ಆರ್‌ಆರ್‌ಆರ್ (RRR) ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ಹಾಡು 'ನಾಟು ನಾಟು' ( Natu Natu) ಎಲ್ಲರನ್ನೂ ಹುಚ್ಚೆಬ್ಬಿಸಿದೆ. ಸದ್ಯ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಟೀಂ ಇಂಡಿಯಾದ (Team India) ಮಾಜಿ ಆಟಗಾರರಿಗೂ ಈ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ 'ನಾಟು ನಾಟು' ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಈ ‘ನಾಟು ನಾಟು’ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮಾಡಿದ ಡ್ಯಾನ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಹ್ಲಿ ಭರ್ಜರಿ ಡ್ಯಾನ್ಸ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿಯ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಬಾರಿ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಇದ್ದಕ್ಕಿದ್ದ ಹಾಗೆ ‘ನಾಟು ನಾಟು’ ಹಾಡಿನ ಸ್ಟೆಪ್ಸ್ ಹಾಕುತ್ತಾ ಕ್ಯಾಮರಾ ಕಣ್ಣಿಗೆ ಸೆರೆಯಾದರು. ಸದ್ಯ ವಿರಾಟ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ವಿಡಿಯೋಗೆ ಲೈಕ್‌ಗಳ ಸುರಿಮಳೆಗೈಯುತ್ತಿದ್ದಾರೆ.
#KingKohli dancing to #NaatuNaatu #RRRWinsOscar #RRRMoive #ViratKohli #RamCharan #JrNTR#SSRajamouli #MMKeeravani #Oscars #Oscars95 pic.twitter.com/UsB7e5bfn5
— Avis Trilochana🪷 (@ClanofGriffin) March 17, 2023
ಕೊಹ್ಲಿ ಈ ರೀತಿ ಡ್ಯಾನ್ಸ್ ಮಾಡಿದ್ದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಇದೇ ರೀತಿಯಲ್ಲಿ ಅನೇಕ ಬಾರಿ ಮೈದಾನದಲ್ಲಿಯೇ ಭರ್ಜರಿ ಡ್ಯಾನ್ಸ್ ಮಾಡಿದ್ದರು. ವಿರಾಟ್ ಕೊಹ್ಲಿ ಸಲ್ಮಾನ್ ಖಾನ್ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದಂತೆ ಕಂಡುಬಂದಿದೆ. ನಂತರ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ವಿರಾಟ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: IND vs AUS: ಕೊಹ್ಲಿ ಕಣ್ಣು ಕೆಂಪಾಗುವಂತೆ ನಡೆದುಕೊಂಡ ಹಾರ್ದಿಕ್! ವಿರಾಟ್ ಮಾತು ಕಡೆಗಣಿಸಿ ತಪ್ಪು ಮಾಡಿದ್ರಾ ಪಾಂಡ್ಯ?
ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ ಪಾಕ್ ನಟಿ:
ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಕೂಡ ಈ ಹಾಡಿಗೆ ಮತ್ತು ಡ್ಯಾನ್ಸ್ ಗೆ ದೊಡ್ಡ ಫ್ಯಾನ್ ಅಂತ ಹೇಳಬಹುದು. ಇದು ನಿಮಗೆ ಹೇಗೆ ಗೊತ್ತು ಅಂತ ನೀವು ಕೇಳಬಹುದು. ಮದುವೆ ಸಮಾರಂಭವೊಂದರಲ್ಲಿ ನಟಿ ‘ನಾಟು ನಾಟು’ ಹಾಡಿಗೆ ಸಖತ್ತಾಗಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದೆ. ಚಿನ್ನದ ಮಿನುಗುವ ಶರಾರಾ ಸೆಟ್ ಧರಿಸಿದ ಹನಿಯಾ ‘ನಾಟು ನಾಟು’ ಟ್ರ್ಯಾಕ್ ಗೆ ಡ್ಯಾನ್ಸ್ ಮಾಡಿದ್ದಾರೆ. ಹುಡುಗ ಮತ್ತು ಅವಳು ಇಬ್ಬರು ಅದ್ಭುತವಾಗಿ ಕಾಣುತ್ತಿದ್ದಾರೆ ಮತ್ತು ಅವರ ಹುಕ್ ಸ್ಟೆಪ್ ನೋಡಿ ಹೇಗಿದೆ ಎಂದು ಹೇಳಿದ್ದಾರೆ. ತುಂಬಾ ಒಳ್ಳೆಯ ಡ್ಯಾನ್ಸ್ ಹನಿಯಾ ಎಂದು ಶೀರ್ಷಿಕೆಯನ್ನು ಬರೆದು ಈ ಕ್ಲಿಪ್ ಅನ್ನು ‘ದಿ ವೆಡ್ಡಿಂಗ್ ಬ್ರಿಡ್ಜ್’ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ