ವಿರಾಟ್ ಕೊಹ್ಲಿ 2023 ಅನ್ನು ಶತಕಗಳ ಮೂಲಕವೇ ಆರಂಭಿಸಿದ್ದಾರೆ. ಶ್ರೀಲಂಕಾ (Sri Lanka) ವಿರುದ್ಧದ 3 ODI ಸರಣಿಯಲ್ಲಿ ಅವರು ಎರಡು ಶತಕಗಳನ್ನು ಸಿಡಿಸಿದರು. ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ (IND vs SL) ವಿರುದ್ಧದ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ 160 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು. ಇದು ಕೊಹ್ಲಿಯ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್ನ 74ನೇ ಶತಕವಾಗಿತ್ತು. ಆದರೆ ಕಳೆದ 3 ವರ್ಷಗಳಿಂದ ಕೊಹ್ಲಿಯ 71ನೇ ಅಂತಾರಾಷ್ಟ್ರೀಯ ಶತಕಕ್ಕಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅಂತಿಮವಾಗಿ ಅಫ್ಘಾನ್ ವಿರುದ್ಧ ಶತಕ ಸಿಡಿಸುವ ಮೂಲಕ ಕೊಹ್ಲಿ ಕಾಯುವಿಕೆಗೆ ಫುಲ್ ಸ್ಟಾಪ್ ಇಟ್ಟಿದ್ದರು. ಇದರ ಬಳಿಕ ವಿರಾಟ್ ಮತ್ತೆ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದಾರೆ. ಆದರೆ ಕೊಹ್ಲಿಯ ಈ ಶತಕಕ್ಕಾಗಿ ಓರ್ವ ಅಭಿಮಾನಿ ತಮ್ಮ ಮದುವೆಯನ್ನೇ ಮುಂದೂಡಿದ್ದನಂತೆ.
ಕೊಹ್ಲಿ ಶತಕಕ್ಕಾಗಿ ಕಾಯುತ್ತಿದ್ದ ಅಭಿಮಾನಿ:
ವಿರಾಟ್ ಕೊಹ್ಲಿ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ಬಳಿಕವೇ ತಾನು ಮದುವೆಯಾ ಆಗುವುದಾಗಿ ಕೊಹ್ಲಿಯ ಓರ್ವ ಅಭಿಮಾನಿ ಶಪಥ ಮಾಡಿದ್ದರು. ಅಂದಹಾಗೆ, ಕೊಹ್ಲಿಯ ಎಲ್ಲಾ ಅಭಿಮಾನಿಗಳ ಈ ಕಾಯುವಿಕೆ ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ನಲ್ಲಿ ಪೂರ್ಣಗೊಂಡಿತ್ತು. ಈ ಟೂರ್ನಿಯಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಶತಕ ಪೂರೈಸಿದ್ದರು. ಆದರೆ, ವಿರಾಟ್ ಅವರ ಕಟ್ಟಾ ಅಭಿಮಾನಿ 34 ವರ್ಷದ ಅಮನ್ ಅಗರ್ವಾಲ್ ಕೊಹ್ಲಿಯ ಶತಕಕ್ಕಾಗಿ ದೊಡ್ಡ ನಿರ್ದಾರವನ್ನೇ ತೆಗೆದುಕೊಂಡಿದ್ದರು.
"I asked for the 71st century but he scored 74th on my special day" ❤️❤️❤️@imVkohli @AnushkaSharma @StayWrogn pic.twitter.com/zHopZmzKdH
— Aman Agarwal (@Aman2010Aman) January 16, 2023
ನ್ಯೂಜಿಲ್ಯಾಂಡ್ ಸರಣಿಗೆ ಟೀಂ ಇಂಡಿಯಾ ಸಿದ್ಧ:
ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಗೆಲುವಿನ ಬಳಿಕ ಇದೀಗ ಭಾರತ ತಂಡ ಜನವರಿ 18ರಿಂದ ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜನವರಿ 21 ರಂದು ರಾಯ್ಪುರದಲ್ಲಿ ನಡೆಯಲಿದ್ದು, ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಜನವರಿ 24 ರಂದು ಇಂದೋರ್ನಲ್ಲಿ ನಡೆಯಲಿದೆ. ಎಲ್ಲಾ ಮೂರು ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ನಡೆಯಲಿವೆ.
ನ್ಯೂಜಿಲೆಂಡ್ ವಿರುದ್ಧದ ಭಾರತ ODI ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ