ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನ ಜೊತೆಗೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅಂತ ಯಾವ ಅಭಿಮಾನಿಗೆ ಆಸೆ ಇರುವುದಿಲ್ಲ ಹೇಳಿ? ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರನೊಂದಿಗೆ ನಿಂತು ಫೋಟೋ ಅಥವಾ ಸೆಲ್ಫಿ ತೆಗೆಸಿಕೊಳ್ಳಬೇಕು ಮತ್ತು ಅವರ ಟಿ-ಶರ್ಟ್ ಮೇಲೆ ಅಥವಾ ಕ್ಯಾಪ್ ಮೇಲೆ ನೆಚ್ಚಿನ ಆಟಗಾರ ಅವರಿಗಾಗಿ ಒಂದು ಪ್ರೀತಿಯ ಸಂದೇಶವನ್ನು ಬರೆದು ಅದಕ್ಕೆ ಅವರ ಒಂದು ಆಟೋಗ್ರಾಫ್ ನೀಡಬೇಕು ಅಂತ ಆಸೆ ಇದ್ದೇ ಇರುತ್ತದೆ. ನೆಚ್ಚಿನ ಕ್ರಿಕೆಟ್ ಆಟಗಾರರನ್ನು ನೋಡುವುದಕ್ಕೆ ಅಭಿಮಾನಿಗಳು ಎಷ್ಟೋ ಸಾರಿ ಕ್ರಿಕೆಟ್ ಮೈದಾನಕ್ಕೆ ಫುಲ್ ಸೆಕ್ಯೂರಿಟಿ ಇದ್ದರೂ ಸಹ ಅದನ್ನೆಲ್ಲಾ ಲೆಕ್ಕಿಸದೆ ತಮ್ಮ ನೆಚ್ಚಿನ ಆಟಗಾರನನ್ನು ಭೇಟಿಯಾಗಲು ಆಟದ ಮೈದಾನಕ್ಕೆ ನುಗ್ಗುವುದನ್ನು ನೋಡಿರುತ್ತೇವೆ.
ಆದರೆ ಇಲ್ಲಿ ನಡೆದಿರುವುದು ಸ್ವಲ್ಪ ವಿಭಿನ್ನವಾದದ್ದು. ಏಕೆಂದರೆ ಒಬ್ಬ ಕ್ರಿಕೆಟ್ ಆಟಗಾರನ ಅಭಿಮಾನಿ ಜೊತೆಗೆ ಇನ್ನೊಬ್ಬ ಕ್ರಿಕೆಟ್ ಆಟಗಾರ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ನೋಡಿ. ಯಾರಪ್ಪಾ ಆ ಕ್ರಿಕೆಟ್ ಆಟಗಾರ ಇನ್ನೊಬ್ಬ ಆಟಗಾರನ ದೊಡ್ಡ ಅಭಿಮಾನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡದ್ದು ಅಂತ ನಿಮಗೆ ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ.
ಸಚಿನ್ ಅಭಿಮಾನಿ ಜೊತೆ ಸೆಲ್ಫಿ :
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ ಸುಧೀರ್ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕೊಹ್ಲಿ ಪ್ರಸ್ತುತ ಮುಂಬರಲಿರುವ ಐಪಿಎಲ್ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
Virat Kohli took a selfie with Sachin fan "Sudhir".
The gesture of Sudhir is respect. pic.twitter.com/sCqIcp4tZM
— Johns. (@CricCrazyJohns) March 20, 2023
ಇದನ್ನೂ ಓದಿ: IPL 2023: ಆರ್ಸಿಬಿ ಈ ಬಾರಿ ಟಾಪ್-3ಗೂ ಬರಲ್ಲ! ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಆಟಗಾರ
ಆಸೀಸ್ ವಿರುದ್ಧ ಸರಣಿ ಕೈ ಚೆಲ್ಲಿದ ಭಾರತ:
ಮುಂಬೈನಲ್ಲಿ ನಡೆದ ಮೊದಲ ಪಂದ್ಯವನ್ನು ಗೆದ್ದ ಮೆನ್ ಇನ್ ಬ್ಲೂ ತಂಡವು ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳಿಂದ ನಿರಾಶಾದಾಯಕ ಸೋಲನ್ನು ಅನುಭವಿಸಿತು. ಅಲ್ಲದೇ ಆಸೀಸ್ ವಿರುದ್ಧದ 3ನೇ ಪಂದ್ಯವನ್ನು ಸೊಲುವ ಮೂಲಕ ಸರಣಿಯನ್ನು ಕೈಚೆಲ್ಲುವ ಮೂಲಕ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿತು.
ಐಪಿಎಲ್ಗಾಗಿ ಭರ್ಜರಿ ಸಿದ್ಧತೆ:
ಇನ್ನು, ವಿರಾಟ್ ಕೊಹ್ಲಿ ಐಪಿಎಲ್ ಆರಂಭಕ್ಕೂ ಮುನ್ನ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಅವರು ವಿರಾಟ್ ಕೊಹ್ಲಿಗೆ ಹೇರ್ಸ್ಟೈಲ್ ಮಾಡಿದ್ದು, ಸಖತ್ ಆಗಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೊಹ್ಲಿ ಹಂಚಿಕೊಂಡ ಫೋಟೋ ನೋಡಿ ಇದೀಗ ಅವರ ಲುಕ್ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಏಷ್ಯಾಕಪ್‌ನಿಂದ ಅವರ ಬ್ಯಾಟ್‌ನಿಂದ ನಿರಂತರ ರನ್‌ಗಳು ಬರುತ್ತಿವೆ. ಎಲ್ಲಾ ಸ್ವರೂಪಗಳನ್ನು ಒಳಗೊಂಡಂತೆ, ಅವರು ಏಷ್ಯಾ ಕಪ್ ಬಳಿಕ ಐದು ಶತಕಗಳನ್ನು ಗಳಿಸಿದ್ದಾರೆ. ಚೆನ್ನೈ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗಲೂ ವಿರಾಟ್ ಈ ಫಾರ್ಮ್ ಅನ್ನು ಕಾಯ್ದುಕೊಳ್ಳಬೇಕು ಎಂಬುದು ಅಭಿಮಾನಿಗಳ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ