ಪಾಂಡ್ಯ-ರಾಹುಲ್ ಹೇಳಿಕೆಗೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ: ವಿರಾಟ್ ಕೊಹ್ಲಿ

ಇತ್ತೀಚೆಗಷ್ಟೆ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಭಾಗವಹಿಸಿದ್ದು, ಇದರಲ್ಲಿ ಕರುಣ್ ಕೇಳಿದ ಪ್ರಶ್ನೆಗೆ ಮನಬಂದಂತೆ ಉತ್ತರಿಸಿದ ಇವರಿಬ್ಬರು, ಸೆಕ್ಸ್​​, ಮಹಿಳೆಯರ ಬಗ್ಗೆ ವರ್ಣಬೇಧದ ಮಾತುಗಳನ್ನು ಆಡಿದ್ದರು.

Vinay Bhat | news18
Updated:January 11, 2019, 12:10 PM IST
ಪಾಂಡ್ಯ-ರಾಹುಲ್ ಹೇಳಿಕೆಗೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: January 11, 2019, 12:10 PM IST
ಸಿಡ್ನಿ: ಖಾಸಗಿ ಚಾನೆಲ್​​ವೊಂದರಲ್ಲಿ ಪ್ರಸಾರವಾಗುವ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಮನಬಂದಂತೆ ಉತ್ತರಿಸಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಅವರು ಸದ್ಯ ನಿಷೇಧದ ಭೀತಿಯಲ್ಲಿದ್ದಾರೆ.

ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ ಅವರು 'ಪಾಂಡ್ಯ ಹಾಗೂ ರಾಹುಲ್ ನೀಡಿರುವ ಹೇಳಿಕೆಗೆ ಟೀಂ ಇಂಡಿಯಾ ಜವಾಬ್ದಾರರಲ್ಲ' ಎಂದು ಹೇಳಿದ್ದಾರೆ.

'ಪಾಂಡ್ಯ-ರಾಹುಲ್ ನೀಡಿರುವ ಉತ್ತರಕ್ಕೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರಿಬ್ಬರ ವೈಯಕ್ತಿಕ ಹೇಳಿಕೆ. ಇದರಿಂದ ನಮ್ಮ ಕ್ರಿಕೆಟ್ ತಂಡದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ. ಬಿಸಿಸಿಐ ನಿರ್ಧಾರದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಪಾಂಡ್ಯ-ರಾಹುಲ್ ಕಣಕ್ಕಿಳಿಯಲಿದ್ದಾರೆಯೆ ಎಂಬುದನ್ನು ನಿರ್ಧರಿಸಬೇಕಿದೆ. ಟೀಂ ಇಂಡಿಯಾ ದೃಷ್ಟಿಕೋನದ ಪ್ರಕಾರ ಈ ವಿಚಾರದಿಂದ ನಮ್ಮ ಡ್ರೆಸ್ಸಿಂಗ್ ಕೊಠಡಿಗೆ ಯಾವುದೇ ಕುಂದು ಸಂಭವಿಸಿಲ್ಲ' ಎಂದಿದ್ದಾರೆ.

ಇದನ್ನೂ ಓದಿ: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಇಂದು 46ನೇ ಜನ್ಮ ದಿನ ಸಂಭ್ರಮ

ಇತ್ತೀಚೆಗಷ್ಟೆ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಭಾಗವಹಿಸಿದ್ದು, ಇದರಲ್ಲಿ ಕರುಣ್ ಕೇಳಿದ ಪ್ರಶ್ನೆಗೆ ಮನಬಂದಂತೆ ಉತ್ತರಿಸಿದ ಇವರಿಬ್ಬರು, ಸೆಕ್ಸ್​​, ಮಹಿಳೆಯರ ಬಗ್ಗೆ ವರ್ಣಬೇಧದ ಮಾತುಗಳನ್ನು ಆಡಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಪಾಂಡ್ಯ ಹಾಗೂ ರಾಹುಲ್​ ಅವರನ್ನು ಎರಡು ಅಂತರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿಷೇಧ ಹೇರಬೇಕು ಎಂದು ಹೇಳಿದೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ