ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ (Team India) ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ (Virat Kohli) ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಈ ನಡುವೆ ವಿರಾಟ್ ಇನ್ಸ್ಟಾಗ್ರಾಂನಲ್ಲಿ ಒಂದು ಸ್ಟೋರಿಯನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿ ವಿರಾಟ್ ಕೊಹ್ಲಿಯೇ ಎಂದು ಹಲವರು ಭಾವಿಸಿದ್ದರು. ಆದರೆ ಅವರು ವಿರಾಟ್ ಅಲ್ಲ ವಿರಾಟ್ನ ನಕಲಿ. ವಿರಾಟ್ನ ಈ ನಕಲಿ ವ್ಯಕ್ತಿ ಮುಂಬೈನ ಲಿಂಕಿಂಗ್ ರೋಡ್ ಪ್ರದೇಶದಲ್ಲಿ ಪೂಮಾ (Puma) ಬ್ರಾಂಡ್ನ ಬಟ್ಟೆ ಮತ್ತು ಪಾದರಕ್ಷೆಗಳನ್ನು ಮಾರಾಟ ಮಾಡುತ್ತಿರುವ ವಿಡಿಯೋವನ್ನು ಕೊಹ್ಲಿ ಹಂಚಿಕೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರಾಟ್ ಪೂಮಾಗೆ ದೂರು ಸಹ ನೀಡಿದ್ದಾರೆ.
ಪೂಮಾಗೆ ವಿರಾಟ್ ದೂರು:
ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು 'ನನ್ನಂತೆ ಕಾಣುವ ವ್ಯಕ್ತಿಯೊಬ್ಬರು ಮುಂಬೈನ ಲಿಂಕಿಂಗ್ ರಸ್ತೆಯಲ್ಲಿ ಪೂಮಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಪೂಮಾ ಇಂಡಿಯಾ, ನೀವು ಈ ವಿಷಯವನ್ನು ಪರಿಶೀಲಿಸುತ್ತೀರಾ?‘ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
Someone is impersonating Virat Kohli and selling Puma products 🙊
📷 VK Insta @imVkohli pic.twitter.com/BtqdD0JEIn
— Karamdeep 🎥📱 (@oyeekd) November 25, 2022
ಇದನ್ನೂ ಓದಿ: IND vs BAN Test: ಬಾಂಗ್ಲಾದೇಶ್ ಟೆಸ್ಟ್ ಸರಣಿಯಿಂದಲೂ ಜಡೇಜಾ ಔಟ್, ತಂಡಕ್ಕೆ ಹೊಸ ಆಟಗಾರನ ಎಂಟ್ರಿ
ಮಾರ್ಕೆಟಿಂಗ್ ತಂತ್ರಗಾರಿಕೆ:
ಇದು ವಾಸ್ತವವಾಗಿ ಮಾರುಕಟ್ಟೆ ತಂತ್ರವಾಗಿತ್ತು. ಜರ್ಮನಿಯ ಕ್ರೀಡಾ ಬ್ರಾಂಡ್ ಆದ ಪೂಮಾ ಪ್ರಚಾರಕ್ಕಾಗಿ ಈ ಸಾಹಸ ಮಾಡಿದೆ. ಕೆಲ ಮಾಹಿತಿಯ ಪ್ರಕಾರ, ಉತ್ಪನ್ನವನ್ನು ಪ್ರಚಾರ ಮಾಡಲು ಪೂಮಾ ತನ್ನ ಎಲ್ಲಾ ಬ್ರಾಂಡ್ ಅಂಬಾಸಿಡರ್ಗಳ ನಕಲುಗಳನ್ನು ದೆಹಲಿ, ಮುಂಬೈ ಮತ್ತು ಗುರುಗ್ರಾಮ್ನ ಮಳಿಗೆಗಳಲ್ಲಿ ಇರಿಸಿದೆ. ಇದರಲ್ಲಿ ವಿರಾಟ್ ಜೊತೆಗೆ ಸುನಿಲ್ ಛೆಟ್ರಿ, ಕರೀನಾ ಕಪೂರ್ ಮತ್ತು ಯುವರಾಜ್ ಸಿಂಗ್ ಹೋಲುವ ನಕಲಿ ವ್ಯಕ್ತಿಗಳನ್ನು ಕಂಪನಿಯೇ ಇರಿಸಿದೆ ಎನ್ನಲಾಗುತ್ತಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಡುಪ್ಲಿಕೇಟ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.
ಪಾಕ್ ವಿರುದ್ಧದ ಪಂದ್ಯ ನೆನಪಿಸಿಕೊಂಡ ಕೊಹ್ಲಿ:
ಪಾಕಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಕೊಹ್ಲಿ ಅಕ್ಷರಶಃ ಪಾಕ್ ಬೌಲರ್ಗಳ ಬೆವರಿಳಿಸಿದ್ದರು. ಇದೇ ಇನ್ನಿಂಗ್ಸ್ ಕುರಿತು ಇದೀಗ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದು, '23 ಅಕ್ಟೋಬರ್ 2022 ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾಗಿರುತ್ತದೆ. ಈ ಹಿಂದೆ ಯಾವತ್ತೂ ಕ್ರಿಕೆಟ್ ಮ್ಯಾಚ್ನಲ್ಲಿ ಈ ರೀತಿಯ ಶಕ್ತಿಯನ್ನು ಅನುಭವಿಸಿರಲಿಲ್ಲ. ಅದು ಎಷ್ಟು ಸುಂದರ ಸಂಜೆ!' ಎಂದು ಬರೆದುಕೊಂಡಿದ್ದಾರೆ. ಇದೀಗ ಕೊಹ್ಲಿಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
October 23rd 2022 will always be special in my heart. Never felt energy like that in a cricket game before. What a blessed evening that was 💫🙏 pic.twitter.com/rsil91Af7a
— Virat Kohli (@imVkohli) November 26, 2022
ಹೌದು, ಇದೀಗ ಕೊಹ್ಲಿ ಪೋಸ್ಟ್ ನಂತರ ಅವರು ನಿವೃತ್ತಿ ನೀಡುತ್ತಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕೆಲ ಕಾರಣಗಳನ್ನೂ ನೀಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಇದೇ ರೀತಿಯ ಪೋಸ್ಟ್ ಮಾಡುವ ಮೂಲಕ ಏಕಾಏಕಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ಕೊಹ್ಲಿ ಸಹ ಧೋನಿ ರೀತಿಯಲ್ಲೇ ಮಾಡಬಹುದೇ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ