ಆಂಗ್ಲರ ನಾಡಲ್ಲಿ ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

news18
Updated:August 21, 2018, 3:00 PM IST
ಆಂಗ್ಲರ ನಾಡಲ್ಲಿ ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ
news18
Updated: August 21, 2018, 3:00 PM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​ಹ್ಯಾಮ್​​​ನ ಟ್ರೆಂಟ್ ಬ್ರಿಡ್ಜ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಮೂರು ದಿನವೂ ಪ್ರಾಬಲ್ಯ ಮೆರೆದಿದೆ. ಆಂಗ್ಲರಿಗೆ ಗೆಲ್ಲಲು 522 ರನ್​​ ಬೃಹತ್ ಸವಾಲು ನೀಡಿರುವ ಭಾರತ, 4ನೇ ದಿನವಾದ ಇಂದು ನಿಯಂತ್ರಣ ಬಿಟ್ಟುಕೊಡದೆ ಇದ್ದಲ್ಲಿ ಗೆಲುವು ಕೊಹ್ಲಿ ಪಡೆಗೆ ನಿಶ್ಚಿತ. ಈ ಮಧ್ಯೆ ವಿರಾಟ್ ಕೊಹ್ಲಿ ಅವರು ಮೂರನೇ ದಿನವಾದ ನಿನ್ನೆ ಟೆಸ್ಟ್ ಕ್ರಿಕೆಟ್​ನಲ್ಲಿ 23ನೇ ಶತಕ ಸಿಡಿಸುಸುವ ಜೊತೆಗೆ ನಾಯಕನಾಗಿಯೂ ಅತ್ಯದ್ಭುತ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್  ನೆಲದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಭಾರತೀಯ ನಾಯಕ ಎಂಬ ಸಾಧನೆ ಮಾಡಿದ್ದಾರೆ. ಈ ಹಿಂದೆ 1990ರಲ್ಲಿ ಮೊಹಮ್ಮದ್ ಅಜರುದ್ಧೀನ್ ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿಯಲ್ಲಿ 426 ರನ್ ಸಿಡಿಸಿದ್ದರು. ಸದ್ಯ ಕೊಹ್ಲಿ ಇದೀಗ 3ನೇ ಟೆಸ್ಟ್​ನಲ್ಲಿ 440 ರನ್ ಕಲೆಹಾಕಿ ಅಜರುದ್ದೀನ್ ಅವರ ದಾಖಲೆ ಮುರಿದು ಸಾಧನೆ ಮಾಡಿದ್ದಾರೆ.

197 ಎಸೆತಗಳಲ್ಲಿ 10 ಬೌಂಡರಿ ಜೊತೆ ವಿರಾಟ್ ಕೊಹ್ಲಿ 103 ರನ್ ಸಿಡಿಸಿದ್ದರು. ಈ ಮೂಲಕ ಸರಣಿಯಲ್ಲಿ ಕೊಹ್ಲಿ ಎರಡನೇ ಶತಕ ದಾಖಲಿಸಿದರು.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ