ಬಾರ್ಮಿ ಆರ್ಮಿಯಿಂದ ಕೊಹ್ಲಿಗೆ ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ

news18
Updated:July 26, 2018, 3:30 PM IST
ಬಾರ್ಮಿ ಆರ್ಮಿಯಿಂದ ಕೊಹ್ಲಿಗೆ ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ
news18
Updated: July 26, 2018, 3:30 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನ ಬಾರ್ಮಿ ಆರ್ಮಿಯು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 2017-18ನೇ ಸಾಲಿನ ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಿದೆ.


ಬುಧವಾರ ಎಸೆಕ್ಸ್ ವಿರುದ್ಧದ ಮೊದಲ ದಿನದ ಅಭ್ಯಾಸ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ಬಾರ್ಮಿ ಆರ್ಮಿ ಅಭಿಮಾನಿ ಬಳಗದವರಿಂದ ಕೊಹ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬಿಸಿಸಿಐ ತನ್ನ ಅಧಿಕೃತ ಟ್ಟಿಟರ್ ಖಾತೆಯಲ್ಲಿ ಕೊಹ್ಲಿ ಅವರಿಗೆ ನೀಡಿದ ಪ್ರಶಸ್ತಿಯ ಫೋಟೋವನ್ನು ಹಂಚಿಕೊಂಡಿದೆ. ಮೂರೂ ಮಾದರಿಯ ಕ್ರಿಕೆಟ್​​ನಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಅಭ್ಯಾಸ ಪಂದ್ಯದಲ್ಲು 68 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.


 ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್​ ಸರಣಿಯ ಪೈಕಿ ಮೊದಲ ಪಂದ್ಯ ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಭಾರತ ಈಗಾಗಲೇ ಕಠಿಣ ಅಭ್ಯಾಸದಲ್ಲಿ ತೊಡಗಿದೆ.

First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...