Virat Kohli: ಕ್ರಿಕೆಟ್​ ಲೋಕಕ್ಕೆ ಕಿಂಗ್​ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ! ಹೇಗಿತ್ತು ವಿರಾಟ ದರ್ಶನ?

ಭಾರತ ತಂಡ ಮಾಜಿ ನಾಯಕ, ಅಭಿಮಾನಿಗಳ ಪಾಲಿನ ಕಿಂಗ್​ ಕೊಹ್ಲಿ ಇಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ 14 ವರ್ಷಗಳು ಕಳೆದಿವೆ. 2008ರಲ್ಲಿ ಇದೇ ದಿನ ಭಾರತ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಟೀಂ ಇಂಡಿಯಾದ ಮಾಜಿ ನಾಯಕ, ವಿರಾಟ್ ಕೊಹ್ಲಿ (Virat Kohli) ಭಾರತೀಯ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಎಂದು ಹೆಸರುವಾಸಿಯಾಗಿದ್ದಾರೆ, ಭಾರತ ತಂಡಕ್ಕಾಗಿ ಹಲವು ಸರಣಿಗಳನ್ನು ಏಕಾಂಗಿಯಾಗಿ ಗೆದ್ದಿರುವ ಆಟಗಾರ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ಜೀವನದಲ್ಲಿ ಇಂದು ಮಹತ್ವದ ದಿನ. ಏಕೆಂದರೆ ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇಂದಿಗೆ 14 ವರ್ಷಗಳನ್ನು ಪೂರೈಸಿದ್ದಾರೆ. 2008ರಲ್ಲಿ ಇದೇ ದಿನ ಭಾರತ ಏಕದಿನ ಕ್ರಿಕೆಟ್‌ಗೆ (ODI Cricket) ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅಬ್ಬರಿಸುತ್ತಿರು ಕಿಂಗ್​ ಸಾಲು ಸಾಲು ದಾಖಲೆಗಳನ್ನು ಅಳಿಸಿ ಹಾಕುತ್ತಿದ್ದಾರೆ. ಹಾಗಿದ್ದರೆ ಕೊಹ್ಲಿಯ 14 ವರ್ಷಗಳ ಈ ಕ್ರಿಕೆಟ್​ ಜೀವನದ ಹಾದಿ ಯಾವ ರೀತಿ ಇತ್ತು ಎಂದು ಒಮ್ಮೆ ನೋಡೋಣ ಬನ್ನಿ.

ಶ್ರೀಲಂಕಾ ಎದುರು ಚೊಚ್ಚಲ ಪಂದ್ಯ:

ಆಗಸ್ಟ್ 18, 2008 ರಂದು, ವಿರಾಟ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಆ ಸಮಯದಲ್ಲಿ ಅವರಿಗೆ 19 ವರ್ಷ. ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆದ ಆ ಪಂದ್ಯದಲ್ಲಿ, ಆರಂಭಿಕ ವೀರೇಂದ್ರ ಸೆಹ್ವಾಗ್ ಅನುಪಸ್ಥಿತಿಯಲ್ಲಿ ವಿರಾಟ್ ಗೌತಮ್ ಗಂಭೀರ್​ ಜೊತೆ ಓಪನರ್ ಆಗಿ ಕಣಕ್ಕಿಳಿದರು. ಆ ಪಂದ್ಯದಲ್ಲಿ ವಿರಾಟ್ 12 ರನ್ ಗಳಿಸಿ ಔಟಾದರು. ಆ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ ಅಂದು ಭಾರತೀಯ ಕ್ರಿಕೆಟ್‌ನ ದಿಗಂತದಲ್ಲಿ ವಿರಾಟ್ ಕೊಹ್ಲಿ ಎಂಬ ಸ್ಟಾರ್ ಉದಯಿಸಿದ್ದರು.


View this post on Instagram


A post shared by Virat Kohli (@virat.kohli)


ದಾಖಲೆಗಳ ಸರದಾರನಾದ ಕಿಂಗ್​:

ಟೀಂ ಇಂಡಿಯಾದ ಈ ಅನುಭವಿ ಬ್ಯಾಟ್ಸ್‌ಮನ್ ಇದುವರೆಗೆ ಏಕದಿನ, ಟೆಸ್ಟ್ ಮತ್ತು ಟಿ20 ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನದಲ್ಲಿ 10 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದ್ದಾರೆ. ಅವರು ಟೆಸ್ಟ್‌ನಲ್ಲಿ 8000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಏಕದಿನದಲ್ಲಿ 43 ಮತ್ತು ಟೆಸ್ಟ್‌ನಲ್ಲಿ 27 ಶತಕಗಳ ಹೆಸರಿನಲ್ಲಿ 70 ಶತಕಗಳನ್ನು ಹೊಂದಿದ್ದಾರೆ. ಅಂತಾರಾಷ್ಟ್ರೀಯ ಶತಕಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ನಂತರ ವಿರಾಟ್ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: India vs Zimbabwe 1st ODI: ಭರ್ಜರಿ ಕಂಬ್ಯಾಕ್​ ಮಾಡಿದ ದೀಪಕ್ ಚಹಾರ್, ಟೀಂ ಇಂಡಿಯಾ ದಾಳಿಗೆ ಜಿಂಬಾಬ್ವೆ ತತ್ತರ

ಅಲ್ಲದೇ ಸಾಲು ಸಾಲು ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ ಸಚಿನ್ ಅವರ ದಾಖಲೆಯನ್ನು ಯಾರಾದರೂ ಮುರಿದಲ್ಲಿ ಅದು ಕೊಹ್ಲಿ ಮಾತ್ರ ಎಂಬಷ್ಟರ ಮಟ್ಟಿಗೆ ಅವರ ಬ್ಯಾಟ್ ಅಬ್ಬರಿಸುತ್ತಿತ್ತು. ವಿರಾಟ್ ಕೊಹ್ಲಿ ಈ 14 ವರ್ಷಗಳಲ್ಲಿ ಮೂರು ಸ್ವರೂಪಗಳಲ್ಲಿ ಒಟ್ಟು 23,726 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಜೊತೆಗೆ 14 ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

2016ರಲ್ಲಿ ಟೀಂ ಇಂಡಿಯಾದ ನಾಯಕ: 

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2016 ರ ಕೊನೆಯಲ್ಲಿ ನಾಯಕತ್ವವನ್ನು ತೊರೆದರು. ಇದಾದ ಬಳಿಕ ಬಿಸಿಸಿಐ ಭಾರತ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ನೀಡಿತು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾದಂತಹ ತಂಡಗಳನ್ನು ತವರು ದೇಶದಲ್ಲಿ ಮಾತ್ರವಲ್ಲದೆ ಅವರದೇ ದೇಶದಲ್ಲೂ ಸೋಲಿಸಿದ ಸಾಧನೆ ಮಾಡಿದರು ವಿರಾಟ್. ವಿರಾಟ್ ನಾಯಕತ್ವದಲ್ಲಿ, ಭಾರತ ತಂಡವು 2018 ರಿಂದ 2022ರ ವರೆಗೆ ಸತತ ಆರು ವರ್ಷಗಳ ಕಾಲ ಟೆಸ್ಟ್‌ನಲ್ಲಿ ನಂಬರ್ ಒನ್ ಆಗಿ ಉಳಿದಿತ್ತು.
Published by:shrikrishna bhat
First published: