• Home
  • »
  • News
  • »
  • sports
  • »
  • Rohit Sharma-Virat Kohli: ಆರ್​ಸಿಬಿ ಬಗ್ಗೆ ಅಪಹಾಸ್ಯ ಮಾಡಿದ ರೋಹಿತ್ ಶರ್ಮಾ ಅಭಿಮಾನಿಯನ್ನು ಕೊಂದ ಕೊಹ್ಲಿ ಫ್ಯಾನ್

Rohit Sharma-Virat Kohli: ಆರ್​ಸಿಬಿ ಬಗ್ಗೆ ಅಪಹಾಸ್ಯ ಮಾಡಿದ ರೋಹಿತ್ ಶರ್ಮಾ ಅಭಿಮಾನಿಯನ್ನು ಕೊಂದ ಕೊಹ್ಲಿ ಫ್ಯಾನ್

ರೋಹಿತ್ - ವಿರಾಟ್

ರೋಹಿತ್ - ವಿರಾಟ್

Rohit Sharma-Virat Kohli: ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಯ್ಯೂರ್ ಗ್ರಾಮದಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

  • Share this:

ತಮಿಳುನಾಡಿನ (Tamil Nadu) ಅರಿಯಲೂರು ಜಿಲ್ಲೆಯ ಪೊಯ್ಯೂರ್ ಗ್ರಾಮದಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ (Murder) ಮಾಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರದಂದು ಆರೋಪಿ ಹಾಗೂ ಮೃತರು ಮದ್ಯ ಸೇವಿಸಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇಬ್ಬರ ನಡುವೆ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಬಗ್ಗೆ ಜಗಳ ಆರಂಭವಾಗಿದೆ. ಬಳಿಕ ಇದು ಅತಿರೇಕಕ್ಕೆ ತಿರುಗಿದ್ದು, ಅಂತಿಮವಾಗಿ ಇಬ್ಬರು ಸ್ನೇಹಿತರಲ್ಲಿ ಓರ್ವ ಕೊಹ್ಲಿ ಅಭಿಮಾನಿ ರೋಹಿತ್ ಶರ್ಮಾ ಫ್ಯಾನ್ (Fan)​ ಅನ್ನು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.


RCB ಬಗ್ಗೆ ಮಾತನಾಡಿದಕ್ಕೆ ಕೊಲೆ:


ಪೊಲೀಸ್​ ಅಧಿಕಾರಿಗಳ ಪ್ರಕಾರ, ಗುರುವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಮೃತ ವ್ಯಕ್ತಿ 24 ವರ್ಷದ ಪಿ ವಿಘ್ನೇಶ್ ಎಂದು ಗುರುತಿಸಲಾಗಿದ್ದು, ಈತ ರೋಹಿತ್ ಶರ್ಮಾ ಅಭಿಮಾನಿ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಇಬ್ಬರೂ ಮದ್ಯ ಸೇವಿಸಿದ್ದರು. ಈ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ವಿಘ್ನೇಶ್ ಮುಂಬೈ ಇಂಡಿಯನ್ಸ್‌ಗೆ ಬೆಂಬಲ ನೀಡುತ್ತಿದ್ದರೆ, ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಇಷ್ಟಪಡುತ್ತಿದ್ದರು.


ಇಬ್ಬರೂ ಪಾನಮತ್ತರಾಗಿ ಮಾತನಾಡುವಾಗ ವಿಘ್ನೇಶ್ RCB ಮತ್ತು ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದರು. ಅಷ್ಟೇ ಅಲ್ಲದೆ ಧರ್ಮರಾಜ್‌ನನ್ನು ಹಂಗಿಸುವುದು ವಿಘ್ನೇಶ್‌ನ ಚಾಳಿಯಾಗಿತ್ತು. ಇದಲ್ಲದೇ ಧರ್ಮರಾಜ್‌ ಎಂಬ ವ್ಯಕ್ತಿ ತೊದಲುತ್ತಾ ಮಾತನಾಡುತ್ತಿದ್ದ. ಇದೇ ತೊದಲುವಿಕೆಯನ್ನು ಇಟ್ಟಿಕೊಂಡು ವಿಘ್ನೇಶ್‌ ಆರ್‌ಸಿಬಿ ತಂಡಕ್ಕೆ ಹೋಲಿಕೆ ಮಾಡಿದ್ದನು. ಇದರಿಂದ ಕೋಪಗೊಂಡ ಧರ್ಮರಾಜ್‌, ಬಾಟಲ್‌ನಿಂದ ದಾಳಿ ನಡೆಸಿ ನಂತರ ಕ್ರಿಕೆಟ್‌ ಬ್ಯಾಟ್‌ನಿಂದಲೂ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಇದಾದ ಬಳಿಕ ಧರ್ಮರಾಜ್‌ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ ಬುಮ್ರಾ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ, ಯುವ ಆಟಗಾರರಿಗೂ ಬಿಸಿಸಿಐನಿಂದ ಸಿಕ್ತು ಚಾನ್ಸ್


ಸಿಡ್ಕೋ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸ್ಥಳೀಯರು ವಿಘ್ನೇಶ್ ಶವವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಘ್ನೇಶ್ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


ಟಿ20 ವಿಶ್ವಕಪ್​ಗಾಗಿ ಸಿದ್ಧರಾಗುತ್ತಿರುವ ರೋಹಿತ್-ವಿರಾಟ್:


ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಮುಂಬರುವ ಟಿ20 ವಿಶ್ವಕಪ್​ ತರಬೇತಿಯಲ್ಲಿದೆ. ಭಾರತವು ಇತ್ತೀಚೆಗೆ ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದೆ. ಮೆನ್ ಇನ್ ಬ್ಲೂ ಮೊದಲ ಪಂದ್ಯವನ್ನು ಗೆದ್ದರೆ, ಎರಡನೇ ಮುಖಾಮುಖಿಯಲ್ಲಿ 36 ರನ್‌ಗಳಿಂದ ಸೋತರು. ಆದರೆ ಇದಾದ ಬಳಿಕ ಭಾರತವು ತಮ್ಮ ಅಧಿಕೃತ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳನ್ನು ಎದುರಿಸಲಿದೆ. ಬಳಿಕ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತಮ್ಮ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.


ಇದನ್ನೂ ಓದಿ: Sudeep And Chris Gayle: ಯೂನಿವರ್ಸಲ್​ ಬಾಸ್​ ಜೊತೆ ಸ್ಯಾಂಡಲ್​ವುಡ್​​ ಬಾದ್​​​ಶಾ, ಕ್ರಿಕೆಟ್​ ದಿಗ್ಗಜರು vs​ ಭಾರತ ನಟರು!


ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (C), ಕೆಎಲ್ ರಾಹುಲ್ (WC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

Published by:shrikrishna bhat
First published: