ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ನಾಗ್ಪುರ (VCA) ಟೆಸ್ಟ್ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ, ಅವರು ತಮ್ಮ ಅತ್ಯುತ್ತಮ ನೃತ್ಯದ ಮೂಲಕ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. ನಾಗ್ಪುರ ಟೆಸ್ಟ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕೂಡ ವಿರಾಟ್‌ಗೆ ಬೆಂಬಲ ನೀಡಿದರು. ಜಡೇಜಾ ಕೂಡ ಕೊಹ್ಲಿ ಜೊತೆ ಭರ್ಜರಿ ಡ್ಯಾನ್ಸ್ ಮಡಿದರು. ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಡ್ಯಾನ್ಸ್ ವಿಡಿಯೋವನ್ನು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಭರ್ಜರಿ ಡ್ಯಾನ್ಸ್:
ವಿರಾಟ್ ಕೊಹ್ಲಿ ಮೈದಾನದಲ್ಲಿದ್ದಾಗ, ಅವರ ವಿಶೇಷ ಶೈಲಿಗಾಗಿ ಚರ್ಚೆಯ ವಿಷಯವಾಗಿರುತ್ತಾರೆ. ಮೈದಾನದಲ್ಲಿ ಕ್ಯಾಮರಾ ಮುಂದೆ ಸಂಭ್ರಮಿಸುವ ಅವರ ರೀತಿ ಯಾವಾಗಲೂ ಸಖತ್ ವೈರಲ್ ಆಗುತ್ತಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪಠಾಣ್ ಚಿತ್ರದ ಹಾಡಿನಲ್ಲಿ ನಟ ಶಾರುಖ್ ಖಾನ್ ಶೈಲಿಯಲ್ಲಿ ವಿರಾಟ್ ಡ್ಯಾನ್ಸ್ ಮಾಡಿರುವುದು ಕಂಡುಬಂದಿದೆ.
That’s Kohli 🥰… nothing Do in game But he give his moves So can Add A movement #jhum #ViratKohli𓃵 #Pathaan #INDvsAUS #BorderGavaskarTrophy2023 movement pic.twitter.com/5BuTrjstMp
— Sartaj 🇮🇳 (@i_amSartaj) February 11, 2023
ಇದನ್ನೂ ಓದಿ: Ravindra Jadeja: ಬಾಲ್ ಟ್ಯಾಂಪರಿಂಗ್ ವಿವಾದದ ಬೆನ್ನಲ್ಲೇ ಜಡೇಜಾಗೆ ಐಸಿಸಿಯಿಂದ ಬಿಗ್ ಶಾಕ್!
ಕೆಲ ಸಮಯ ಜಡೇಜಾ ಕೂಡ ಅದೇ ಸ್ಟೆಪ್ಸ್ ಮಾಡುತ್ತಿರುವುದು ಕಂಡು ಬಂದರೂ ಕೊಹ್ಲಿಯಂತೆ ಮೋಡಿ ತೋರಿಸಲು ಸಾಧ್ಯವಾಗಲಿಲ್ಲ. ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ಅಭಿಮಾನಿ, ಇದು ಕೊಹ್ಲಿ, ಪಂದ್ಯದಲ್ಲಿ ಏನನ್ನೂ ಮಾಡದೇ ಇರಬಹುದು ಆದರೆ ಅವರ ಶೈಲಿಯೊಂದಿಗೆ ಕೆಲವು ಕ್ಷಣ ಅಭಿಮಾನಿಗಳನ್ನು ರಂಜಿಸಿದರು ಎಂದು ಹೇಳಿದ್ದಾರೆ.
ಪಂದ್ಯದ ವೇಳೆ ಕೋಪಗೊಂಡ ರೋಹಿತ್:
ರೋಹಿತ್ ಶರ್ಮಾ ಅವರ ಮೂರನೇ ದಿನದ ಪಂದ್ಯದ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ, ಡಿಆರ್‌ಎಸ್ ಸಮಯದಲ್ಲಿ, ಅವರು ಕ್ಯಾಮರಾಮನ್ ಮೇಲೆ ಕೋಪಗೊಳ್ಳುವುದನ್ನು ಕಾಣಬಹುದು. ನನ್ನನ್ನು ಯಾಕೆ ತೋರಿಸುತ್ತೀಯಾ, ಅಲ್ಲಿ ತೋರಿಸು ಎಂದು ಅವರು ಹೇಳುವುದನ್ನು ಕೇಳಬಹುದು. ಅಂದರೆ ಪರದೆಯ ಮೇಲೆ ತೋರಿಸು, ಅಂಪೈರ್ ನಿರ್ಧಾರ ಏನು ಎಂದು ಹೇಳುವಂತೆ ಭಾಸವಾಗಿದೆ.
ಭಾರತ vs ಆಸ್ಟ್ರೇಲಿಯಾ 2 ನೇ ಟೆಸ್ಟ್:
ಭಾರತ ಮತ್ತು ಆಸ್ಟ್ರೇಲಿಯಾ 2ನೇ ಟೆಸ್ಟ್ ಪಂದ್ಯ ಇದೇ ಫೆ. 17ರಿಂದ ಆರಂಭವಾಗಲಿದೆ. 34 ವರ್ಷದ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಅಡಿಯಲ್ಲಿ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸಿದರು. ಫೀಲ್ಡಿಂಗ್ ವೇಳೆ ಅವರು 3 ಕ್ಯಾಚ್‌ಗಳನ್ನು ಪಡೆದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17 ರಿಂದ ದೆಹಲಿಯಲ್ಲಿ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ