Virat Kohli: ಏಷ್ಯಾಕಪ್​ಗಾಗಿ ಭರ್ಜರಿ ತಯಾರಿ ಆರಂಭಿಸಿದ ಕೊಹ್ಲಿ, ಕಿಂಗ್​ ಈಸ್​ ಬ್ಯಾಕ್​ ಎಂದ ಫ್ಯಾನ್ಸ್

ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಅವರು ಕ್ರಿಕೆಟ್​ನಿಂದ ಕೊಂಚ ಬ್ರೇಕ್​ ತೆಗೆದುಕೊಂಡಿದ್ದು, ವೆಸ್ಟ್​ ಇಂಡೀಸ್​ ಮತ್ತು ಜಿಂಬಾಬ್ವೆ ಸರಣಿಯಿಂದ ಹೊರಗುಳಿದಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ ಶ್ರೀಲಂಕಾದಲ್ಲಿ ಆಯೋಜನೆ ಆಗಿದ್ದ ಟೂರ್ನಿಯು ಅನಿವಾರ್ಯ ಕಾರಣಗಳಿಂದ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಅಲ್ಲದೇ ಕಿಂಗ್​ ಕೊಹ್ಲಿ  (Virat Kohli)  ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಿದ್ದಾರೆ. ಹೌದು, ಕೊಹ್ಲಿ ಕಳೆದ ಕೆಲ ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುವಲ್ಲಿ ಕಷ್ಟಪಡುತ್ತಿದ್ದು, ಕಳೆದ ವೆಸ್ಟ್ ಇಂಡೀಸ್​ ಮತ್ತು ಮುಂಬರಲಿರುವ ಜಿಂಬಾಬ್ವೆ ಸರಣಿಗಳಿಂದಲೂ ಕೊಹ್ಲಿ ದೂರವುಳಿದಿದ್ದಾರೆ. ಆದರೆ ಅವರು ಏಷ್ಯಾಕಪ್​ಗೆ ಆಯ್ಕೆ ಆಗಿದ್ದು, ಇದೀಗ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಏಷ್ಯಾಕಪ್​ಗಾಗಿ ವಿರಾಟ್​ ತಯಾರಿ:

ಹೌದು, ಏಷ್ಯಾ ಕಪ್​ 2022 ಇದೇ ಆಗಸ್ಟ್ 27ರಿಂದ ಆರಂಭವಾಗಲಿದೆ. ಅದರಲ್ಲಿಯೂ ಆಗಸ್ಟ್ 28ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಈಗಾಗಲೇ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಈ ಪಂದ್ಯ ವಿರಾಟ್​ ಕೊಹ್ಲಿಗೂ ಅಷ್ಟೇ ಪ್ರಮುಖವಾಗಿದ್ದು, ಕಳೆದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಟೀಂ ಇಂಡಿಯಾ ಹಾತೊರಿಯುತ್ತಿದೆ. ಇದರ ಭಾಗವಾಗಿ ವಿರಾಟ್​ ಕೊಹ್ಲಿ ಸಹ ಭರ್ಜರಿ ತಯಾರಿಯಲ್ಲಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕೊಹ್ಲಿ ಅಭ್ಯಾಸ ಆರಂಭಿಸಿದ್ದು, ರನ್ನಿಂಗ್​ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಇದನ್ನು ನೋಡಿದ ಕೊಹ್ಲಿ ಅಭಿಮಾನಿಗಳು ಕಿಂಗ್​ ಈಸ್​ ಬ್ಯಾಕ್​ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್​ಗಾಗಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ, ಟೀಂ ಇಂಡಿಯಾಗೆ ಎಂಟ್ರಿ ಕೊಟ್ರಾ ಸ್ಟಾರ್​ ಪ್ಲೇಯರ್​

ಪಾಕ್​ ವಿರುದ್ಧ ಶತಕ ಸಿಡಿಸಲಿರುವ ಕೊಹ್ಲಿ:

ಹೌದು, ಏಷ್ಯಾ ಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಕೊಹ್ಲಿ ಶತಕ ಸಿಡಿಸಲಿದ್ದಾರೆ. ಇದು ಹೇಗೆಂದು ಅಚ್ಚರಿಪಡಬೇಡಿ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಗುಂಪು ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯು ಆಗಸ್ಟ್ 27 ರಿಂದ ಪ್ರಾರಂಭವಾಗುತ್ತಿದೆ. ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಶತಕ ಸಿಡಿಸಲಿದ್ದಾರೆ. ಹೌದು, ಕೊಹ್ಲಿ ಪಾಕ್​ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಂತೆ ತಮ್ಮ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಾಯಕ ರೋಹಿತ್ ಶರ್ಮಾ 132 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: Virat Kohli: ಏಷ್ಯಾ ಕಪ್​ನಲ್ಲಿ ಪಾಕ್​ ವಿರುದ್ಧ ಶತಕ ಸಿಡಿಸಲಿದ್ದಾರೆ ಕಿಂಗ್​ ಕೊಹ್ಲಿ, ಈ ಸಾಧನೆ ಮಾಡಲಿರುವ 2ನೇ ಭಾರತೀಯ ಆಟಗಾರ

ಏಷ್ಯಾ ಕಪ್​ಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ),  ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: