• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Virat Kohli: ಐಪಿಎಲ್​ಗೂ ಮುನ್ನ ಬದಲಾಯ್ತು ಕಿಂಗ್​ ಕೊಹ್ಲಿ ಲುಕ್​, ಹುಡುಗರ ಹಾಟ್ ಫೆವರೇಟ್ ಆಗ್ತಿದೆ ವಿರಾಟ್ ಹೇರ್‌ಸ್ಟೈಲ್!

Virat Kohli: ಐಪಿಎಲ್​ಗೂ ಮುನ್ನ ಬದಲಾಯ್ತು ಕಿಂಗ್​ ಕೊಹ್ಲಿ ಲುಕ್​, ಹುಡುಗರ ಹಾಟ್ ಫೆವರೇಟ್ ಆಗ್ತಿದೆ ವಿರಾಟ್ ಹೇರ್‌ಸ್ಟೈಲ್!

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಐಪಿಎಲ್​ ಪ್ರಾರಂಭವಾಗಲು ಕೇವಲ ಒಂದು ವಾರ ಮಾತ್ರ ಉಳಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್ ಮಾರ್ಚ್ 31 ರಂದು ಆರಂಭವಾಗಲಿದೆ. ಇದಕ್ಕೂ ಮುನ್ನ ಕೊಹ್ಲಿ ಲುಕ್​ ಬದಲಾಗಿದೆ.

  • Share this:

ಐಪಿಎಲ್​ 2023 ಪ್ರಾರಂಭವಾಗಲು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) 16ನೇ ಸೀಸನ್ ಮಾರ್ಚ್ 31 ರಂದು ಆರಂಭವಾಗಲಿದೆ. ಈ ದೊಡ್ಡ ಕಾರ್ಯಕ್ರಮಕ್ಕೂ ಮುನ್ನ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ತಮ್ಮ ಲುಕ್​ ಬದಲಾಯಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಶಿಬಿರಕ್ಕೆ ಸೇರುವ ಮುನ್ನ ವಿರಾಟ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೇಶ ವಿನ್ಯಾಸವನ್ನು ಬದಲಾಯಿಸಿದ್ದಾರೆ. ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಅಭಿಮಾನಿಗಳಿಗೆ ಹೊಸ ಲುಕ್ ರಿವೀಲ್​ ಮಾಡಿದ್ದಾರೆ. ಇದರೊಂದಿಗೆ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ (Aalim Hakim) ತನಗೆ ಹೊಸ ರೂಪ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.


ಕೊಹ್ಲಿ ಲುಕ್​ಗೆ ಫಾನ್ಸ್​​ ಫಿದಾ:


ಇನ್ನು, ವಿರಾಟ್ ಕೊಹ್ಲಿ ಐಪಿಎಲ್​ ಆರಂಭಕ್ಕೂ ಮುನ್ನ ತಮ್ಮ ಲುಕ್​ ಬದಲಾಯಿಸಿಕೊಂಡಿದ್ದಾರೆ.  ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಅವರು ವಿರಾಟ್ ಕೊಹ್ಲಿಗೆ ಹೇರ್​ಸ್ಟೈಲ್​ ಮಾಡಿದ್ದು, ಸಖತ್​ ಆಗಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೊಹ್ಲಿ ಹಂಚಿಕೊಂಡ ಫೋಟೋ ನೋಡಿ ಇದೀಗ ಅವರ ಲುಕ್​ ಎಲ್ಲಡೆ ಸಖತ್​ ವೈರಲ್​ ಆಗುತ್ತಿದೆ.

View this post on Instagram


A post shared by Aalim Hakim (@aalimhakim)

ಹೇರ್​ ಕಟಿಂಗ್​ಗೆ ಸಾವಿರಾರು ಖರ್ಚು ಮಾಡುವ ಕೊಹ್ಲಿ:


ಕೊಹ್ಲಿ ಅವರು ಸೆಲೆಬ್ರಿಟಿ ಸ್ಟೈಲಿಸ್ಟ್ ರಶೀದ್ ಸಲಾಮ್ನಿ ಅವರಿಂದ ಏಷ್ಯಾಕಪ್​ ವೇಳೆ ಹೇರ್​ ಸ್ಟೈಲ್​​ ಮಾಡಿಸಿಕೊಂಡಿದ್ದರು. ಇವರು ಹಾರ್ದಿಕ್ ಸೇರಿದಂತೆ ಅನೇಕ ಸ್ಟಾರ್​ ಕ್ರಿಕೆಟಿಗರಿಗೆ ಹೇರ್​ ಸ್ಟೈಲ್​ ಮಾಡಿದ್ದರು. ಅದೇ ರೀತಿ ಅವರು ಕೊಹ್ಲಿಗೂ ಸಹ ಹೇರ್​ ಸ್ಟೈಲ್ ಮಾಡಿದ್ದು, ಕೆಲ ವರದಿಗಳ ಪ್ರಕಾರ ಅದೊಂದು ಕಟಿಂಗ್​ಗಾಗಿ ಕೊಹ್ಲಿ ಬರೋಬ್ಬರಿ 80 ಸಾವಿರ ರೂ. ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದೇ ರೀತಿ ಕೊಹ್ಲಿ ಧರಿಸುವ ವಾಚ್ ರೋಲೆಕ್ಸ್ ಕಂಪನಿಯದ್ದಾಗಿದೆ. ಇದರ ಬೆಲೆ ಸರಿ ಸುಮಾರು 28 ಲಕ್ಷ ರೂ. ಎನ್ನಲಾಗಿದೆ. ಅಲ್ಲದೇ ಈ ವಾಚನ್ನು ರೋಲೆಕ್ಸ್ ಕಂಪನಿ ನಮಗೆ ಹೇಗೆ ಬೇಕೋ ಹಾಗೆ ರೆಡಿ ಮಾಡಿಕೊಡುತ್ತದೆಯಂತೆ. ಹೀಗಾಗಿಯೇ ಕೊಹ್ಲಿ ಧರಿಸಿದ್ದ ಈ ವಾಚ್​ ಚಿನ್ನದ ಲೇಪಿತವಾಗಿದೆ. ಇದೇ ಕಾರಣಕ್ಕೆ ಅವರ ಬೆಲೆಯೂ ಅಷ್ಟೇ ದುಬಾರಿಯಾಗಿದೆ.


ಇದನ್ನೂ ಓದಿ: IPL 2023: ಆರ್​ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ


ಭರ್ಜರಿ ಫಾರ್ಮ್​ನಲ್ಲಿ ಕೊಹ್ಲಿ:


ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಏಷ್ಯಾಕಪ್‌ನಿಂದ ಅವರ ಬ್ಯಾಟ್‌ನಿಂದ ನಿರಂತರ ರನ್‌ಗಳು ಬರುತ್ತಿವೆ. ಎಲ್ಲಾ ಸ್ವರೂಪಗಳನ್ನು ಒಳಗೊಂಡಂತೆ, ಅವರು ಏಷ್ಯಾ ಕಪ್‌ ಬಳಿಕ ಐದು ಶತಕಗಳನ್ನು ಗಳಿಸಿದ್ದಾರೆ. ಚೆನ್ನೈ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗಲೂ ವಿರಾಟ್ ಈ ಫಾರ್ಮ್ ಅನ್ನು ಕಾಯ್ದುಕೊಳ್ಳಬೇಕು ಎಂಬುದು ಅಭಿಮಾನಿಗಳ ಆಶಯ.
ವಿರಾಟ್ ಈ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವವನ್ನು ಪ್ರವೇಶಿಸಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಂಡದಲ್ಲಿ ಹಿರಿಯ ಆಟಗಾರರಾಗಿ ಆಡಲಿದ್ದಾರೆ. ಆರ್‌ಸಿಬಿ 15 ವರ್ಷಗಳಿಂದ ಒಂದೇ ಒಂದು ಟೂರ್ನಿಯನ್ನು ಗೆದ್ದಿಲ್ಲ. ಆದರೆ, ಕಳೆದ ನಾಲ್ಕು ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಐಪಿಎಲ್‌ನಲ್ಲಿ ಅತ್ಯುತ್ತಮವಾಗಿದೆ. ತಂಡದ ಪ್ರಶಸ್ತಿ ಗೆಲ್ಲುವ ಬರವನ್ನು ವಿರಾಟ್ ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.


ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತವನ್ನು ಗೆಲ್ಲಿಸುವುದು ವಿರಾಟ್ ಕೊಹ್ಲಿಗೆ ಮುಂದಿನ ದೊಡ್ಡ ಸವಾಲಾಗಿದೆ. ಟೀಂ ಇಂಡಿಯಾ ಜೊತೆ ಸುದೀರ್ಘ ಕಾಲ ಇದ್ದರೂ ವಿರಾಟ್ ಗೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದಾಗ್ಯೂ, 2011ರಲ್ಲಿ, ಅವರು ಭಾರತದ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.

top videos
    First published: