Virat Kohli: ವಿರಾಟ್​ ಕೊಹ್ಲಿ ನನಗಿಂತ ಉತ್ತಮ, ಅಚ್ಚರಿಯ ಹೇಳಿಕೆ ನೀಡಿದ ಗಂಗೂಲಿ

Virat Kohli: ಕೊಹ್ಲಿ ಭಾರತಕ್ಕಾಗಿ ಮಾತ್ರವಲ್ಲ, ತನಗಾಗಿಯೂ ರನ್ ಗಳಿಸಬೇಕಾಗಿದೆ. ಇದು ಅವರಿಗೆ ಉತ್ತಮ ಸೀಸನ್ ಆಗಲಿದೆ ಎಂದು ಭಾವಿಸುತ್ತೇವೆ ಎಂದು ಕೊಹ್ಲಿ ಪರ ಬ್ಯಾಟ್​ ಬೀಸಿದ ಸೌರ್ ಗಂಗೂಲಿ.

ಗಂಗೂಲಿ-ಕೊಹ್ಲಿ

ಗಂಗೂಲಿ-ಕೊಹ್ಲಿ

  • Share this:
ಏಷ್ಯಾಕಪ್‌ನಲ್ಲಿ (Asia Cup) ಎರಡು ಅರ್ಧಶತಕಗಳು ಮತ್ತು ಅವರ ಚೊಚ್ಚಲ T20I ಶತಕದೊಂದಿಗೆ ಪುನರಾಗಮನ ಮಾಡುವ ಮೊದಲು ವಿರಾಟ್ ಕೊಹ್ಲಿ ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್‌ನಿಂದ ಒಂದು ತಿಂಗಳ ವಿರಾಮ ತೆಗೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಅನೇಕ ಅನುಭವಿಗಳು ಅವರನ್ನು ಟೀಕಿಸಿದರು. ಆದರೆ ಇದೀಗ ಅವರೆಲ್ಲರಿಗೂ ಕೊಹ್ಲಿ ತಮ್ಮ ಬ್ಯಾಟಿಂಗ್​ ಮೂಲಕ ಉತ್ತರ ನೀಡಿದ್ದಾರೆ. ಅಲ್ಲದೇ ಮುಂಬರುವ ಟಿ20 ವಿಶ್ವಕಪ್​ಗೆ (T20 World Cup) ತಂಡದ ದೊಡ್ಡ ತಲೆನೋವಾಗಿದ್ದ ಕೊಹ್ಲಿ ಫಾರ್ಮ್​ ಬಗ್ಗೆ ಇದೀಗ ಸ್ಪಷ್ಟನೆ ದೊರಕಿದ್ದು, ತಂಡದಲ್ಲಿ ಹೊಸ ಆಶಾಭಾವನೆ ಮೂಡಿದೆ. ಇದರ ನಡುವೆ BCCI ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಸಹ ವಿರಾಟ್​ ಕೊಹ್ಲಿ ಕುರಿತು ಮಾತನಾಡಿದ್ದು, ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ಕೊಹ್ಲಿ ನನಗಿಂತ ಉತ್ತಮ ಎಂದ ದಾದಾ:

ಹೌದು, ಇದೀಗ ಕೊಹ್ಲಿ ಮತ್ತೆ ಫಾರ್ಮ್​ಗೆ ಮರಳಿದ್ದು, ಎಲ್ಲಡೆಯಿಂದ ಉತ್ತಮ ಪ್ರತಿಕ್ರಯೆಗಳು ಬರುತ್ತಿವೆ.ದರಂತೆ ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ವಿರಾಟ್​ ಕುರಿತು ಮಾತನಾಡಿದ್ದು, ಅಚ್ಚರಿ ಮೂಡಿಸಿದೆ. ಕೊಹ್ಲಿ ಕುರಿತು ಮಾತನಾಡಿರುವ ಗಂಗೂಲಿ, ‘ಕೊಹ್ಲಿ ಭಾರತಕ್ಕಾಗಿ ಮಾತ್ರವಲ್ಲ, ತನಗಾಗಿಯೂ ರನ್ ಗಳಿಸಬೇಕಾಗಿದೆ. ಇದು ಅವರಿಗೆ ಉತ್ತಮ ಸೀಸನ್ ಆಗಲಿದೆ ಎಂದು ಭಾವಿಸುತ್ತೇವೆ. ಅವರು ಲಯಕ್ಕೆ ಮರಳುತ್ತಾರೆ ಎಂದು ನಮಗೆಲ್ಲರಿಗೂ ವಿಶ್ವಾಸವಿದೆ. ವಿರಾಟ್‌ ಕೊಹ್ಲಿ ತಮಗಿಂತಲೂ ಅತ್ಯಂತ ಕೌಶಲಭರಿತ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ಆಟಗಾರ. ಇದೇ ರೀತಿ ಅವರು ತಮ್ಮ ಬ್ಯಾಟಿಂಗ್​ ಮುಂದುವರೆಸಬೇಕು. ಹೋಲಿಕೆಯು ಆಟಗಾರನಾಗಿ ಕೌಶಲದ ದೃಷ್ಟಿಯಿಂದ ಇರಬೇಕು. ನನಗಿಂತಲೂ ಕೊಹ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬಹುದು. ಆತ ಓರ್ವ ಪ್ರಚಂಡ ಆಟಗಾರ‘ ಎಂದು ಹೇಳಿದ್ದಾರೆ.

ಇನ್ನು, ಕೊಹ್ಲಿ ಸೆಪ್ಟೆಂಬರ್ 8 ರಂದು ಅಫ್ಘಾನಿಸ್ತಾನ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದರು. ಅವರು 61 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 122 ರನ್ ಗಳಿಸಿದರು. ಸುಮಾರು 1020 ದಿನಗಳ ನಂತರ ಕೊಹ್ಲಿ ಬ್ಯಾಟ್‌ನಿಂದ ಶತಕ ಬಂದಿತ್ತು. ಇದಕ್ಕೂ ಮುನ್ನ ವಿರಾಟ್ 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದರು.

ಇದನ್ನೂ ಓದಿ: Team India: ಬುಮ್ರಾ-ಹರ್ಷಲ್ ಪಟೇಲ್ ಫಿಟ್ನೆಸ್ ಪರೀಕ್ಷೆ, ಒಬ್ಬರು ಇನ್​ ಒಬ್ಬರು ಔಟ್​!

ಕೊಹ್ಲಿ ಫಾರ್ಮ್​ ಬಗ್ಗೆ ಮಾತಾನಾಡಿದ್ದ ಗಂಗೂಲಿ:

ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಮಾತನಾಡಿದ್ದ ಗಂಗೂಲಿ, ‘ಕೊಹ್ಲಿ ಅವರ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅವರು ಶ್ರೇಷ್ಠ ಬ್ಯಾಟರ್.ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ನಾನು ಮತ್ತು ಇತರ ಅನೇಕ ಶ್ರೇಷ್ಠ ಕ್ರಿಕೆಟಿಗರು ಒಂದು ಸಮಯದಲ್ಲಿ ಫಾರ್ಮ್ ಕಳೆದುಕೊಂಡು ಗಂಭೀರ ತೊಂದರೆಗೆ ಸಿಲುಕಿದ್ದೆವು. ಆದರೆ ನಾವು ಫಾರ್ಮ್‌ಗೆ ಮರಳಿದೆವು. ಕೊಹ್ಲಿ ಇದೀಗ ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Virat Kohli: ಕೊಹ್ಲಿಗೆ ಸಿಕ್ಕಷ್ಟು ಅವಕಾಶಗಳು ಬೇರೆ ಯಾರಿಗೂ ಸಿಕ್ಕಿಲ್ಲ, ಶಾಕಿಂಗ್​ ಹೇಳಿಕೆ ನೀಡಿದ ಗೌತಮ್ ಗಂಭೀರ್​

ಶೀಘ್ರವೇ ಅವರು ತಮ್ಮ ಹಳೆಯ ಫಾರ್ಮ್​ಗೆ ಮರಳಲಿದ್ದಾರೆ. ಏಷ್ಯಾಕಪ್‌ನಲ್ಲಿ ಅವರು ತಮ್ಮ ಹಿಂದಿನ ರನ್ ಮಷಿನ್ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆ ಎಂದು ನನಗೆ ಭರವಸೆಯಿದೆ‘ ಎಂದು ಈ ಮೊದಲು ಹೇಳಿದ್ದರು. ಅದೇ ರೀತಿ ಇದೀಗ ಅವರು ಮತ್ತೆ ಫಾರ್ಮ್​ಗೆ ಮರಳಿದ್ದಾರೆ.
Published by:shrikrishna bhat
First published: