನ್ ರಿಚರ್ಡ್ಸ್ ಸಹ ಹಲವು ಬಾರಿ ವಿರಾಟ್ ಕೊಹ್ಲಿಯಲ್ಲಿ ತನ್ನ ಆಟ ನೋಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ವಿರಾಟ್ ಕೊಹ್ಲಿ, ನಾನು ಯಾರ ಜೊತೆಯೂ ಹೋರಾಡಬೇಕೆಂದು ಮೈದಾನಕ್ಕೆ ಇಳಿಯುವುದಿಲ್ಲ. ನನ್ನ ತಂಡದ ಪರವಾಗಿ ಆಡುವುದಷ್ಟೇ ನನ್ನ ತಲೆಯಲ್ಲಿರುತ್ತದೆ ಎಂದಿದ್ದಾರೆ.
First published:February 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ